50ಕ್ಕೂ ಹೆಚ್ಚು ಜನರ ಜೊತೆ ಲೈಂಗಿಕ ಸಂಪರ್ಕ, ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲು ಯತ್ನಿಸಿದ ವ್ಯಕ್ತಿಯ ಬಂಧನ
ಎಚ್‌ಐವಿ ಪಾಸಿಟಿವ್ ಎಂದು ತಿಳಿದಿದ್ದರೂ ಕೂಡ 50ಕ್ಕೂ ಹೆಚ್ಚು ಜನರ ಜೊತೆ ಸೆಕ್ಸ್ ನಡೆಸಿದ್ದು, ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲೆಂದು ಈ ರೀತಿ ಮಾಡಿದ್ದೇನೆ ಎಂದು ಆರೋಪಿ ತನಿಖೆಯ ವೇಳೆ ಹೇಳಿದ್ದಾನೆ. ಇದೀಗ ಆರೋಪಿಗೆ 30 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಲೈಂಗಿಕ ಸಂಪರ್ಕದ ಮೂಲಕ ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲು ಯತ್ನಿಸಿದ್ದಕ್ಕಾಗಿ ಅಮೆರಿಕದ ಅಲೆಕ್ಸಾಂಡರ್ ಲೂಯಿ(34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೇ ಆರೋಪಿಗೆ 30 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಸಿಬಿಎಸ್ ನ್ಯೂಸ್ ಪ್ರಕಾರ , ಅಲೆಕ್ಸಾಂಡರ್ ಲೂಯಿ ಅವರು 16 ವರ್ಷ ವಯಸ್ಸಿನವರು ಸೇರಿದಂತೆ 30 ರಿಂದ 50 ವಿಭಿನ್ನ ಪುರುಷರು ಮತ್ತು ಅಪ್ರಾಪ್ತ ವಯಸ್ಸಿನ ಹುಡುಗರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.
ಎಚ್‌ಐವಿ ಪಾಸಿಟಿವ್ ಎಂದು ತಿಳಿದಿದ್ದರೂ ಕೂಡ 50ಕ್ಕೂ ಹೆಚ್ಚು ಜನರ ಜೊತೆ ಸೆಕ್ಸ್ ನಡೆಸಿದ್ದು, ಉದ್ದೇಶಪೂರ್ವಕವಾಗಿ ಎಚ್‌ಐವಿ ಹರಡಲೆಂದು ಈ ರೀತಿ ಮಾಡಿದ್ದೇನೆ ಎಂದು ಆರೋಪಿ ತನಿಖೆಯ ವೇಳೆ ಹೇಳಿದ್ದಾನೆ. ಕಳೆದ ಆಗಸ್ಟ್‌ನಲ್ಲಿ ಲೂಯಿ 15 ವರ್ಷ ವಯಸ್ಸಿನ ಹುಡುಗನೊಂದಿಗೆ ಆನ್‌ಲೈನ್ ಲೈಂಗಿಕ ಸಂಭಾಷಣೆಯನ್ನು ಪ್ರಾರಂಭಿಸಿದ ಕಾರಣಕ್ಕಾಗಿ ಆತನ ಮೇಲೆ ಕೇಸು ದಾಖಲಾಗಿತ್ತು. ಸೆಪ್ಟೆಂಬರ್ 2023 ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಲೈಂಗಿ ದೌರ್ಜನ್ಯ ಆರೋಪದ ಮೇಲೆ ಲೂಯಿ ಅವರನ್ನು ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದರು.
ಇದನ್ನು ಓದಿ: ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು ಮದುವೆಯಾದ 70ರ ವೃದ್ಧನ ಬಂಧನ
ತನಿಖೆ ಮುಂದುವರಿಯುತ್ತಿದ್ದಂತೆ ಲೂಯಿಗೆ ಎಚ್‌ಐವಿ ಪಾಸಿಟಿವ್ ಇರುವುದು ತಿಳಿದುಬಂದಿದೆ. ಇದಲ್ಲದೇ HIV ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಕೂಡ ಪೊಲೀಸರು ಬಹಿರಂಗಪಡಿಸಿದ್ದಾರೆ. ಎಚ್‌ಐವಿ ಹರಡಲು ಪುರುಷರು ಮತ್ತು ಹದಿಹರೆಯದ ಹುಡುಗರೊಂದಿಗೆ ಉದ್ದೇಶಪೂರ್ವಕವಾಗಿ ಲೈಂಗಿಕ ಸಂಪರ್ಕವನ್ನು ಹೊಂದಿದ್ದ. ಆತ 16 ವರ್ಷ ವಯಸ್ಸಿನವರು ಸೇರಿದಂತೆ 30-50 ವಿವಿಧ ಪುರುಷರು ಮತ್ತು ಹುಡುಗರೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ