AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಥ್ರೋಪಿಕ್​ನಿಂದ ಉಚಿತ ಎಐ ಕೋರ್ಸ್​ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ?

Anthropic starts several free AI courses online: ಕ್ಲಾಡ್​ನಂತಹ ಎಐ ಉತ್ಪನ್ನಗಳ ಮೂಲಕ ಐಟಿ ಉದ್ಯಮಕ್ಕೆ ಶಾಕ್ ಕೊಟ್ಟಿರುವ ಆಂಥ್ರೋಪಿಕ್ ಸಂಸ್ಥೆ ಆನ್​ಲೈನ್​ನಲ್ಲಿ ಉಚಿತ ಎಐ ಕೋರ್ಸ್​ಗಳನ್ನು ಆರಂಭಿಸಿದೆ. ಎಐ ತಂತ್ರಜ್ಞಾನಕ್ಕೆ ಹೊಸಬರಾಗಿರುವವರಿಂದ ಹಿಡಿದು ಎಐ ಟೂಲ್ ಅಭಿವೃದ್ಧಿಪಡಿಸುವ ವೃತ್ತಿಪರರವರೆಗೂ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಈ ಕೋರ್ಸ್​ಗಳನ್ನು ಹೇಗೆ ಪಡೆಯುವುದು ಎನ್ನುವ ವಿವರ ಇಲ್ಲಿದೆ.

ಆಂಥ್ರೋಪಿಕ್​ನಿಂದ ಉಚಿತ ಎಐ ಕೋರ್ಸ್​ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ?
ಆಂಥ್ರೋಪಿಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2026 | 1:30 PM

Share

ಬೆಂಗಳೂರು, ಮಾರ್ಚ್ 5: ಆಂಥ್ರೋಪಿಕ್ (Anthropic) ಕಂಪನಿಯ ಎಐ ಟೆಕ್ನಾಲಜಿ ಶಕ್ತ ಉತ್ಪನ್ನಗಳು ದೈನಂದಿನ ಕೆಲಸಗಳನ್ನು ಸಲೀಸುಗೊಳಿಸಲು ಬಹಳ ನೆರವಾಗುತ್ತವೆ. ಅದರ ಕ್ಲಾಡ್​ನಂತಹ ಎಐ ಟೂಲ್​ಗಳು ಹೆಚ್ಚೆಚ್ಚು ಕೆಲಸಗಳನ್ನು ಆಟೊಮೇಟ್​ಗೊಳಿಸಬಲ್ಲುವು. ಆದರೆ, ಈ ಟೂಲ್​ಗಳನ್ನು ಹೇಗೆ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು ಅಷ್ಟೇ. ಸಾಫ್ಟ್​ವೇರ್​ಗಳು ಬಹಳಷ್ಟು ಕೆಲಸಗಳನ್ನು ಆಟೊಮೇಟ್ ಮಾಡಿದ್ದವು. ಆದರೆ, ಸಾಫ್ಟ್​ವೇರ್ ಅನ್ನು ಹೇಗೆ ಬಳಸಬೇಕೆಂದು ಎನ್ನುವ ಜ್ಞಾನ ಇರಬೇಕು. ಹಾಗೆಯೇ, ಎಐ ಟೂಲ್​ಗಳ ಬಳಕೆ ಬಗ್ಗೆ ಜ್ಞಾನ ಅಗತ್ಯ.

ಇದನ್ನು ಮನಗಂಡೇ ಆಂಥ್ರೋಪಿಕ್ ಸಂಸ್ಥೆ ಅಕಾಡೆಮಿ ತೆರೆದಿದೆ. ಆಂಥ್ರೋಪಿಕ್ ಅಕಾಡೆಮಿಯಲ್ಲಿ ಆನ್​ಲೈನ್​ನಲ್ಲಿ ಉಚಿತವಾಗಿ ಎಐ ಕೋರ್ಸ್​ಗಳನ್ನು ಆಫರ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ವೃತ್ತಿಪರರು, ಡೆವಲಪರ್​ಗಳು ಹೀಗೆ ಎಲ್ಲಾ ವರ್ಗದ ಜನರಿಗೆ ವಿನ್ಯಾಸ ಮಾಡಲಾದ ಕೋರ್ಸ್​ಗಳಿವೆ. ಕ್ಲಾಡ್ ಎಐ ಮಾಡಲ್​ಗಳನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಈ ಕೋರ್ಸ್​ಗಳಲ್ಲಿ ಕಲಿಸಲಾಗುತ್ತದೆ.

ಆಂಥ್ರೋಪಿಕ್ ಸಂಸ್ಥೆ ಹಲವು ಕೋರ್ಸ್​ಗಳನ್ನು ಆರಂಭಿಸಿದೆ. ಸ್ಕಿಲ್​ಜಾರ್ ಪ್ಲಾಟ್​ಫಾರ್ಮ್​ನಲ್ಲಿ ಇವು ಉಚಿತವಾಗಿ ಲಭ್ಯ ಇವೆ. ಕೋರ್ಸೆರಾ ಮೂಲಕ ಇನ್ನಷ್ಟು ಪ್ರೀಮಿಯಮ್ ಕಂಟೆಂಟ್ ಲಭ್ಯ ಇರುತ್ತದೆ. ಕೋರ್ಸ್ ಕಲಿತು ಮುಗಿಸಿದರೆ ಸರ್ಟಿಫಿಕೇಶನ್ ಕೂಡ ನೀಡಲಾಗುತ್ತದೆ.

ಇದನ್ನೂ ಓದಿ: ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು?

ಎಐನಲ್ಲಿ ಏನೂ ಗೊತ್ತಿಲ್ಲದ ಬಿಗನರ್ಸ್​ನಿಂದ ಹಿಡಿದು, ಎಐ ಆ್ಯಪ್​ಗಳನ್ನು ತಯಾರಿಸುವ ವೃತ್ತಿಪರರವರೆಗೆ ಎಲ್ಲರಿಗೂ ಸೂಕ್ತವಾಗುವ ಎಐ ಸ್ಕಿಲ್​ಗಳನ್ನು ಈ ಕೋರ್ಸ್​ಗಳಲ್ಲಿ ಕಲಿಯಬಹುದು.

ಆಂಥ್ರೋಪಿಕ್ ಆಫರ್ ಮಾಡಿರುವ ಎಐ ಕೋರ್ಸ್​ಗಳಿವು…

  • ಕ್ಲಾಡ್ ಕೋಡ್ ಇನ್ ಆ್ಯಕ್ಷನ್
  • ಕ್ಲಾಡ್ 101
  • ಎಐ ಫ್ಲುಯೆನ್ಸಿ: ಫ್ರೇಮ್​ವರ್ಕ್ ಅಂಡ್ ಫೌಂಡೇಶನ್ಸ್
  • ಬ್ಯುಲ್ಡಿಂಗ್ ವಿತ್ ದಿ ಕ್ಲಾಡ್ ಎಪಿಐ
  • ಇಂಟ್ರೊಡಕ್ಷನ್ ಟು ಮಾಡಲ್ ಕಾಂಟೆಕ್ಸ್ಟ್ ಪ್ರೋಟೋಕಾಲ್
  • ಎಐ ಫ್ಲುಯೆನ್ಸಿ ಫಾರ್ ಎಜುಕೇಟರ್ಸ್
  • ಎಐ ಫ್ಲುಯೆನ್ಸಿ ಫಾರ್ ಸ್ಟುಡೆಂಟ್ಸ್
  • ಮಾಡಲ್ ಕಾಂಟೆಕ್ಸ್ಟ್ ಪ್ರೋಟೋಕಾಲ್: ಅಡ್ವಾನ್ಸ್ಡ್ ಟಾಪಿಕ್ಸ್
  • ಕ್ಲಾಡ್ ವಿತ್ ಅಮೇಜಾನ್ ಬೆಡ್​ರಾಕ್
  • ಕ್ಲಾಡ್ ವಿತ್ ಗೂಗಲ್ ಕ್ಲೌಡ್ಸ್ ವೆರ್ಟೆಕ್ಸ್ ಎಐ
  • ಟೀಚಿಂಗ್ ಎಐ ಫ್ಲುಯೆನ್ಸಿ
  • ಎಐ ಫ್ಲುಯೆನ್ಸಿ ಫಾರ್ ನಾನ್​ಪ್ರಾಫಿಟ್ಸ್
  • ಇನ್​ಟ್ರೊಡಕ್ಷನ್ ಟು ಏಜೆಂಟ್ ಸ್ಕಿಲ್ಸ್

ಇದನ್ನೂ ಓದಿ: 25,000 ರೂನಷ್ಟು ಕಡಿಮೆ ಸಂಬಳ ಇದ್ದರೆ ಹಣದ ನಿರ್ವಹಣೆ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಕೋರ್ಸ್ ಆರಂಭಿಸುವುದು ಹೇಗೆ?

  • ಆಂಥ್ರೋಪಿಕ್ ಕೋರ್ಸ್​ಗಳು ಈ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯ ಇವೆ: anthropic.skilljar.com/
  • ಇಲ್ಲಿ ನೊಂದಣಿ ಮಾಡಿಕೊಂಡು ಸೈನ್ ಇನ್ ಆಗಬೇಕು.
  • ಸೈನಪ್ ಆಗಲು ಇಮೇಲ್ ಇತ್ಯಾದಿಯನ್ನು ಕೇಳಲಾಗುತ್ತದೆ.
  • ಸೈನ್ ಆದ ಬಳಿಕ ನಿಮಗೆ ಬೇಕಾದ ಕೋರ್ಸ್ ಆಯ್ದುಕೊಂಡು ಕಲಿಯಲು ಆರಂಭಿಸಬಹುದು.

ಈ ಎಲ್ಲಾ ಕೋರ್ಸ್​ಗಳು ಉಚಿತವಾಗಿ ಲಭ್ಯ ಇರುತ್ತವೆ. ಪ್ರೀಮಿಯಮ್ ಸಬ್​ಸ್ರಿಪ್ಷನ್​ನ ಅಗತ್ಯ ಇರುವುದಿಲ್ಲ. ಕಲಿಕೆ ಮುಗಿದ ಬಳಿಕ ಡಿಜಿಟಲ್ ಸರ್ಟಿಫಿಕೇಟ್ ಸಿಗುತ್ತದೆ. ಇದನ್ನು ಲಿಂಕ್ಡ್​ಇನ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಹಂಚಿಕೊಳ್ಳಬಹುದು. ಈ ಮೂಲಕ ನಿಮಗೆ ಎಐ ಜ್ಞಾನವಿರುವುದನ್ನು ತೋರ್ಪಡಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ