ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು ಮದುವೆಯಾದ 70ರ ವೃದ್ಧನ ಬಂಧನ

ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕಿಯ ತಂದೆ ಆಕೆಯನ್ನು ವೃದ್ಧನಿಗೆ ಮದುವೆ ಮಾಡಿಸಿದ್ದಾನೆ. ಈ ಮಾಹಿತಿಯನ್ನು ಪಡೆದ ಕಾನೂನು ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವರ ಮತ್ತು ಬಾಲಕಿ ತಂದೆ ಇಬ್ಬರನ್ನೂ ಬಂಧಿಸಿದ್ದಾರೆ.

ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು ಮದುವೆಯಾದ 70ರ ವೃದ್ಧನ ಬಂಧನ
13 ವರ್ಷದ ಬಾಲಕಿಯನ್ನು ಮದುವೆಯಾದ 70ರ ವೃದ್ಧ
Follow us
|

Updated on: May 07, 2024 | 6:05 PM

ಪಾಕಿಸ್ತಾನ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ, 13 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ 70 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ, ಇದು ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ ಎಂದು ARY ನ್ಯೂಸ್ ವರದಿ ಮಾಡಿದೆ. ದೇಶದ ಪ್ರಸ್ತುತ ಶಾಸನದ ಅಡಿಯಲ್ಲಿ, 1929 ರ ವಿವಾಹ ತಡೆ ಕಾಯಿದೆಯು ಕನಿಷ್ಟ ಮದುವೆಯ ವಯಸ್ಸನ್ನು ಹುಡುಗಿಯರಿಗೆ 16 ಮತ್ತು ಹುಡುಗರಿಗೆ 18 ಎಂದು ವ್ಯಾಖ್ಯಾನಿಸಲಾಗಿದೆ.

ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕಿಯ ತಂದೆ ಆಕೆಯನ್ನು ವೃದ್ಧನಿಗೆ ಮದುವೆ ಮಾಡಿಸಿದ್ದಾನೆ. ಈ ಮಾಹಿತಿಯನ್ನು ಪಡೆದ ಕಾನೂನು ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವರ ಮತ್ತು ಬಾಲಕಿ ತಂದೆ ಇಬ್ಬರನ್ನೂ ಬಂಧಿಸಿದ್ದಾರೆ.

ಇದನ್ನೂ ಓದಿ: ಕುಟುಂಬ ನಿರ್ವಹಣೆಗಾಗಿ ಬೀದಿ ಬದಿಯಲ್ಲಿ ಎಗ್‌ರೋಲ್‌ ಮಾರಾಟ ಮಾಡುತ್ತಿದ್ದ ಬಾಲಕ ಸಹಾಯಕ್ಕೆ ಧಾವಿಸಿದ ಆನಂದ್ ಮಹೀಂದ್ರಾ

ಏತನ್ಮಧ್ಯೆ, ಸ್ಥಳೀಯ ಆಸ್ಪತ್ರೆಯಲ್ಲಿ, ಅಪ್ರಾಪ್ತ ವಧುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ARY ನ್ಯೂಸ್ ವರದಿ ಮಾಡಿದೆ. ಆಘಾತಕಾರಿ ಘಟನೆಯು ಬಾಲ್ಯ ವಿವಾಹದ ನಿರಂತರ ಸವಾಲನ್ನು ಎತ್ತಿ ತೋರಿಸುತ್ತದೆ, ಇದು ಪಾಕಿಸ್ತಾನದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ ದೇಶದ ಯುವತಿಯರ ಯೋಗಕ್ಷೇಮಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ