AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrological Meaning: ದೇವಸ್ಥಾನಕ್ಕೆ ಹೋದಾಗ ಅಲ್ಲಿ ಚಪ್ಪಲಿ ಕಳೆದುಹೋಗುವುದು ಶುಭವೇ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋಗುವುದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಭ ಸಂಕೇತ. ಇದು ಶನಿ ಗ್ರಹದೊಂದಿಗೆ ಸಂಬಂಧ ಹೊಂದಿದ್ದು, ಶನಿ ದೋಷ ನಿವಾರಣೆಗೆ ಸಹಕಾರಿ ಎಂದು ನಂಬಲಾಗಿದೆ. ಪಾದರಕ್ಷೆಗಳ ಮೂಲಕ ನಕಾರಾತ್ಮಕ ಶಕ್ತಿಗಳು ದೂರವಾಗಿ ಹೊಸ ಆರಂಭಕ್ಕೆ ದಾರಿ ಮಾಡಿಕೊಡುತ್ತದೆ. ವಿಶೇಷವಾಗಿ ಶನಿವಾರದಂದು ಇದು ಸಂಭವಿಸಿದರೆ, ಶನಿಯ ಕೆಟ್ಟ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ.

Astrological Meaning: ದೇವಸ್ಥಾನಕ್ಕೆ ಹೋದಾಗ ಅಲ್ಲಿ ಚಪ್ಪಲಿ ಕಳೆದುಹೋಗುವುದು ಶುಭವೇ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ಚಪ್ಪಲಿ ಕಳೆದು ಹೋಗುವುದು
ಅಕ್ಷತಾ ವರ್ಕಾಡಿ
|

Updated on: Mar 05, 2026 | 10:32 AM

Share

ದೇವಸ್ಥಾನಕ್ಕೆ ಹೋದಾಗ ಅಲ್ಲಿ ಚಪ್ಪಲಿ ಕಳೆದು ಹೋಗಿರುವುದು ನಿಮಗೂ ಅನುಭವವಾಗಿರಬಹುದು. ಈ ಸಮಸ್ಯೆಯೇ ಬೇಡವೆಂದು ದುಡ್ಡು ಕೊಟ್ಟು ಚಪ್ಪಲಿಯನ್ನು ದೇವಸ್ಥಾನದ ಹೊರಗೆ ಸುರಕ್ಷಿತ ಜಾಗದಲ್ಲಿ ಇಟ್ಟು ಹೋಗುವುದುಂಟು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಚಪ್ಪಲಿ ಕಳೆದುಹೋಗುವುದು ಶುಭ ಸಂಕೇತವೆಂದು ನಂಬಲಾಗಿದೆ. ಇದಲ್ಲದೇ ಇದರ ಹಿಂದೆ ಕೆಲವು ಆಧ್ಯಾತ್ಮಿಕ ನಂಬಿಕೆಗಳಿವೆ.

ಶನಿ ಗ್ರಹದೊಂದಿಗೆ ಸಂಬಂಧ:

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪಾದರಕ್ಷೆಗಳು ಶನಿ ಗ್ರಹವನ್ನು ಸಂಕೇತಿಸುತ್ತವೆ. ಜಾತಕದಲ್ಲಿ ಶನಿ ದೋಷ ಇದ್ದರೆ ಅಥವಾ ಶನಿಯ ಪ್ರಭಾವ ಹೆಚ್ಚು ಇದ್ದರೆ, ದೇವಾಲಯದಲ್ಲಿ ಚಪ್ಪಲಿಗಳು ಕಳೆದುಹೋದರೆ ಶನಿಯಿಂದ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ಅಂದರೆ, ಶನಿಯ ನಕಾರಾತ್ಮಕ ಪರಿಣಾಮಗಳು ಪಾದರಕ್ಷೆಗಳ ಜೊತೆಗೆ ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ನಕಾರಾತ್ಮಕ ಶಕ್ತಿಯಿಂದ ಮುಕ್ತಿ:

ದಿನವಿಡೀ ಹೊರಗೆ ಓಡಾಡುವಾಗ ಪಾದರಕ್ಷೆಗಳು ಧೂಳು, ಕೊಳಕು ಮತ್ತು ನಕಾರಾತ್ಮಕ ಶಕ್ತಿಗಳನ್ನು ಹೊತ್ತುಕೊಂಡಿರುತ್ತವೆ ಎಂಬ ನಂಬಿಕೆ ಇದೆ. ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಅವುಗಳು ಕಳೆದುಹೋಗುವುದರಿಂದ ಆ ನಕಾರಾತ್ಮಕತೆ ಅಲ್ಲಿಯೇ ಉಳಿದು ಹೋಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಶನಿವಾರದಂದು ನಡೆದರೆ ವಿಶೇಷವೆಂದು ನಂಬಿಕೆ:

ವಿಶೇಷವಾಗಿ ಶನಿವಾರದಂದು ದೇವಾಲಯದಲ್ಲಿ ಚಪ್ಪಲಿಗಳು ಕಳೆದುಹೋದರೆ, ಶನಿಯ ಕೋಪ ಕಡಿಮೆಯಾಗುತ್ತಿದೆ ಎಂಬ ಸಂಕೇತವೆಂದು ಹೇಳಲಾಗುತ್ತದೆ. ಅದಕ್ಕಾಗಿ ಕೆಲ ಕಡೆಗಳಲ್ಲಿ ಹಳೆಯ ಪಾದರಕ್ಷೆಗಳನ್ನು ಶನಿ ದೇವಾಲಯಗಳ ಬಳಿ ಬಿಡುವ ಪದ್ಧತಿಯೂ ಇದೆ.

ಹೊಸ ಆರಂಭದ ಸಂಕೇತ:

ಚಪ್ಪಲಿಗಳು ಕಳೆದುಹೋದರೆ ಕೆಲವೊಮ್ಮೆ ಬರಿ ಪಾದಗಳಲ್ಲಿ ಮನೆಗೆ ಹೋಗಬೇಕಾಗುತ್ತದೆ. ಇದನ್ನು ಕೆಲವರು ಹಳೆಯ ದುಃಖ ಅಥವಾ ದುರಾದೃಷ್ಟ ದೂರಾಗಿ, ಹೊಸ ಅದೃಷ್ಟ ಮತ್ತು ಹೊಸ ಆರಂಭ ನಮ್ಮ ಜೀವನಕ್ಕೆ ಬರುತ್ತಿದೆ ಎಂಬ ಸಂಕೇತವಾಗಿ ನೋಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us