AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಫೋಟೋ ಡಿಲೀಟ್​ ಮಾಡಿದ ರಣವೀರ್​ ಸಿಂಗ್​; ದೀಪಿಕಾ ಜತೆ ಕಿರಿಕ್​?

ರಣವೀರ್​ ಸಿಂಗ್​ ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ನೋಡಿದ ಅಭಿಮಾನಿಗಳಿಗೆ ಶಾಕ್​ ಆಗಿದೆ. ದೀಪಿಕಾ ಪಡುಕೋಣೆ ಜೊತೆಗಿನ ಮದುವೆಯ ಫೋಟೋಗಳನ್ನು ರಣವೀರ್​ ಸಿಂಗ್​ ಡಿಲೀಟ್​ ಮಾಡಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಫ್ಯಾನ್ಸ್​ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ದೀಪಿಕಾ-ರಣವೀರ್​ ನಡುವೆ ಜಗಳ ಆಗಿರಬಹುದು ಎಂದು ಕೆಲವರು ಕಮೆಂಟ್​ ಮಾಡುತ್ತಿದ್ದಾರೆ.

ಮದುವೆ ಫೋಟೋ ಡಿಲೀಟ್​ ಮಾಡಿದ ರಣವೀರ್​ ಸಿಂಗ್​; ದೀಪಿಕಾ ಜತೆ ಕಿರಿಕ್​?
ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ
ಮದನ್​ ಕುಮಾರ್​
|

Updated on: May 07, 2024 | 5:17 PM

Share

ಬಾಲಿವುಡ್​ನ ಕ್ಯೂಟ್​ ಕಪಲ್​ ಎನಿಸಿಕೊಂಡಿರುವ ರಣವೀರ್​ ಸಿಂಗ್​ (Ranveer Singh) ಮತ್ತು ದೀಪಿಕಾ ಪಡುಕೋಣೆ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಈ ನಡುವೆ ಈ ದಂಪತಿ ನಡುವೆ ಕಿರಿಕ್ ಆಗಿರಬಹುದೇ ಎಂಬ ಅನುಮಾನ ಕಾದಿದೆ. ಅದಕ್ಕೆ ಕಾರಣ ಆಗಿರುವುದು ರಣವೀರ್​ ಸಿಂಗ್​ ಅವರ ನಡೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇದ್ದ ಮದುವೆಯ ಫೋಟೋಗಳನ್ನು ರಣವೀರ್​ ಸಿಂಗ್​ ಅವರು ಡಿಲೀಟ್​ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ದೀಪಿಕಾ ಪಡುಕೋಣೆ (Deepika Padukone) ಅವರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಪರಸ್ಪರ ಪ್ರೀತಿಸಿ ಮದುವೆ ಆದವರು ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​. 2018ರ ನವೆಂಬರ್​ನಲ್ಲಿ ಇಟಲಿಯಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ಬಾಲಿವುಡ್​ನಲ್ಲಿ ಇಬ್ಬರೂ ಬಹುಬೇಡಿಕೆಯ ಕಲಾವಿದರಾಗಿ ಮಿಂಚುತ್ತಿದ್ದಾರೆ. ಈಗ ಅವರು ಮಗು ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ರಣವೀರ್​ ಸಿಂಗ್​ ಅವರು ಮದುವೆಯ ಫೋಟೋಗಳನ್ನು ಡಿಲೀಟ್​ ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: ಮೋದಿ ಮತ್ತು ನಿರುದ್ಯೋಗದ ಬಗ್ಗೆ ರಣವೀರ್​ ಸಿಂಗ್​ ಮಾತಾಡಿದ್ದು ನಿಜವೇ? ಇಲ್ಲಿದೆ ಅಸಲಿ ಕಥೆ

ರಣವೀರ್​ ಸಿಂಗ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರ ಇನ್​ಸ್ಟಾಗ್ರಾಮ್​ ಖಾತೆಯ ಮೇಲೆ ಕಣ್ಣಾಡಿಸಿದ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. 2023ರ ಜನವರಿಗಿಂತಲೂ ಹಿಂದಿನ ಫೋಟೋಗಳು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಾಣಿಸುತ್ತಿಲ್ಲ. ತಂದೆ ಆಗುತ್ತಿರುವ ಸಂದರ್ಭದಲ್ಲಿ ಅವರು ಪತ್ನಿಯ ಜೊತೆ ಜಗಳ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.

ಇದನ್ನೂ ಓದಿ: ‘ರಾಕ್ಷಸ’ ಆಗ್ತಾರಾ ರಣವೀರ್​ ಸಿಂಗ್​? ‘ಹನುಮಾನ್​’ ನಿರ್ದೇಶಕನ ಜೊತೆ ಹೊಸ ಸಿನಿಮಾ

ಇನ್ನೊಂದು ಇಂಟರೆಸ್ಟಿಂಗ್​ ವಿಚಾರ ಏನೆಂದರೆ, ರಣವೀರ್​ ಸಿಂಗ್ ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ದೀಪಿಕಾ ಜೊತೆಗಿನ ಬೇರೆ ಫೋಟೋಗಳು ಹಾಗೆಯೇ ಇವೆ. ಆದ್ದರಿಂದ ಅವರ ನಡುವೆ ಬಿರುಕು ಮೂಡಿದೆ ಎಂಬ ವಾದದಲ್ಲಿ ಅರ್ಥವಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ತಾಂತ್ರಿಕ ಕಾರಣದಿಂದ ಹಳೇ ಫೋಟೋಗಳು ಕಾಣಿಸಿದೇ ಇರಬಹುದು ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. ಈ ಬಗ್ಗೆ ರಣವೀರ್​ ಸಿಂಗ್​ ಪ್ರತಿಕ್ರಿಯೆ ನೀಡಲಿ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ
ಮೈಲಾರಲಿಂಗ ಕಾರ್ಣಿಕ: ಸಂಪಾಯಿತಲೇ ಪರಾಕ್
ಮೈಲಾರಲಿಂಗ ಕಾರ್ಣಿಕ: ಸಂಪಾಯಿತಲೇ ಪರಾಕ್
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ