AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಕ್ಷಸ’ ಆಗ್ತಾರಾ ರಣವೀರ್​ ಸಿಂಗ್​? ‘ಹನುಮಾನ್​’ ನಿರ್ದೇಶಕನ ಜೊತೆ ಹೊಸ ಸಿನಿಮಾ

ದಕ್ಷಿಣ ಭಾರತದ ನಿರ್ದೇಶಕರ ಜೊತೆ ಸಿನಿಮಾ ಮಾಡಲು ಬಾಲಿವುಡ್​ ಹೀರೋಗಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅಟ್ಲಿ, ಪ್ರಭುದೇವ, ಎ.ಆರ್​. ಮುರುಗದಾಸ್​ ರೀತಿ ಈಗ ಪ್ರಶಾಂತ್ ವರ್ಮಾ ಅವರಿಗೂ ಬೇಡಿಕೆ ಬಂದಿದೆ. ಅವರ ಜೊತೆ ನಟ ರಣವೀರ್​ ಸಿಂಗ್​ ಸಿನಿಮಾ ಮಾಡಲು ಉತ್ಸಾಹ ಹೊಂದಿದ್ದಾರೆ ಎಂದು ಸುದ್ದಿ ಆಗಿದೆ. ಈ ಸಿನಿಮಾದ ಟೈಟಲ್​ ಬಗ್ಗೆಯೂ ಗಾಸಿಪ್​ ಹಬ್ಬಿದೆ.

‘ರಾಕ್ಷಸ’ ಆಗ್ತಾರಾ ರಣವೀರ್​ ಸಿಂಗ್​? ‘ಹನುಮಾನ್​’ ನಿರ್ದೇಶಕನ ಜೊತೆ ಹೊಸ ಸಿನಿಮಾ
ರಣವೀರ್​ ಸಿಂಗ್​
ಮದನ್​ ಕುಮಾರ್​
|

Updated on: Apr 29, 2024 | 9:51 PM

Share

ಈ ವರ್ಷ ಅತಿ ದೊಡ್ಡ ಯಶಸ್ಸು ಕಂಡ ‘ಹನುಮಾನ್​’ ಸಿನಿಮಾದಿಂದ ನಿರ್ದೇಶಕ ಪ್ರಶಾಂತ್​ ವರ್ಮಾ (Prasanth Varma) ಅವರ ಬೇಡಿಕೆ ಡಬಲ್​ ಆಗಿದೆ. ಪುರಾಣದ ಕಥೆಗಳ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವಲ್ಲಿ ಅವರು ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಈಗ ರಣವೀರ್​ ಸಿಂಗ್​ (Ranveer Singh) ಮತ್ತು ಪ್ರಶಾಂತ್​ ವರ್ಮಾ ಅವರು ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಸುದ್ದಿ ಆಗಿದೆ. ಅಲ್ಲದೇ, ಈ ಸಿನಿಮಾದ ಟೈಟಲ್​ ಏನು ಎಂಬ ಬಗ್ಗೆಯೂ ಗಾಸಿಪ್​ ಕೇಳಿಬಂದಿದೆ. ವರದಿಗಳ ಪ್ರಕಾರ, ಈ ಸಿನಿಮಾಗೆ ‘ರಾಕ್ಷಸ’ (Rakshas) ಎಂದು ಟೈಟಲ್​ ಇಡಲಾಗಿದೆ. ರಣವೀರ್​ ಸಿಂಗ್​ ಅಭಿಮಾನಿಗಳು ಈ ಸುದ್ದಿ ಕೇಳಿ ಎಗ್ಸೈಟ್​ ಆಗಿದ್ದಾರೆ.

ನಟ ರಣವೀರ್​ ಸಿಂಗ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಸಿಂಗಂ ಅಗೇನ್​’ ಚಿತ್ರದಲ್ಲಿ ಅವರು ನಟಿಸಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಡಾನ್​ 3’ ಸಿನಿಮಾದಲ್ಲಿ ರಣವೀರ್​ ಸಿಂಗ್​ ಅವರಿಗೆ ಪ್ರಮುಖ ಪಾತ್ರ ನೀಡಲಾಗಿದೆ. ಅದರ ಬೆನ್ನಲ್ಲೇ ಅವರು ‘ಹನುಮಾನ್​’ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ವರ್ಮಾ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ: ಮೋದಿ ಮತ್ತು ನಿರುದ್ಯೋಗದ ಬಗ್ಗೆ ರಣವೀರ್​ ಸಿಂಗ್​ ಮಾತಾಡಿದ್ದು ನಿಜವೇ? ಇಲ್ಲಿದೆ ಅಸಲಿ ಕಥೆ

ಈ ಸಿನಿಮಾಗೆ ಸಂಬಂಧಿಸಿದಂತೆ ಪ್ರಶಾಂತ್​ ವರ್ಮಾ ಮತ್ತು ರಣವೀರ್ ಸಿಂಗ್​ ಅವರು ಈಗಾಗಲೇ ಹಲವು ಬಾರಿ ಮಾತುಕಥೆ ನಡೆಸಿದ್ದಾರೆ. ಇನ್ನೊಂದು ವರದಿಯ ಪ್ರಕಾರ, ಇತ್ತೀಚೆಗೆ ಹನುಮಾನ್​ ಜಯಂತಿ ಸಂದರ್ಭದಲ್ಲಿ ಈ ಚಿತ್ರಕ್ಕೆ ಪೂಜೆ ಕೂಡ ಮಾಡಲಾಗಿದೆ. ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ ಅವರ ಪಾತ್ರಕ್ಕೆ ನೆಗೆಟಿವ್​ ಶೇಡ್​ ಇರಲಿದೆ ಎನ್ನಲಾಗಿದೆ.

‘ರಾಕ್ಷಸ’ ಸಿನಿಮಾದ ಕಥೆಯು ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ನಡೆಯಲಿದೆ. ಈ ಕಥೆಗೆ ಪುರಾಣದ ಹಿನ್ನೆಲೆ ಕೂಡ ಇರಲಿದೆ. ಇದು ‘ಪ್ರಶಾಂತ್​ ವರ್ಮಾ ಸಿನಿಮ್ಯಾಟಿಕ್​ ಯೂನಿವರ್ಸ್​’ ಒಳಗೆ ಬರುವ ಒಂದು ಪಾತ್ರ ಆಗಿರಲಿದೆ. ಮುಂದೆ ಈ ಪ್ರಾಜೆಕ್ಟ್​ಗೆ ಸಂಬಂಧಪಟ್ಟಂತೆ ಹೊಸ ಹೊಸ ಅಪ್​ಡೇಟ್​ಗಳು ಸಿಗಲಿವೆ. ಸ್ಕ್ರಿಪ್ಟ್ ಕೆಲಸ ಸಂಪೂರ್ಣ ಮುಗಿದಿದ್ದು, ಶೂಟಿಂಗ್​ ದಿನಾಂಕದ ಬಗ್ಗೆ ಅಂತಿಮ ಚರ್ಚೆ ಆಗುತ್ತದೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ