ಹೃತಿಕ್​ ರೋಷನ್​, ಜಾನ್​ ಅಬ್ರಾಹಂ ಸಹಪಾಠಿಗಳು ಎಂಬುದು ನಿಮಗೆ ಗೊತ್ತಾ? ಫೋಟೋ ಸಾಕ್ಷಿ

ಶಾಲಾ ದಿನಗಳಲ್ಲಿ ಜಾನ್​ ಅಬ್ರಾಹಂ ಹಾಗೂ ಹೃತಿಕ್​ ರೋಷನ್​ ಅವರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಈಗೊಂದು ಫೋಟೋ ಸಿಕ್ಕಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ. ಹೃತಿಕ್​ ರೋಷನ್​ ಮತ್ತು ಜಾನ್​ ಅಬ್ರಾಹಂ ಅವರು ಕ್ಲಾಸ್​ಮೇಟ್ಸ್​ ಎಂಬುದನ್ನು ತಿಳಿದು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಹೃತಿಕ್​ ರೋಷನ್​, ಜಾನ್​ ಅಬ್ರಾಹಂ ಸಹಪಾಠಿಗಳು ಎಂಬುದು ನಿಮಗೆ ಗೊತ್ತಾ? ಫೋಟೋ ಸಾಕ್ಷಿ
ಹೃತಿಕ್​ ರೋಷನ್​, ಜಾನ್​ ಅಬ್ರಾಹಂ
Follow us
ಮದನ್​ ಕುಮಾರ್​
|

Updated on: May 07, 2024 | 8:40 PM

ಸ್ಟಾರ್​ ನಟರಾದ ಜಾನ್​ ಅಬ್ರಾಹಂ ಮತ್ತು ಹೃತಿಕ್​ ರೋಷನ್​ (Hrithik Roshan) ಅವರ ಬಗ್ಗೆ ಈಗೊಂದು ಅಪರೂಪದ ಮಾಹಿತಿ ಹೊರಬಿದ್ದಿದೆ. ಸೋಶಿಯಲ್​ ಮೀಡಿಯಾದಲ್ಲಿ ಒಂದು ಪೋಟೋ ವೈರಲ್​ ಆಗಿದೆ. ಹೃತಿಕ್​ ರೋಷನ್​ ಮತ್ತು ಜಾನ್ ಅಬ್ರಾಹಂ (John Abraham) ಅವರು ಸಹಪಾಠಿಗಳು ಆಗಿದ್ದರು ಎಂಬುದು ಬಹುತೇಕರಿಗೆ ತಿಳಿದಿರಲಿಲ್ಲ. ಈಗ ಈ ಫೋಟೋ (Hrithik Roshan Childhood Photo) ನೋಡಿದ ಬಳಿಕ ಎಲ್ಲರಿಗೂ ಅಚ್ಚರಿ ಆಗಿರುವುದಂತೂ ನಿಜ. ಇವರಿಬ್ಬರೂ ಈಗ ಬಾಲಿವುಡ್​ನಲ್ಲಿ ಸ್ಟಾರ್​ ಕಲಾವಿದರಾಗಿ, ಬಹುಬೇಡಿಕೆಯ ನಟರಾಗಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಅವರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು.

ಶಾಲೆಯಲ್ಲಿ ಓದುತ್ತಿರುವಾಗ ತೆಗೆದ ಗ್ರೂಪ್​ ಫೋಟೋದಲ್ಲಿ ಹೃತಿಕ್ ರೋಷನ್​ ಮತ್ತು ಜಾನ್​ ಅಬ್ರಾಹಂ ಇದ್ದಾರೆ. ಹೃತಿಕ್​ ರೋಷನ್​ ಅವರು ಬಿಳಿ ಸಮವಸ್ತ್ರ ಧರಿಸಿದ್ದರೆ, ಜಾನ್​ ಅಬ್ರಾಹಂ ಅವರು ಕಂದು ಬಣ್ಣದ ಸಮವಸ್ತ್ರ ಧರಿಸಿದ್ದಾರೆ. ತಮ್ಮ ನೆಚ್ಚಿನ ಹೀರೋಗಳು ಒಂದೇ ಶಾಲೆಯಲ್ಲಿ ಒಟ್ಟಿಗೆ ಓದಿದ್ದಾರೆ ಎಂಬುದನ್ನು ತಿಳಿದು ಅಭಿಮಾನಿಗಳಿಗೆ ಖುಷಿ ಆಗಿದೆ.

ಜಾನ್​ ಅಬ್ರಾಹಂ ಮತ್ತು ಹೃತಿಕ್​ ರೋಷನ್​ ಅವರ ಅಭಿಮಾನಿಗಳ ಸೋಶಿಯಲ್​ ಮೀಡಿಯಾ ಪೇಜ್​ಗಳಲ್ಲಿ ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಈ ಬಗ್ಗೆ ಹೃತಿಕ್​ ರೋಷನ್​ ಮತ್ತು ಜಾನ್​ ಅಬ್ರಾಹಂ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಇಷ್ಟು ದಿನಗಳ ಕಾಲ ಕಾಣಿಸಿರದ ಈ ಫೋಟೋ ಈಗ ಏಕಾಏಕಿ ವೈರಲ್​ ಆಗಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಸಬಾ ಆಜಾದ್​ ಜೊತೆ ಹೃತಿಕ್​ ರೋಷನ್​ ಲಿವ್​-ಇನ್​ ರಿಲೇಷನ್​ಶಿಪ್​

ಹೃತಿಕ್​ ರೋಷನ್​ ಅವರದ್ದು ಫಿಲ್ಮಿ ಕುಟುಂಬ. ಅವರ ತಂದೆ ರಾಕೇಶ್​ ರೋಷನ್​ ಹೆಸರಾಂತ ನಿರ್ಮಾಪಕ, ನಿರ್ದೇಶಕ. ಹೃತಿಕ್ ರೋಷನ್​ ಅವರು ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಹೀರೋ ಆಗಿ ಮಿಂಚಿದರು. ಅವರು ಪ್ರತಿಭಾವಂತ ಡ್ಯಾನ್ಸರ್​ ಕೂಡ ಹೌದು. ಈಗ ಅವರಿಗೆ ಭರ್ಜರಿ ಬೇಡಿಕೆ ಇದೆ. ‘ವಾರ್​ 2’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇನ್ನು, ಜಾನ್​ ಅಬ್ರಾಹಂ ಅವರು 2003ರಲ್ಲಿ ‘ಜಿಸ್ಮ್​’ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ನೀಡಿದರು. ಆ ಸಿನಿಮಾದಲ್ಲಿ ಅವರು ಬಿಪಾಶಾ ಬಸು ಜೊತೆ ತೆರೆ ಹಂಚಿಕೊಂಡಿದ್ದರು. ಬಳಿಕ ಅವರು ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ಅಭಿನಯಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್