‘ವಾರ್ 2’ ಚಿತ್ರದಲ್ಲೂ ನಾಟು ನಾಟು ರೀತಿ ಡ್ಯಾನ್ಸ್; ಸಜ್ಜಾದ ಜೂ. ಎನ್ಟಿಆರ್, ಹೃತಿಕ್
ಬಾಲಿವುಡ್ ನಟ ಹೃತಿಕ್ ರೋಷನ್ ಎಂಥ ಅದ್ಭುತ ಡ್ಯಾನ್ಸರ್ ಎಂಬುದು ಗೊತ್ತೇ ಇದೆ. ಅದೇ ರೀತಿ, ಜೂನಿಯರ್ ಎನ್ಟಿಆರ್ ಸಹ ಪ್ರತಿಭಾವಂತ ಡ್ಯಾನ್ಸರ್. ಅವರಿಬ್ಬರ ಪ್ರತಿಭೆಯನ್ನು ಸದ್ಭಳಕೆ ಮಾಡಿಕೊಳ್ಳಲು ‘ವಾರ್ 2’ ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಅವರು ಪ್ಲ್ಯಾನ್ ಮಾಡಿದ್ದಾರೆ. ಸ್ಪೆಷಲ್ ಸಾಂಗ್ ಬಗ್ಗೆ ಸುದ್ದಿ ಹರಿದಾಡುತ್ತಿದೆ.
‘ಆರ್ಆರ್ಆರ್’ ಸಿನಿಮಾದ ಗೆಲುವಿನಲ್ಲಿ ಹಾಡುಗಳ ಕೊಡುಗೆ ಕೂಡ ದೊಡ್ಡದಿದೆ. ಆ ಸಿನಿಮಾದಲ್ಲಿನ ‘ನಾಟು ನಾಟು..’ ಹಾಡು ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಅದರಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ (Jr NTR) ಅವರು ಸಖತ್ ಆಗಿ ಸ್ಟೆಪ್ ಹಾಕಿದ್ದರು. ಈಗ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ (War 2) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ (Hrithik Roshan) ಅವರ ಕಾಂಬಿನೇಷನ್ನಲ್ಲಿ ‘ನಾಟು ನಾಟು..’ ರೀತಿಯೇ ಒಂದು ಎನರ್ಜಿಟಿಕ್ ಆದಂತಹ ಸಾಂಗ್ ಇರಲಿದೆ ಎಂಬ ಮಾಹಿತಿ ಹೇಳಿಬಂದಿದೆ.
‘ವಾರ್ 2’ ಸಿನಿಮಾದ ಶೂಟಿಂಗ್ ಸಲುವಾಗಿ ಜೂನಿಯರ್ ಎನ್ಟಿಆರ್ ಅವರು ಈಗಾಗಲೇ ಮುಂಬೈಗೆ ತೆರಳಿದ್ದಾರೆ. ಅಲ್ಲಿ 10 ದಿನಗಳ ಕಾಲ ಆ್ಯಕ್ಷನ್ ಸನ್ನಿವೇಶದ ಚಿತ್ರೀಕರಣ ಮಾಡಲಿದ್ದಾರೆ ಎಂದು ವರದಿ ಆಗಿದೆ. ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂನಿಯರ್ ಎನ್ಟಿಆರ್ ಅವರ ಫೋಟೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಡ್ಯಾನ್ಸ್ ಬಗ್ಗೆ ಈ ಮಸ್ತ್ ಮಾಹಿತಿ ಹರಿದಾಡುತ್ತಿದೆ.
ಹೃತಿಕ್ ರೋಷನ್ ಅವರು ಎಂತಹ ಅದ್ಭುತ ಡ್ಯಾನ್ಸರ್ ಎಂಬುದು ಗೊತ್ತೇ ಇದೆ. ಹಾಗೆಯೇ, ಜೂನಿಯರ್ ಎನ್ಟಿಆರ್ ಕೂಡ ಪ್ರತಿಭಾವಂತ ಡ್ಯಾನ್ಸರ್. ಹಾಗಾಗಿ ಅವರಿಬ್ಬರ ಪ್ರತಿಭೆಯನ್ನು ಸದ್ಭಳಕೆ ಮಾಡಿಕೊಳ್ಳಲು ನಿರ್ದೇಶಕ ಅಯಾನ್ ಮುಖರ್ಜಿ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ‘ವಾರ್ 2’ ಸಿನಿಮಾದಲ್ಲಿ ಒಂದು ಸ್ಪೆಷಲ್ ಸಾಂಗ್ ಸೇರಿಸಲಾಗುತ್ತಿದೆ. ಆ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ಅಧಿಕೃತವಾಗಿ ಮಾತನಾಡಬೇಕಿದೆ.
ಇದನ್ನೂ ಓದಿ: ‘ವಾರ್ 2’ ಸಿನಿಮಾಗಾಗಿ ಮುಂಬೈಗೆ ತೆರಳಿದ ಜೂನಿಯರ್ ಎನ್ಟಿಆರ್; 10 ದಿನ ಶೂಟಿಂಗ್
‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ವಾರ್ 2’ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಬೇರೆ ಸ್ಟಾರ್ ನಟರು ಕೂಡ ಅತಿಥಿ ಪಾತ್ರ ಮಾಡುವ ನಿರೀಕ್ಷೆ ಇದೆ. ದೊಡ್ಡ ಬಜೆಟ್ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಭಿಮಾನಿಗಳ ನಿರೀಕ್ಷೆಯೂ ಬೆಟ್ಟದಷ್ಟಿದೆ. ಅದಕ್ಕೆ ಅನುಗುಣವಾಗಿ ಸಿನಿಮಾ ಮಾಡಲು ನಿರ್ದೇಶಕ ಅಯಾನ್ ಮುಖರ್ಜಿ ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ಸ್ಪೆಷಲ್ ಸಾಂಗ್ ಬಗ್ಗೆ ಪ್ಲ್ಯಾನ್ ಮಾಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ದೇಶಾದ್ಯಂತ ಕ್ರೇಜ್ ಸೃಷ್ಟಿ ಆಗಿದೆ. ಎಲ್ಲ ರಾಜ್ಯಗಳಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ಅವರಿಗೆ ಅಭಿಮಾನಿಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.