ಒಂದಂಕಿಗೆ ಇಳಿದ ಅಕ್ಷಯ್ ಕುಮಾರ್ ಸಿನಿಮಾ ಕಲೆಕ್ಷನ್; ಹೀನಾಯ ಸೋಲು
Bade Miyan Chote Miyan 2nd Day Collection: ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ದೊಡ್ಡ ಜಯ ಕಾಣುವ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದರು. ಈ ಸಿನಿಮಾ ಕಮಾಲ್ ಮಾಡಲಿದೆ ಎಂದು ಭಾವಿಸಲಾಗಿತ್ತು. ನಾನಾ ವೇದಿಕೆಗಳಲ್ಲಿ ಸಿನಿಮಾದ ಪ್ರಚಾರ ಮಾಡಲಾಗಿತ್ತು. ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಿನಿಮಾ ಗೆಲ್ಲಲು ವಿಫಲವಾಗಿದೆ.
ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ದೊಡ್ಡ ಮಟ್ಟದ ಗಳಿಕೆ ಮಾಡಲಿದೆ ಎಂದು ಊಹಿಸಲಾಗಿತ್ತು. ಆದರೆ, ಈ ಊಹೆ ತಪ್ಪಾಗಿದೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಎರಡನೇ ದಿನದ ಗಳಿಕೆ ಒಂದಂಕಿಗೆ ಇಳಿದಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 100 ಕೋಟಿ ರೂಪಾಯಿ ಆಗೋದು ಅನುಮಾನ ಎನ್ನಲಾಗುತ್ತಿದೆ. ಬಾಕ್ಸ್ ಆಫೀಸ್ ಪಂಡಿತರು ಇದನ್ನು ಹೀನಾಯ ಸೋಲು ಎಂದು ಘೋಷಿಸಿದ್ದಾರೆ.
ಅಕ್ಷಯ್ ಕುಮಾರ್ ಸತತ ಸೋಲು ಕಾಣುತ್ತಿದ್ದಾರೆ. ‘ಸೂರ್ಯವಂಶಿ’ ಬಳಿಕ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ದೊಡ್ಡ ಜಯ ಕಾಣುವ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದರು. ಈ ಸಿನಿಮಾ ಕಮಾಲ್ ಮಾಡಲಿದೆ ಎಂದು ಭಾವಿಸಲಾಗಿತ್ತು. ನಾನಾ ವೇದಿಕೆಗಳಲ್ಲಿ ಸಿನಿಮಾದ ಪ್ರಚಾರ ಮಾಡಲಾಗಿತ್ತು. ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಿನಿಮಾ ಗೆಲ್ಲಲು ವಿಫಲವಾಗಿದೆ.
ಮೊದಲ ದಿನ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ 15.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಅಂದರೆ ಶುಕ್ರವಾರ (ಏಪ್ರಿಲ್ 12) ಕೇವಲ 7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ 22.65 ಕೋಟಿ ರೂಪಾಯಿ ಗಳಿಕೆ ಆಗಿದೆ. ಇಂದು (ಏಪ್ರಿಲ್ 13) ಹಾಗೂ ನಾಳೆ (ಏಪ್ರಿಲ್ 14) ಸಿನಿಮಾ ದೊಡ್ಡ ಮೊತ್ತ ಕಲೆಕ್ಷನ್ ಮಾಡಿದರೂ ಸೋಮವಾರದಿಂದ ಕಲೆಕ್ಷನ್ ಕಡಿಮೆ ಆಗಲಿದೆ.
ಇದನ್ನೂ ಓದಿ: ಮೊದಲ ದಿನದ ಕಲೆಕ್ಷನ್ನಲ್ಲಿ ಮುಗ್ಗರಿಸಿದ ಅಕ್ಷಯ್ ಕುಮಾರ್ ಸಿನಿಮಾ; ಮತ್ತೊಂದು ಸೋಲು?
ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಿನಿಮಾ ತೂಕ ಕಳೆದುಕೊಂಡಿದೆ ಎಂದು ಅನೇಕರು ಅಭಿಯಾವನ್ನು ಅನೇಕರು ಹೊರ ಹಾಕಿದ್ದಾರೆ. ಈದ್ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್ಗೆ ತೆರಳುತ್ತಾರೆ. ಹೀಗಾಗಿ, ದೊಡ್ಡ ಬಜೆಟ್ ಸಿನಿಮಾಗಳು ಈ ಸಂದರ್ಭದಲ್ಲಿ ರಿಲೀಸ್ ಆಗುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ