ಮೊದಲ ದಿನದ ಕಲೆಕ್ಷನ್ನಲ್ಲಿ ಮುಗ್ಗರಿಸಿದ ಅಕ್ಷಯ್ ಕುಮಾರ್ ಸಿನಿಮಾ; ಮತ್ತೊಂದು ಸೋಲು?
Bade Miyan Chote Miyan Collection: ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ಕನಸು ಕಂಡಿದ್ದರು ಅಕ್ಷಯ್. ಆದರೆ, ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 15 ಕೋಟಿ ರೂಪಾಯಿ. ಇದರಿಂದ ಅಕ್ಷಯ್ ಕುಮಾರ್ಗೆ ಮತ್ತೊಂದು ಸೋಲಿನ ಭಯ ಕಾಡಿದೆ.
ಈದ್ ಪ್ರಯುಕ್ತ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಯಿತು. ಹಬ್ಬದ ಕಾರಣಕ್ಕೆ ಸರ್ಕಾರಿ ರಜೆ ಇತ್ತು. ಇದರ ಜೊತೆಗೆ ದೊಡ್ಡ ಪಾತ್ರವರ್ಗ ಬೇರೆ. ಹೀಗಾಗಿ, ಸಿನಿಮಾ ಭರ್ಜರಿ ಗಳಿಕೆ ಮಾಡಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಈ ಚಿತ್ರ ಮೊದಲ ದಿನ ಗಳಿಕೆ ಅಂದುಕೊಂಡ ರೀತಿಯಲ್ಲಿ ಆಗಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಅಕ್ಷಯ್ ಕುಮಾರ್ ಅವರು ಸತತ ಸೋಲುಗಳನ್ನು ಕಾಣುತ್ತಾ ಬರುತ್ತಿದ್ದಾರೆ. ಅವರು ದೊಡ್ಡ ಗೆಲುವು ಕಾಣದೆ ಅದೆಷ್ಟೋ ಸಮಯ ಕಳೆದು ಹೋಗಿದೆ. ಈ ಕಾರಣದಿಂದಲೇ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ಕನಸು ಕಂಡಿದ್ದರು. ಆದರೆ, ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 15 ಕೋಟಿ ರೂಪಾಯಿ. ಇದರಿಂದ ಅಕ್ಷಯ್ ಕುಮಾರ್ಗೆ ಮತ್ತೊಂದು ಸೋಲಿನ ಭಯ ಕಾಡಿದೆ.
ಇದನ್ನೂ ಓದಿ: ನಿಮಗೂ ಅಕ್ಷಯ್ ಕುಮಾರ್ ಹೆಸರಲ್ಲಿ ಕರೆ ಬರಹುದು ಎಚ್ಚರ; ಮೋಸ ಹೋಗದಿರಿ
ಸಣ್ಣ ಬಜೆಟ್ ಸಿನಿಮಾ ಆಗಿ, ದೊಡ್ಡ ಸ್ಟಾರ್ಗಳು ಇಲ್ಲ ಎಂದರೆ 15 ಕೋಟಿ ರೂಪಾಯಿ ನಿಜಕ್ಕೂ ದೊಡ್ಡ ಮೊತ್ತವೇ. ಆದರೆ, ‘ಬಡೇ ಮಿಯಾ ಚೋಟೆ ಮಿಯಾ’ ವಿಚಾರದಲ್ಲಿ ಹಾಗಿಲ್ಲ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ಸೇರಿ ಅನೇಕ ಸ್ಟಾರ್ಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಚಿತ್ರದ ಮೊದಲ ದಿನದ ಗಳಿಕೆ ಕನಿಷ್ಠ 30-40 ಕೋಟಿ ರೂಪಾಯಿ ದಾಟಬೇಕಿತ್ತು. ಆದರೆ, 15 ಕೋಟಿ ರೂಪಾಯಿಗೆ ಸಿನಿಮಾ ಸಮಾಧಾನಪಟ್ಟುಕೊಂಡಿದೆ.
#OneWordReview…#BadeMiyanChoteMiyan: DISAPPOINTING. Rating: ⭐⭐ Scale, stars, stunts, style, #BMCM has it all… Except SOUL and SUBSTANCE… #AliAbbasZafar had a golden opportunity, but delivers a royal mess… A few twists work, but fails in totality. #BMCM #BMCMReview pic.twitter.com/zpuLdL7UhM
— taran adarsh (@taran_adarsh) April 11, 2024
ಅತ್ತ ಅಜಯ್ ದೇವಗನ್ ನಟನೆಯ ‘ಮೈದಾನ್’ ಚಿತ್ರದ ಗಳಿಕೆ ಮತ್ತಷ್ಟು ಹೀನಾಯವಾಗಿದೆ. ಬುಧವಾರ ಈ ಸಿನಿಮಾ 2.6 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಗುರುವಾರ 4.50 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 7.10 ಕೋಟಿ ರೂಪಾಯಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ