ನಿಮಗೂ ಅಕ್ಷಯ್ ಕುಮಾರ್ ಹೆಸರಲ್ಲಿ ಕರೆ ಬರಹುದು ಎಚ್ಚರ; ಮೋಸ ಹೋಗದಿರಿ
ಅಕ್ಷಯ್ ಕುಮಾರ್ ಹೆಸರಲ್ಲಿ ಯುವತಿಯನ್ನು ವಂಚಿಸುವ ಯತ್ನ ನಡೆದಿದೆ. ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸೋ ಆಫರ್ ನೀಡುವುದಾಗಿ ಆಫರ್ ನೀಡಲಾಗಿತ್ತು. ಆದರೆ, ಆ ಯುವತಿ ಅಕ್ಷಯ್ ಕುಮಾರ್ ಮ್ಯಾನೇಜರ್ನ ಸಂಪರ್ಕಿಸಿದ್ದಾರೆ. ಆಗ ಆ ಯುವತಿಗೆ ಇದು ಮೋಸದ ಜಾಲ ಅನ್ನೋದು ಗೊತ್ತಾಗಿದೆ.
ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಮೊಬೈಲ್ ಫೋನ್‌ಗಳಲ್ಲಿ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಿ ಅನೇಕರು ಆರ್ಥಿಕವಾಗಿ ವಂಚನೆಗೊಳಗಾಗುತ್ತಿದ್ದರೆ. ಇದರಿಂದಾಗಿ ಅನೇಕರು ಹಣ ಕಳೆದುಕೊಂಡು ತೊಂದರೆಗೆ ಒಳಗಾಗಿದ್ದಾರೆ. ಈಗ ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರ ಹೆಸರನ್ನು ಬಳಸಿಕೊಂಡು ವಂಚನೆಗೆ ಯತ್ನಿಸಿರುವ ಆಘಾತಕಾರಿ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಅಕ್ಷಯ್ ಕುಮಾರ್ ಹೆಸರಲ್ಲಿ ಯುವತಿಯನ್ನು ವಂಚಿಸುವ ಯತ್ನ ನಡೆದಿದೆ. ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸೋ ಆಫರ್ ನೀಡುವುದಾಗಿ ಆಫರ್ ನೀಡಲಾಗಿತ್ತು. ಆದರೆ, ಆ ಯುವತಿ ಅಕ್ಷಯ್ ಕುಮಾರ್ ಮ್ಯಾನೇಜರ್ನ ಸಂಪರ್ಕಿಸಿದ್ದಾರೆ. ಆಗ ಆ ಯುವತಿಗೆ ಇದು ಮೋಸದ ಜಾಲ ಅನ್ನೋದು ಗೊತ್ತಾಗಿದೆ. ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?
28 ವರ್ಷದ ಪೂಜಾ ಎಂಬ ಯುವತಿಗೆ ರೋಹನ್ ಮೆಹ್ರಾ ಅವರು ಕರೆ ಮಾಡಿದ್ದರು. ಅಕ್ಷಯ್ ಕುಮಾರ್ ನಿರ್ಮಾಣ ಸಂಸ್ಥೆ ‘ಕೇಪ್ ಆಫ್ ಗುಡ್ ಫಿಲ್ಮ್ಸ್’ ಕಡೆಯಿಂದ ಕರೆ ಮಾಡುತ್ತಿರುವುದಾಗಿ ಆತ ಹೇಳಿಕೊಂಡಿದ್ದ. ‘ನಿರ್ಭಯ’ ಹೆಸರಿನ ಸಿನಿಮಾ ಮಾಡಲಾಗುತ್ತಿದ್ದು, ಇದಕ್ಕೆ ನಿಮ್ಮ ಹೆಸರು ಶಾರ್ಟ್ಲಿಸ್ಟ್ ಆಗಿದೆ ಎಂದು ರೋಹನ್ ಹೇಳಿದ್ದ. ಭೇಟಿ ಆಗುವಂತೆ ಕೇಳಿದ್ದ.
ದೇವಸ್ಥಾನ ಒಂದರಲ್ಲಿ ಇವರ ಭೇಟಿ ನಡೆಯಿತು. ಭೇಟಿ ವೇಳೆ ರೋಹನ್ ಸ್ಕ್ರಿಪ್ಟ್ ಕೂಡ ತಂದಿದ್ದ. ಸ್ಕ್ರಿಪ್ಟ್ನ ಕೊನೆಯಲ್ಲಿ ಅಕ್ಷಯ್ ಕುಮಾರ್ ಸಹಿ ಇದೆ ಎಂದು ಕೂಡ ಆತ ಹೇಳಿಕೊಂಡಿದ್ದ. ‘ನಿಮ್ಮ ಪ್ರಾಫೈಲ್ ಕ್ರಿಯೇಟ್ ಮಾಡಬೇಕು. ಇದಕ್ಕಾಗಿ ಆರು ಲಕ್ಷ ನೀಡಬೇಕು’ ಎಂದು ರೋಹನ್ ಬೇಡಿಕೆ ಇಟ್ಟಿದ್ದ. ಪೂಜಾ ಅವರು ನೇರವಾಗಿ ಅಕ್ಷಯ್ ಅವರ ಮ್ಯಾನೇಜರ್ನ ಕಾಂಟ್ಯಾಕ್ಟ್ ಮಾಡಿದ್ದಾರೆ. ರೋಹನ್ ಮೆಹ್ರಾ ಹೆಸರಿನ ಯಾರೊಬ್ಬರೂ ‘ಕೇಪ್ ಆಫ್ ಗುಡ್ ಫಿಲ್ಮ್ಸ್’ನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾ ಉದ್ದಕ್ಕೂ ಕಾಣಲ್ಲ ಪೃಥ್ವಿರಾಜ್ ಮುಖ? ಮೂಡಿದೆ ಅನುಮಾನ
ನಂತರ ತಮ್ಮ ತಂದೆ ಹಾಗೂ ಪೊಲೀಸರ ಜೊತೆ ಪೂಜಾ ಆತನ ಭೇಟಿ ಮಾಡಿದ್ದಾರೆ. ರೋಹನ್ ಮೆಹ್ರಾ ಬಂದ ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೂಲಂಕುಷವಾಗಿ ತನಿಖೆ ನಡೆಸಿದಾಗ ಆತನ ನಿಜವಾದ ಹೆಸರು ಪ್ರಿನ್ಸ್ ಕುಮಾರ್ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಕೇಸ್ ದಾಖಲಿಸಿಕೊಂಡು ಪ್ರಕರಣದ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ