Jr NTR

Jr NTR

ಜೂನಿಯರ್ ಎನ್​ಟಿಆರ್​, ನಂದಮೂರಿ ತಾರಕ ರಾಮರಾವ್ ಎಂದೂ ಕರೆಯಲ್ಪಡುವ ಇವರು, ತೆಲುಗು ಚಿತ್ರರಂಗದ ಜನಪ್ರಿಯ ನಟ. ಜೂನಿಯರ್ ಎನ್​ಟಿಆರ್​ ಜನಿಸಿದ್ದು 1983ರ ಮೇ 20ರಂದು. ಹೈದರಾಬಾದ್‌ನಲ್ಲಿ ಜನಿಸಿದ ಅವರು ಫಿಲ್ಮಿ ಹಿನ್ನೆಲೆ ಕುಟುಂಬದಿಂದ ಬಂದವರು. ಜೂನಿಯರ್ ಎನ್‌ಟಿಆರ್ ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ನಂತರ ಹೀರೋ ಪಾತ್ರಗಳಲ್ಲಿನ ಬಹುಮುಖ ಅಭಿನಯಕ್ಕಾಗಿ ಅಪಾರ ಮನ್ನಣೆಯನ್ನು ಗಳಿಸಿದರು. ಅವರ ಖಾತೆಯಲ್ಲಿ ಅನೇಕ ಹಿಟ್​ ಸಿನಿಮಾಗಳಿವೆ. ಅವರು ನಟಿಸಿದ ‘ಆರ್​ಆರ್​ಆರ್​’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು. ಆ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಕ್ಕಿತು. ಆ ಮೂಲಕ ಜೂನಿಯರ್​ ಎನ್​ಟಿಆರ್​ ಹೆಸರು ಇನ್ನಷ್ಟು ಫೇಮಸ್​ ಆಯಿತು. ನಟನೆ ಮಾತ್ರವಲ್ಲದೇ ಡ್ಯಾನ್ಸ್​ನಲ್ಲಿಯೂ ಅವರ ಪ್ರತಿಭೆ ಅಪಾರ. ಇನ್ನು, ಕೆಲವು ಟಿವಿ ಶೋಗಳನ್ನು ಕೂಡ ಅವರು ನಡೆಸಿಕೊಟ್ಟಿದ್ದಾರೆ. ಕನ್ನಡವನ್ನು ಅವರು ಚೆನ್ನಾಗಿ ಮಾತನಾಡಬಲ್ಲರು. ಅವರ ತಾಯಿ ಶಾಲಿನಿ, ಕರ್ನಾಟಕದ ಕುಂದಾಪುರದವರು.

ಇನ್ನೂ ಹೆಚ್ಚು ಓದಿ

ಬಾಲಿವುಡ್​ನ ‘ವಾರ್​ 2’ ಸಿನಿಮಾದಿಂದ ಧ್ರುವ ಸರ್ಜಾಗೆ ಬಂತಾ ಆಫರ್​? ಸಖತ್​ ನ್ಯೂಸ್​

‘ವಾರ್​ 2’ ಸಿನಿಮಾಗೆ ಅಯಾನ್​ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೃತಿಕ್​ ರೋಷನ್​, ಜೂನಿಯರ್​ ಎನ್​ಟಿಆರ್​ ಅವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರತಂಡದಿಂದ ಧ್ರುವ ಸರ್ಜಾಗೆ ಆಫರ್​ ಬಂದಿದೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದವರು ಬಂದು ಧ್ರುವ ಸರ್ಜಾಗೆ ಕಥೆ ಹೇಳಿದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

‘ದೇವರ’ ಸಿನಿಮಾದಲ್ಲಿ 10 ಸಾವಿರ ಮಂದಿಯ ಜೊತೆ ಫೈಟ್ ಮಾಡಲಿದ್ದಾರೆ ಜೂ. ಎನ್​ಟಿಆರ್?

ಜೂನಿಯರ್​ ಎನ್​ಟಿಆರ್ ಜನ್ಮದಿನದ ಪ್ರಯುಕ್ತ ಸಿನಿಮಾದ ‘ಫಿಯರ್..’ ಹಾಡು ರಿಲೀಸ್ ಆಗಿದೆ. ಈ ಸಿನಿಮಾ ಸಂಪೂರ್ಣ ಆಲ್ಬಂ ರಿಲೀಸ್​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಸಿಕ್ಕಿರುವ ಮತ್ತೊಂದು ಸುದ್ದಿ ಎಂದರೆ ಈ ಚಿತ್ರದಲ್ಲಿ 10 ಸಾವಿರ ಮಂದಿಯ ಜೊತೆ ಜೂನಿಯರ್​ ಎನ್​ಟಿಆರ್ ಫೈಟ್ ಮಾಡಲಿದ್ದಾರಂತೆ.

‘ದೇವರ’ ಬಿಡುಗಡೆ ಟೈಮ್​ನಲ್ಲೇ ‘ಮಾರ್ಟಿನ್​’ ರಿಲೀಸ್​; ಏನಂದ್ರು ನಿರ್ದೇಶಕರು?

ಎರಡು ಪ್ಯಾನ್​ ಇಂಡಿಯಾ ಸಿನಿಮಾಗಳು ಒಟ್ಟಿಗೆ ಬರುತ್ತಿವೆ. ಅಕ್ಟೋಬರ್​ 11ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಬಿಡುಗಡೆ ಆಗಲಿದೆ. ಜೂ.​ ಎನ್​ಟಿಆರ್​ ಅವರ ‘ದೇವರ’ ಚಿತ್ರ ಅಕ್ಟೋಬರ್​ 10ರಂದು ತೆರೆಕಾಣಲಿದೆ. ಇದರಿಂದ ಕ್ಲ್ಯಾಶ್​ ಆಗಲ್ವಾ ಎಂಬ ಪ್ರಶ್ನೆಗೆ ‘ಮಾರ್ಟಿನ್’ ಸಿನಿಮಾದ ನಿರ್ದೇಶನ ಎ.ಪಿ. ಅರ್ಜುನ್​ ಉತ್ತರ ನೀಡಿದ್ದಾರೆ.

ಜೂನಿಯರ್​ ಎನ್​ಟಿಆರ್​, ಪ್ರಶಾಂತ್​ ನೀಲ್​ ಜೋಡಿಯ ಸಿನಿಮಾ ಬಗ್ಗೆ ಸಿಕ್ತು ದೊಡ್ಡ ಅಪ್​ಡೇಟ್​

‘ದೇವರ’, ‘ವಾರ್ 2’ ಸಿನಿಮಾದ ಕೆಲಸಗಳಲ್ಲಿ ಜೂನಿಯರ್​ ಎನ್​ಟಿಆರ್​ ಅವರು ಬ್ಯುಸಿ ಆಗಿದ್ದಾರೆ. ಪ್ರಶಾಂತ್​ ನೀಲ್​ ಹಾಗೂ ಜೂನಿಯರ್​ ಎನ್​ಟಿಆರ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾ ಬಗ್ಗೆ ಸಖತ್​ ನಿರೀಕ್ಷೆ ಇದೆ. ಇಂದು (20) ಜೂ. ಎನ್​ಟಿರ್​ ಹುಟ್ಟುಹಬ್ಬದ ಪ್ರಯುಕ್ತ ಶೂಟಿಂಗ್​ ಬಗ್ಗೆ ಮಾಹಿತಿ ನೀಡಲಾಗಿದೆ.

ಜೂ. ಎನ್​ಟಿಆರ್ ಬರ್ತ್​ಡೇನ ಸೆಲೆಬ್ರೇಟ್ ಮಾಡಿದ ಜಪಾನ್ ಫ್ಯಾನ್ಸ್

JR NTR Birthday: ತಾರಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ jr NTR ಹ್ಯಾಶ್​ಟ್ಯಾಗ್​ನ ಟ್ರೆಂಡ್ ಮಾಡುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜಪಾನ್ ಅಭಿಮಾನಿಗಳು ತಾರಕ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಜೂ.​ ಎನ್​ಟಿಆರ್ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ 10 ಲಕ್ಷ ಜನ; ಸಿನಿಮಾ ಮಾತ್ರ ಫ್ಲಾಪ್  

JR NTR Birthday: ಇಂದು ಜೂನಿಯರ್​ ಎನ್‌ಟಿಆರ್‌ ಜನ್ಮದಿನ. ಅವರು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹೆಸರಲ್ಲಿ ಒಳ್ಳೆಯ ಕಾರ್ಯ ನಡೆಯುತ್ತಿದೆ. ಈ ವೇಳೆ ಹಳೆಯ ಘಟನೆಯೊಂದನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್​ಟಿರ್ ಅವರನ್ನು ನೋಡಲು ಲಕ್ಷಗಟ್ಟಲೆ ಜನ ಜಮಾಯಿಸಿದ್ದರು.

450 ಕೋಟಿ ರೂಪಾಯಿ ಒಡೆಯ ಜೂನಿಯರ್ ಎನ್​ಟಿಆರ್; ಆಸ್ತಿ ಬಗ್ಗೆ ಇಲ್ಲಿದೆ ವಿವರ

Jr NTR Birthday: ಜೂನಿಯರ್​ ಎನ್​ಟಿಆರ್ ಅವರ ಆಸ್ತಿ 450 ಕೋಟಿ ರೂಪಾಯಿ ಇದೆ. ನಟನೆ, ಬ್ರ್ಯಾಂಡ್ ಪ್ರಚಾರಗಳ ಮೂಲಕ ಅವರಿಗೆ ಹಣ ಬರುತ್ತಿದೆ. ಪ್ರತಿ ಚಿತ್ರಕ್ಕೆ ಅವರು 50-60 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ವಿಶೇಷ ಎಂದರೆ, ‘ವಾರ್ 2’ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

ಪ್ರಶಾಂತ್​ ನೀಲ್​, ಜೂ. ಎನ್​ಟಿಆರ್​ಗೆ ‘ಡ್ರ್ಯಾಗನ್​’ ಟೈಟಲ್​ ಕೊಟ್ಟಿದ್ದು ಕರಣ್​ ಜೋಹರ್​?

‘ಡ್ರ್ಯಾಗನ್​’ ಶೀರ್ಷಿಕೆ ಕರಣ್​ ಜೋಹರ್​ ಬಳಿ ಇತ್ತು. ಅದನ್ನು ಅವರು ಪ್ರಶಾಂತ್​ ನೀಲ್​ ಹಾಗೂ ಕರಣ್​ ಜೋಹರ್​ಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಶೀರ್ಷಿಕೆ ನೀಡಲು ಕರಣ್​ ಜೋಹರ್​ ಹಣ ಪಡೆದಿಲ್ಲ. ಸ್ನೇಹದ ಕಾರಣಕ್ಕೆ ಅವರು ತಮ್ಮ ಬಳಿ ಇದ್ದ ಟೈಟಲ್​ ನೀಡಿದ್ದಾರೆ ಎಂದು ವರದಿ ಆಗಿದೆ. ಚಿತ್ರತಂಡದವರು ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

ದೇವಸ್ಥಾನ ನಿರ್ಮಾಣಕ್ಕೆ 12.5 ಲಕ್ಷ ರೂಪಾಯಿ ದೇಣಿಗೆ ನೀಡಿದ ಜೂ. ಎನ್​ಟಿಆರ್​

ಪ್ರತಿ ಸಿನಿಮಾಗೆ ಜೂನಿಯರ್​ ಎನ್​ಟಿಆರ್​ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದರಲ್ಲಿ ಒಂದಷ್ಟು ಹಣವನ್ನು ಅವರು ಸಮಾಜಮುಖಿ ಕೆಲಸಗಳಿಗೆ ನೀಡುತ್ತಾರೆ. ಈಗ ಆಂಧ್ರ ಪ್ರದೇಶದಲ್ಲಿ ದೇವಸ್ಥಾನವೊಂದರ ನಿರ್ಮಾಣಕ್ಕಾಗಿ ಜೂನಿಯರ್​ ಎನ್​ಟಿಆರ್​ ಅವರು 12.5 ಲಕ್ಷ ರೂಪಾಯಿ ದೇಣಿಗೆ ನೀಡಿರುವುದು ಗೊತ್ತಾಗಿದೆ.

ಮೇ 10ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ ‘ಆರ್​ಆರ್​ಆರ್​’ ಸಿನಿಮಾ

ದೇಶದ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ‘ಆರ್​ಆರ್​ಆರ್​’ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ಬಾರಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಜೂನಿಯರ್​ ಎನ್​ಟಿಆರ್, ರಾಮ್​ ಚರಣ್​, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸಿರುವ ಈ ಸಿನಿಮಾಗೆ ಎಸ್​ಎಸ್​ ರಾಜಮೌಳಿ ನಿರ್ದೇಶನವಿದೆ.