ಪಾಪ ಜೂನಿಯರ್ ಎನ್ಟಿಆರ್ಗೆ ಏನಾಯ್ತು? ಲುಕ್ ನೋಡಿ ಫ್ಯಾನ್ಸ್ಗೆ ಆತಂಕ
ಜೂನಿಯರ್ ಎನ್‌ಟಿಆರ್ ಅವರ ಹೊಸ ತೆಳ್ಳನೆಯ ಲುಕ್ ವೈರಲ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರಕ್ಕಾಗಿ ಅವರು ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ನಾಗಾರ್ಜುನ ಅವರ ಚಿತ್ರದ ಪ್ರಚಾರ ವಿಡಿಯೋದಲ್ಲಿ ಅವರ ಹೊಸ ಅವತಾರ ಕಾಣಿಸಿತು.

ಹೀರೋಗಳು ಯಾವಾಗಲೂ ಫಿಟ್ ಆಗಿರಲು ಬಯಸುತ್ತಾರೆ. ಇದಕ್ಕೆ ತಕ್ಕಂತೆ ಅವರು ಡಯಟ್ ಮಾಡೋದನ್ನು ಕಾಣಬಹುದು. ಈಗ ಜೂನಿಯರ್ ಎನ್‌ಟಿಆರ್ ಅವರ ಹೊಸ ಲುಕ್ ವೈರಲ್ ಆಗಿದೆ. ಇದರಲ್ಲಿ ಅವರು ಸಾಕಷ್ಟು ತೆಳ್ಳಗಾಗಿದ್ದಾರೆ. ಅವರ ಮುಖವಂತೂ ಗುರುತೇ ಸಿಗದಷ್ಟು ಬದಲಾಗಿ ಹೋಗಿದ್ದನ್ನು ನೀವು ಕಾಣಬಹುದು. ಈ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಲುಕ್ ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಅವರು ತೂಕ ಕಳೆದುಕೊಂಡರು. ಆದರೆ, ಈ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಜೂನಿಯರ್ ಎನ್‌ಟಿಆರ್ ಅವರ ಈ ಲುಕ್ಗೆ ಪ್ರಶಾಂತ್ ನೀಲ್ ಕಾರಣವಂತೆ. ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಅಲ್ಲಿ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ, ಇದಕ್ಕೆ ‘ಡ್ರ್ಯಾಗನ್’ ಎಂದು ಕರೆಯಲಾಗುತ್ತಿದೆ ಎನ್ನಲಾಗಿದೆ. ಈ ಸಿನಿಮಾದ ಶೂಟಿಂಗ್ ಶುರುವಾಗಿ ಹಲವು ತಿಂಗಳು ಕಳೆದಿವೆ. ಅವರು ‘ಡ್ರ್ಯಾಗನ್’ ಚಿತ್ರದ ಕೆಲಸದಲ್ಲಿಯೇ ಸಂಪೂರ್ಣ ತೊಡಗಿಕೊಂಡಿದ್ದಾರೆ.
View this post on Instagram
ಅಕ್ಕಿನೇನಿ ನಾಗಾರ್ಜುನ ಅವರ 1989ರ ಸೂಪರ್ ಹಿಟ್ ಸಿನಿಮಾ ನವೆಂಬರ್ 24ರಂದು ರೀ-ರಿಲೀಸ್ ಆಗುತ್ತಿದೆ. ಹೊಸ ಅವತಾರದಲ್ಲಿ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ವಿಶ್ ಮಾಡಲು ಜೂನಿಯರ್ ಎನ್‌ಟಿಆರ್ ಅವರು ಹೊಸ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಅವರು ತುಂಬಾನೇ ತೆಳ್ಳಗೆ ಕಾಣಿಸಿದ್ದಾರೆ. ಅವರ ಮುಖ ತುಂಬಾನೇ ತೆಳ್ಳಗೆ ಆಗಿದೆ. ಅವರಿಗೆ ಏನಾಯಿತು ಎಂಬ ಆತಂಕ ಅಭಿಮಾನಿಗಳನ್ನು ಅತಿಯಾಗಿ ಕಾಡುತ್ತಿದೆ. ಅವರು ಬೇಗ ದಪ್ಪ ಆಗಬೇಕು ಎಂದು ಅನೇಕರು ಕೋರಿದರು.
ಇದನ್ನೂ ಓದಿ: ಸಿಕ್ಕಾಪಟ್ಟೆ ಸ್ಲಿಮ್ ಆದ ಜೂನಿಯರ್ ಎನ್‌ಟಿಆರ್; ಇದಕ್ಕೆ ಕಾರಣ ಪ್ರಶಾಂತ್ ನೀಲ್
ಈಗ ಮತ್ತೊಂದು ವಿಚಾರ ಏನೆಂದರೆ ಪ್ರಶಾಂತ್ ನೀಲ್ ಸಿನಿಮಾ ನಿಂತು ಹೋಗಿದೆ ಎಂದು ಹೇಳಲಾಗುತ್ತಾ ಇದೆ. ಕಥೆ ವಿಚಾರದಲ್ಲಿ ಜೂನಿಯರ್ ಎನ್ಟಿಆರ್ಗೆ ಅಸಮಾಧಾನ ಇದೆ ಎಂಬ ಸುದ್ದಿ ಹರಿದಾಡಿದೆ. ಹೀಗಾಗಿ, ಸಿನಿಮಾ ನಿಂತಿದೆ ಎಂಬ ಮಾತುಗಳು ಕೇಳಿ ಬಂದವು. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ‘ವಾರ್ 2’ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ನಟಿಸಿದ್ದರು. ಬಾಲಿವುಡ್ನ ಈ ಚಿತ್ರ ಹೀನಾಯವಾಗಿ ಸೋಲು ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



