ಕೇವಲ 1 ಕೋಟಿ ಗಳಿಕೆ; ತೀವ್ರ ಮಟ್ಟದಲ್ಲಿ ಕುಸಿದ ‘ಬಾಹುಬಲಿ: ದಿ ಎಪಿಕ್’ ಕಲೆಕ್ಷನ್
ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ: ದಿ ಎಪಿಕ್' ಮರು-ಬಿಡುಗಡೆ ಆರಂಭದಲ್ಲಿ ಉತ್ತಮ ಗಳಿಕೆ ಕಂಡರೂ, ಈಗ ತೀವ್ರ ಕುಸಿತ ಕಂಡಿದೆ. ಇತ್ತೀಚೆಗೆ ಕೇವಲ 13 ಲಕ್ಷ ರೂ. ಗಳಿಸಿದ್ದು, ರಾತ್ರಿ ವೇಳೆಗೆ 1 ಕೋಟಿ ರೂ. ಒಳಗೆ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಈ ಸಿನಿಮಾ ಒಟ್ಟಾರೆ 27 ಕೋಟಿ ರೂ. ಗಳಿಕೆ ಮಾಡಿದೆ.

ಎಸ್ಎಸ್ ರಾಜಮೌಳಿ ನಿರ್ದೇಶನ ಮಾಡಿದ ‘ಬಾಹುಬಲಿ’ ಸಿನಿಮಾ (Bahubali) ರಿಲೀಸ್ ಆಗಿ 10 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಮೊದಲ ಭಾಗ ಹಾಗೂ ಎರಡನೇ ಭಾಗ ಸೇರಿ ‘ಬಾಹುಬಲಿ: ದಿ ಎಪಿಕ್’ ಎಂದು ಮಾಡಿ ರಿಲೀಸ್ ಮಾಡಲಾಯಿತು. ಈ ಚಿತ್ರ ಮೊದಲ ಕೆಲವು ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ, ಈಗ ಚಿತ್ರದ ಗಳಿಕೆಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಬುಧವಾರ (ನವೆಂಬರ್ 4) ಈ ಸಿನಿಮಾ ಕೇವಲ 13 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ರಾತ್ರಿ ವೇಳೆಗೆ ಈ ಚಿತ್ರದ ಗಳಿಕೆ ಕೋಟಿ ಒಳಗೆ ಇರಲಿದೆ ಎನ್ನಲಾಗುತ್ತಿದೆ.
‘ಬಾಹುಬಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 650 ಕೋಟಿ ರೂಪಾಯಿ ಹಾಗೂ ‘ಬಾಹುಬಲಿ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗ ರಾಜಮೌಳಿ ಅವರು ಎರಡೂ ಸಿನಿಮಾಗಳನ್ನು ಸೇರಿಸಿ ‘ಬಾಹುಬಲಿ ದಿ ಎಪಿಕ್’ ಸಿನಿಮಾ ಮಾಡಿದರು. ಈ ಸಿನಿಮಾ ಮೊದಲ ಕೆಲವು ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ, ಈಗ ಚಿತ್ರದ ಗಳಿಕೆ ತಗ್ಗಿದೆ.
‘ಬಾಹುಬಲಿ: ದಿ ಎಪಿಕ್’ ಚಿತ್ರದ ಅವಧಿ ಮೂರು ಗಂಟೆ 44 ನಿಮಿಷ. ಇದು ತುಂಬಾನೇ ದೀರ್ಘ ಸಮಯ. ನೋಡಿದ ಚಿತ್ರಕ್ಕೆ ಮತ್ತೆ ಇಷ್ಟು ದೀರ್ಘ ಸಮಯ ವ್ಯಯಿಸಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸಿನಿಮಾ ನೋಡದಿರಲು ಇದೂ ಒಂದು ಕಾರಣ ಇರಬಹುದು. ಸದ್ಯ ಈ ಸಿನಿಮಾದ ಒಟ್ಟಾರೆ ಗಳಿಕೆ 27 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ‘ಬಾಹುಬಲಿ’: ಈಗ ದೇವರು v/s ಮನುಷ್ಯ
ಬಾಹುಬಲಿ ಸಿನಿಮಾ ರಿಲೀಸ್ ಆಗಿದ್ದು ಅಕ್ಟೋಬರ್ 31ರಂದು. ಈ ವೇಳೆ 9.65 ಕೋಟಿ ರೂಪಾಯಿ ಗಳಿಕೆ ಮಾಡಿತು. ಆ ಬಳಿಕ ಸಿನಿಮಾದ ಗಳಿಕೆ ತಗ್ಗುತ್ತಲೇ ಸಾಗಿದೆ. ಮಂಗಳವಾರ 1.65 ಕೋಟಿ ರೂಪಾಯಿ ಕಲೆಕ್ಷನ್. ಆದರೆ, ಬುಧವಾರ ಮಧ್ಯಾಹ್ನದ ವೇಳೆಗೆ ಈ ಸಿನಿಮಾ ಗಳಿಸಿದ್ದು ಕೇವಲ 13 ಲಕ್ಷ ರೂಪಾಯಿ. ರಾತ್ರಿ ವೇಳೆಗೆ ಒಂದು ಕೋಟಿ ರೂಪಾಯಿ ಒಳಗೆ ಕಲೆಕ್ಷನ್ ಆಗಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




