AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಗಿದೆ ಮಾರಿಹಬ್ಬ; ಮಹೇಶ್ ಬಾಬುಗೆ ಮೊದಲೇ ಎಚ್ಚರಿಸಿದ್ದ ಜೂ.ಎನ್​ಟಿಆರ್

ರಾಜಮೌಳಿ ಅವರ ಪರಿಪೂರ್ಣತೆಯ ಬಗ್ಗೆ ಜೂನಿಯರ್ ಎನ್​ಟಿಆರ್ ಮಹೇಶ್ ಬಾಬು ಅವರಿಗೆ ಎಚ್ಚರಿಕೆ ನೀಡಿದ್ದಾರೆ. 'RRR' ಸಮಯದಲ್ಲಿ ಅನುಭವಿಸಿದ ಸವಾಲುಗಳನ್ನು ನೆನಪಿಸಿಕೊಂಡ NTR, ರಾಜಮೌಳಿ ಜೊತೆ ಕೆಲಸ ಮಾಡುವುದು ಸುಲಭವಲ್ಲ ಎಂದು ಹೇಳಿದ್ದರು. 'ವಾರಣಾಸಿ' ಸಿನಿಮಾದಲ್ಲಿ ಮಹೇಶ್ ಬಾಬು ಇದೇ ಸವಾಲುಗಳನ್ನು ಎದುರಿಸುವ ನಿರೀಕ್ಷೆಯಿದೆ.

ನಿಂಗಿದೆ ಮಾರಿಹಬ್ಬ; ಮಹೇಶ್ ಬಾಬುಗೆ ಮೊದಲೇ ಎಚ್ಚರಿಸಿದ್ದ ಜೂ.ಎನ್​ಟಿಆರ್
ಮಹೇಶ್​-ಎನ್​ಟಿಆರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 20, 2025 | 8:06 AM

Share

ಜೂನಿಯರ್ ಎನ್​ಟಿಆರ್ ಹಾಗೂ ಮಹೇಶ್ ಬಾಬು ಮಧ್ಯೆ ಒಳ್ಳೆಯ ಗೆಳೆತನ ಇದೆ. ಜೂನಿಯರ್ ಎನ್​ಟಿಆರ್ ಅವರು ಸದ್ಯ ಪ್ರಶಾಂತ್ ನೀಲ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮಹೇಶ್ ಬಾಬು ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜಮೌಳಿ ಜೊತೆ ಸಿನಿಮಾ ಮಾಡಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಈ ಬಗ್ಗೆ ಜೂನಿಯರ್ ಎನ್​ಟಿಆರ್ ಅವರು ಈ ಮೊದಲೇ ಎಚ್ಚರಿಕೆ ನೀಡಿದ್ದರು.

ರಾಜಮೌಳಿ ಅವರು ಏನೇ ಮಾಡಿದರೂ ಪರ್ಫೆಕ್ಷನ್​ನ ಇಷ್ಟಪಡುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಅವರ ಜೊತೆ ಸಿನಿಮಾ ಮಾಡಬೇಕು ಎಂದರೆ ಅವರು ಬೇರೆ ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಂಡಿರಬಾರದು. ಇದನ್ನು ಒಪ್ಪಿದ ಬಳಿಕವೇ ಅವರು ಸಿನಿಮಾ ಮಾಡುತ್ತಾರೆ. ಈ ವಿಚಾರದ ಬಗ್ಗೆ ಜೂನಿಯರ್ ಎನ್​ಟಿಆರ್ ಎಚ್ಚರಿಕೆ ನೀಡಿದ್ದರು. ಜೂನಿಯರ್ ಎನ್​ಟಿಆರ್ ಅವರು ‘ಆರ್​ಆರ್​ಆರ್’  ಸಿನಿಮಾದಲ್ಲಿ ರಾಜಮೌಳಿ ಜೊತೆ ನಟಿಸಿದ್ದರು.

‘ರಾಜಮೌಳಿ ಸಿನಿಮಾ ಮಾಡ್ತಾ ಇದೀಯಲ್ಲ, ಅವರು ಎಲ್ಲ ಆಟ ಆಡಿಸ್ತಾರೆ’ ಎಂದು ಜೂನಿಯರ್​ ಎನ್​ಟಿಆರ್ ವೇದಿಕೆ ಒಂದರಲ್ಲಿ ಮಹೇಶ್ ಬಾಬುಗೆ ಹೇಳಿದ್ದರು. ಮೊನ್ನೆ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಸುಸ್ತಾಗಿದ್ದಾರೆ. ಸಿಂಪಲ್ ಆಗಿ ನಡೆದು ಬರ್ತೀನಿ ಎಂದು ಮಹೇಶ್ ಬಾಬು ಹೇಳಿದರಂತೆ. ಆದರೆ, ಇದನ್ನು ರಾಜಮೌಳಿ ಕೇಳಿಲ್ಲ. ವಿಶೇಷವಾದ ಎಂಟ್ರಿಯನ್ನು ಅವರು ಕೊಡಿಸಿದ್ದಾರೆ. ಸಿಂಪಲ್ ಶರ್ಟ್ ಹಾಕ್ಕೊಂಡು ನನ್ನ ಸ್ಟೈಲ್​ನಲ್ಲಿ ಬರ್ತೀನಿ ಎಂದು ಮಹೇಶ್ ಬಾಬು ಹೇಳಿದರಂತೆ. ಅದೂ ಆಗದು ಎಂದರಂತೆ.

‘ಇದು ಅನುಭವದ ಮಾತು’ ಎಂದು ಜೂನಿಯರ್ ಎನ್​ಟಿಆರ್ ಆ ಸಂದರ್ಭದಲ್ಲಿ ಹೇಳಿದ್ದರು. ಈಗ ಹಾಗೆಯೇ ಆಗಿದೆ. ಮಹೇಶ್ ಬಾಬು ಅವರು ಸಾಕಷ್ಟು ತ್ಯಾಗಗಳನ್ನು ಮಾಡಲು ಸಿದ್ಧರಾಗಿದ್ದಾರೆ. ಶೂಟ್ ಪರ್ಫೆಕ್ಟ್ ಆಗಿ ಬರೋವರೆಗೂ ಬಿಡೋದಿಲ್ಲ.

ಇದನ್ನೂ ಓದಿ: ಮಹೇಶ್ ಬಾಬು vs ಪ್ರಿಯಾಂಕಾ ಚೋಪ್ರಾ; ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

‘ನಾಟು ನಾಟು..’ ಹಾಡಲ್ಲಿ ಜೂನಿಯರ್ ಎನ್​ಟಿಆರ್ ಹಾಗೂ ರಾಮ್ ಚರಣ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಈ ಹಾಡಿಗಾಗಿ ಸಾಕಷ್ಟು ರೀಟೇಕ್​ಗಳನ್ನು ಮಾಡಲಾಗಿತ್ತು. ಇದನ್ನು ಜೂನಿಯರ್​ ಎನ್​ಟಿಆರ್ ಅವರು ಅನೇಕ ಬಾರಿ ಹೇಳಿಕೊಂಡಿದ್ದು ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More