AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ವಿರುದ್ಧ ಮಸಲತ್ತು ಶುರು ಮಾಡಿದ ಸ್ಪಂದನಾ; ಏರಿದ ಏಣಿಯನ್ನೇ ಒದ್ದರಾ?

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರು ಗೆಲ್ಲೋ ಕುದುರೆ ಆಗಿದ್ದಾರೆ. ಈ ಕಾರಣದಿಂದಲೇ ಅನೇಕರು ಗಿಲ್ಲಿ ಸುತ್ತ ಸುತ್ತುತ್ತಿದ್ದಾರೆ. ಇನ್ನೂ ಕೆಲವರು ಗಿಲ್ಲಿಯನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಸ್ಪಂದನಾ ಇಷ್ಟು ದಿನ ಗಿಲ್ಲಿ ಜೊತೆ ಚೆನ್ನಾಗಿಯೇ ಇದ್ದು, ಈಗ ಅವರ ವಿರುದ್ಧವೇ ಮಸಲತ್ತು ಮಾಡುತ್ತಿದ್ದಾರೆ.

ಗಿಲ್ಲಿ ವಿರುದ್ಧ ಮಸಲತ್ತು ಶುರು ಮಾಡಿದ ಸ್ಪಂದನಾ; ಏರಿದ ಏಣಿಯನ್ನೇ ಒದ್ದರಾ?
ಗಿಲ್ಲಿ-ಸ್ಪಂದನಾ
ರಾಜೇಶ್ ದುಗ್ಗುಮನೆ
|

Updated on:Nov 20, 2025 | 8:55 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBk 12) ಸ್ಪಂದನಾ ಹಾಗೂ ಗಿಲ್ಲಿ ನಟ ಫ್ರೆಂಡ್​ಶಿಪ್ ಗಮನ ಸೆಳೆದಿದೆ. ‘ಕಳ್ಳ ಪುಟ್ಟಿ’ ಎಂದು ಸ್ಪಂದನಾ ಅವರನ್ನು ಗಿಲ್ಲಿ ಪ್ರೀತಿಯಿಂದ ಕರೆಯುತ್ತಿದ್ದಾರೆ. ಗಿಲ್ಲಿ ಅವರು ಸ್ಪಂದನಾನ ಸಾಕಷ್ಟು ಗೌರವಿಸುತ್ತಾರೆ. ವಿಶೇಷ ಪ್ರೀತಿ ತೋರಿಸುತ್ತಾರೆ. ಆದರೆ, ಸ್ಪಂದನಾ ಅವರು ಗಿಲ್ಲಿ ವಿರುದ್ಧವೇ ಈಗ ಮಸಲತ್ತು ಮಾಡುತ್ತಿದ್ದಾರೆ. ಧನುಷ್ ಜೊತೆ ಸೇರಿಕೊಂಡು ಗಿಲ್ಲಿ ವಿರುದ್ಧ ಮಾತನಾಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರು ಗೆಲ್ಲೋ ಕುದುರೆ ಆಗಿದ್ದಾರೆ. ಈ ಕಾರಣದಿಂದಲೇ ಅನೇಕರು ಗಿಲ್ಲಿ ಸುತ್ತ ಸುತ್ತುತ್ತಿದ್ದಾರೆ. ಇನ್ನೂ ಕೆಲವರು ಗಿಲ್ಲಿಯನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಸ್ಪಂದನಾ ಇಷ್ಟು ದಿನ ಗಿಲ್ಲಿ ಜೊತೆ ಚೆನ್ನಾಗಿಯೇ ಇದ್ದು, ಈಗ ಅವರ ವಿರುದ್ಧವೇ ಮಸಲತ್ತು ಮಾಡುತ್ತಿದ್ದಾರೆ.

ಈ ಮೊದಲು ಸ್ಪಂದನಾ ಅವರು ರಕ್ಷಿತಾ ಶೆಟ್ಟಿ ಜೊತೆ ಒಳ್ಳೆಯ ರೀತಿಯಲ್ಲಿ ಇದ್ದರು. ಆದರೆ, ಇತ್ತೀಚೆಗೆ ಸ್ಪಂದನಾ ಅವರು ರಕ್ಷಿತಾ ಬಗ್ಗೆ ಅಸಮಧಾನ ಹೊರಹಾಕಿದ್ದರು. ‘ರಕ್ಷಿತಾ ಮುಗ್ಧೆ ಅಲ್ಲ. ಅವಳು ಪ್ಲ್ಯಾನ್ ಮಾಡಿಕೊಂಡು ಆಡುತ್ತಿದ್ದಾಳೆ’ ಎಂದು ಹೇಳಿದ್ದರು. ರಕ್ಷಿತಾ ಬೆನ್ನ ಹಿಂದೆ ನಿಂತು ಅನೇಕ ಬಾರಿ ಅವರು ಈ ರೀತಿಯ ಮಾತನ್ನು ಹೇಳಿದ್ದಾರೆ.

ಈಗ ಗಿಲ್ಲಿ ಬಗ್ಗೆ ಮಾತನಾಡುತ್ತಿದ್ದಾರೆ. ಧನುಷ್ ಜೊತೆ ಸ್ಪಂದನಾ ಮಾತುಕತೆ ನಡೆಸಿದ್ದಾರೆ. ‘ಎಲ್ಲರೂ ಗಿಲ್ಲಿಯನ್ನು ಅವಾಯ್ಡ್ ಮಾಡಿದರೆ ಅವನು ದಾರಿಗೆ ಬರ್ತಾನೆ’ ಎಂದು ಧನುಷ್ ಹೇಳಿದರು. ‘ಏನೇ ಆದರೂ ಕಾವ್ಯಾ ಅವನನ್ನು ದೂರ ತಳ್ಳಲ್ಲ’ ಎಂದು ಸ್ಪಂದನಾ ಹೇಳಿದರು. ‘ಕಾವ್ಯಾಗೂ ಲಾಭ ಇದೆ’ ಎಂದು ಧನು ಹೇಳಿದರು. ಆಗ ಸ್ಪಂದನಾ ಅವರು, ‘ಇದು ಕಾವ್ಯಾಗೂ ಗೊತ್ತು ಎನಿಸುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್

ಸ್ಪಂದನಾ ಅವರು ಈ ರೀತಿ ಬದಲಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ‘ಗಿಲ್ಲಿ ಇಲ್ಲ ಎಂದಿದ್ರೆ ನೀವು ಇಲ್ಲಿವರೆಗೆ ಬರುತ್ತಲೇ ಇರುತ್ತಿರಲಿಲ್ಲ, ಏರಿದ ಏಣಿಯನ್ನು ಒದೆಯಬೇಡಿ’ ಎಂದು ಅನೇಕರು ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:55 am, Thu, 20 November 25

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ