AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ಆರ್​ಜಿವಿ

ಮುಂಬೈ ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಪೋಲಿಸ್ ಕಂಪನಿ' ಎಂಬ ಹೊಸ ಸಿನಿಮಾ ಘೋಷಿಸಿದ್ದಾರೆ. 300ಕ್ಕೂ ಹೆಚ್ಚು ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್ ಮಾಡಿದ ವಿಶೇಷ ಪೋಲಿಸ್ ಪಡೆಯ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ನಟ ಹರ್ಷವರ್ಧನ್ ರಾಣೆ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಪಾತ್ರದಲ್ಲಿ ನಟಿಸಲಿದ್ದಾರೆ.

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ಆರ್​ಜಿವಿ
ಆರ್​ಜಿವಿ
ರಾಜೇಶ್ ದುಗ್ಗುಮನೆ
|

Updated on: Aug 11, 2026 | 7:35 AM

Share

ಮುಖ್ಯಾಂಶಗಳು

  • 300 ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್ ಕಥೆ
  • 'ಪೋಲಿಸ್ ಕಂಪನಿ' ಸಿನಿಮಾ ಘೋಷಣೆ
  • ದಯಾ ನಾಯಕ್ ಪಾತ್ರದಲ್ಲಿ ಹರ್ಷವರ್ಧನ್ ನಟನೆ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೆ ಮುಂಬೈ ಅಂಡರ್‌ವರ್ಲ್ಡ್ ಕಥೆಯನ್ನು ತೆರೆಗೆ ತರಲು ಸಿದ್ಧರಾಗಿದ್ದಾರೆ. ‘ಡಿ ಕಂಪನಿ’ಗಿಂತಲೂ ಅತ್ಯಂತ ಅಪಾಯಕಾರಿಯಾದ ಪಡೆಯೊಂದರ ಕಥೆಯನ್ನು ಅವರು ಹೇಳಲಿದ್ದಾರೆ. ತಮ್ಮ ಹೊಸ ಸಿನಿಮಾಗೆ ‘ಪೋಲಿಸ್ ಕಂಪನಿ’ ಎಂದು ಹೆಸರಿಟ್ಟಿದ್ದಾರೆ. ಪ್ರಸಿದ್ಧ ನಟ ಹರ್ಷವರ್ಧನ್ ರಾಣೆ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಆರ್​​ಜಿವಿ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ಅಂಡರ್‌ವರ್ಲ್ಡ್ ಮತ್ತು ಪೋಲಿಸ್ ಕಂಪನಿ

ಸಿನಿಮಾ ಶೀರ್ಷಿಕೆಯ ಹಿನ್ನೆಲೆಯನ್ನು ವರ್ಮಾ ಸ್ಪಷ್ಟವಾಗಿ ವಿವರಿಸಿದ್ದಾರೆ. ‘ಪೋಲಿಸ್ ಎನ್ನುವುದು ಒಂದು ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿದೆ. ಅಂಡರ್‌ವರ್ಲ್ಡ್ ಕಂಪನಿಯು ಹಣ ಸಂಪಾದಿಸುವ ಅಕ್ರಮ ಜಾಲವಾಗಿದೆ. ಆದರೆ ಸಂಸ್ಥೆಗೆ ಹೆಚ್ಚಿನ ಅಧಿಕಾರ ಸಿಕ್ಕಾಗ ಅದು ಕಂಪನಿಯಾಗುತ್ತದೆ. ದಾವೂದ್ ಇಬ್ರಾಹಿಂ ತನ್ನ ವಿರೋಧಿಗಳನ್ನು ಮಟ್ಟಹಾಕಿ ದುಬೈಗೆ ಓಡಿಹೋಗಿದ್ದ. ನಂತರ ಛೋಟಾ ರಾಜನ್ ಜೊತೆ ಆತನಿಗೆ ಭಿನ್ನಾಭಿಪ್ರಾಯ ಮೂಡಿತು’ ಎಂದು ಬರೆದುಕೊಂಡಿದ್ದಾರೆ ಆರ್​​ಜಿವಿ.

300 ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್

‘ದಾವೂದ್ ಮತ್ತು ರಾಜನ್ ನಡುವಿನ ವೈರತ್ವದಿಂದ ಮುಂಬೈನಲ್ಲಿ ಅಪರಾಧ ಹೆಚ್ಚಾಯಿತು. ಅಪರಾಧ ಜಗತ್ತಿನ ಕತ್ತಲಿಗೆ ಅನೇಕ ಯುವಕರು ಬಲಿಯಾಗುತ್ತಿದ್ದರು. ರೌಡಿಗಳನ್ನು ತಡೆಯಲು ಪೋಲಿಸ್ ವ್ಯವಸ್ಥೆ ಸಂಪೂರ್ಣವಾಗಿ ಸೋತಿತ್ತು. ಆ ಸಮಯದಲ್ಲಿ ಸರ್ಕಾರ ಒಂದು ವಿಶೇಷ ಪೋಲಿಸ್ ಪಡೆಯನ್ನು ರಚಿಸಿತು. ಈ ಪಡೆ 1997 ರಿಂದ 2004 ರ ನಡುವೆ ಕಾರ್ಯಾಚರಣೆ ನಡೆಸಿತು. ಕೇವಲ ಏಳು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಗ್ಯಾಂಗ್‌ಸ್ಟರ್‌ಗಳನ್ನು ಹೊಡೆದುರುಳಿಸಿತು’ ಎಂದಿದ್ದಾರೆ ಆರ್​ಜಿವಿ.

ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಜೊತೆ ಗುಟ್ಟಾಗಿ ಮದುವೆ ಆಗಿದ್ದರು ಬಾಲಿವುಡ್ ಸ್ಟಾರ್ ನಟಿ

ದಯಾ ನಾಯಕ್ ಪಾತ್ರದಲ್ಲಿ ಹರ್ಷವರ್ಧನ್

ಈ ಎನ್‌ಕೌಂಟರ್ ಪಡೆಯ ರೋಮಾಂಚಕ ಕಥೆಯೇ ‘ಪೋಲಿಸ್ ಕಂಪನಿ’. ಖ್ಯಾತ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ರಿಯಲ್ ಜೀವನದ ಪಾತ್ರದಿಂದ ಈ ಕಥೆ ಪ್ರೇರಿತವಾಗಿದೆ. ದಯಾ ನಾಯಕ್ ಪಾತ್ರದಲ್ಲಿ ನಟ ಹರ್ಷವರ್ಧನ್ ರಾಣೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಗಣ ಇರಲಿದೆ. ‘ಪೋಲಿಸ್ ಸ್ಟೇಷನ್ ಮೇಂ ಭೂತ್’ ಚಿತ್ರದಲ್ಲೂ ಹರ್ಷವರ್ಧನ್ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ