‘ಸತ್ತೋದರೂ ತೊಂದರೆ ಇಲ್ಲ, ಮರ್ಯಾದೆ ಬಿಟ್ಟು ಬದುಕಲಾರೆ’: ಕಣ್ಣೀರು ಹಾಕುತ್ತಾ ಹೇಳಿದ ಅಶ್ವಿನಿ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಜಾನ್ವಿ ಹಾಗೂ ಅಶ್ವಿನಿ ಗೌಡ ನಾಮಿನೇಟ್ ಆಗಿದ್ದಾರೆ. ಅಶ್ವಿನಿ ಈ ವಾರ ಕಣ್ಣೀರು ಹಾಕುತ್ತಿದ್ದು, ಜಾನ್ವಿ ಸಮಾಧಾನ ಮಾಡುತ್ತಿದ್ದಾರೆ. ಅವರನ್ನು ಗಿಲ್ಲಿ ಪದೇ ಪದೇ ಹೀಯಾಳಿಸಿದ್ದನ್ನು ಅವರ ಬಳಿ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಕಣ್ಣೀರು ಹಾಕಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಜಾನ್ವಿ ಹಾಗೂ ಅಶ್ವಿನಿ ಗೌಡ (Ashwini Gowda) ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಇವರು ಸದಾ ಒಟ್ಟಿಗೆ ಇರುತ್ತಾರೆ. ಒಂದು ಹಂತದಲ್ಲಿ ಇವರ ಮಧ್ಯೆ ಕಿರಿಕ್ ಆಗಿತ್ತು. ಆದರೆ, ಈಗ ಅದು ಪ್ಯಾಚಪ್ ಆಗಿದೆ. ಹೀಗಾಗಿ, ಇಬ್ಬರೂ ಹಾಯಾಗಿ ಮಾತನಾಡಿಕೊಂಡಿದ್ದಾರೆ. ಒಬ್ಬರಿಗೆ ಒಬ್ಬರು ಹೆಗಲು ಕೊಡುತ್ತಿದ್ದಾರೆ. ಈ ಮಧ್ಯೆ ಅಶ್ವಿನಿ ಗೌಡ ಅವರು ಈ ವಾರ ಆಗಾಗ ಕಣ್ಣೀರು ಹಾಕುತ್ತಿದ್ದಾರೆ. ಆಗ ಜಾನ್ವಿ ಜೊತೆಗಿದ್ದು ಸಮಾಧಾನ ಮಾಡುತ್ತಿದ್ದಾರೆ. ಇದನ್ನು ಅನೇಕರು ಮೊಸಳೆ ಕಣ್ಣೀರು ಎಂದು ಕರೆದಿದ್ದಾರೆ. ಹೀಗಿರುವಾಗಲೇ ಅಶ್ವಿನಿ ಗೌಡ ಹೇಳಿದ ಒಂದು ಮಾತು ಗಮನ ಸೆಳೆದಿದೆ.
ಅಶ್ವಿನಿ ಗೌಡ ಅವರು ಬಹುತೇಕ ಸಂದರ್ಭದಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ. ಆದರೆ, ಅವರಿಗೆ ಯಾರಾದರೂ ಏಕವಚನ ಬಳಕೆ ಮಾಡಿದರೆ ಸಿಟ್ಟು ಬರುತ್ತದೆ. ‘ಮೊದಲು ಗೌರವ ಕೊಡು’ ಎಂದು ಕೇಳುತ್ತಾರೆ. ಇದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ. ಅವರನ್ನು ಗಿಲ್ಲಿ ಪದೇ ಪದೇ ಹೀಯಾಳಿಸಿದ್ದನ್ನು ಅವರ ಬಳಿ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಕಣ್ಣೀರು ಹಾಕಿದ್ದಾರೆ.
ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಯಾವಾಗಲೂ ಫೈಟ್ ನಡೆಯುತ್ತಲೇ ಇರುತ್ತದೆ. ಮಾತಿನ ಚಕಮಕಿ ನಡೆದಾಗ ಅಶ್ವಿನಿ ಗೌಡ ತಿರುಗೇಟು ನೀಡುತ್ತಾರೆ. ಆದರೆ, ಈ ವಾರದಿಂದ ಅವರು ಕಣ್ಣೀರು ಹಾಕೋದನ್ನು ಆರಂಭಿಸಿದ್ದಾರೆ. ಇಂತಹ ಬದಲಾವಣೆ ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಗಿಲ್ಲಿ ಮಾತಿನಿಂದ ನೊಂದು ಅಶ್ವಿನಿ ಗೌಡ ಅವರು ಒಂದು ಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ: ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್
ಗಿಲ್ಲಿ ಗೌರವ ಕೊಡೋದಿಲ್ಲ ಎಂಬುದು ಅಶ್ವಿನಿ ಆರೋಪ. ಟಾಸ್ಕ್ ನಡೆಯುವಾಗ ಅಶ್ವಿನಿ ಹಾಗೂ ಗಿಲ್ಲಿ ಉಸ್ತುವಾರಿ ಆಗಿದ್ದರು. ಅಶ್ವಿನಿ ಏಕವಚನ ಬಳಕೆ ಮಾಡಿದ್ದಕ್ಕೆ ಗಿಲ್ಲಿ ಕೂಡ ಏಕವಚನ ಬಳಸಿದರು. ಈ ವಿಷಯವಾಗಿ ಮಾತನಾಡುವಾಗ, ‘ಕಾಮಿಡಿಗೂ, ತೇಜೋವಧೆಗೂ ವ್ಯತ್ಯಾಸ ಇದೆ’ ಎಂದರು ಧ್ರುವಂತ್. ಆಗ ಅಶ್ವಿನಿ ಅವರು ‘ಏಕವಚನ ಬಳಸೋಕೆ ಅವನು ಯಾರು? ಎಷ್ಟು ನೋವಾಗುತ್ತದೆ. ಸತ್ತೋಗಬಹುದು, ಆದರೆ, ಮರ್ಯಾದಿ ಬಿಟ್ಟು ಬದುಕೋಕೆ ಆಗಲ್ಲ’ ಎಂದು ಅಶ್ವಿನಿ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




