AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​​ಟಿಆರ್​-ನೀಲ್ ಸಿನಿಮಾ ನಿಂತಿದೆ ಎಂದವರಿಗೆ ರವಿ ಬಸ್ರೂರು ಕೊಟ್ಟರು ಉತ್ತರ

ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್​ಟಿಆರ್ ಸಿನಿಮಾ ನಿಂತಿದೆ ಎಂಬ ವದಂತಿಗಳಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ತೆರೆ ಎಳೆದಿದ್ದಾರೆ. ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ ಎಂದು ಖಚಿತಪಡಿಸಿದ್ದಾರೆ. ಕೆಜಿಎಫ್‌ಗಿಂತ ಭಿನ್ನವಾದ, ಹೊಸ ರೀತಿಯ ಸಂಗೀತವನ್ನು ಈ ಚಿತ್ರ ಹೊಂದಿರಲಿದೆ ಎಂದು ರವಿ ಬಸ್ರೂರು ತಿಳಿಸಿದ್ದಾರೆ.

ಎನ್​​ಟಿಆರ್​-ನೀಲ್ ಸಿನಿಮಾ ನಿಂತಿದೆ ಎಂದವರಿಗೆ ರವಿ ಬಸ್ರೂರು ಕೊಟ್ಟರು ಉತ್ತರ
ರವಿ, ಎನ್​ಟಿಆರ್​,ಪ್ರಶಾಂತ್
ರಾಜೇಶ್ ದುಗ್ಗುಮನೆ
|

Updated on:Nov 18, 2025 | 3:08 PM

Share

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ಟಿಆರ್ (JR NTR) ಸಿನಿಮಾ ಬಗ್ಗೆ ಇತ್ತೀಚೆಗೆ ಸುದ್ದಿ ಒಂದು ಹರಿದಾಡಿತ್ತು. ಈ ಸಿನಿಮಾ ದೃಶ್ಯಗಳ ಬಗ್ಗೆ ಜೂನಿಯರ್​ ಎನ್​ಟಿಆರ್​ಗೆ ಖುಷಿ ಇಲ್ಲ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಈ ಕಾರಣದಿಂದಲೇ ಸಿನಿಮಾ ನಿಂತಿದೆ ಎಂದೂ ಹೇಳಲಾಗಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿತ್ತು. ಕೊನೆಗೂ ಈ ವದಂತಿಗೆ ತೆರೆ ಬಿದ್ದಿದೆ. ಈ ಚಿತ್ರದ ಸಂಗೀತ ಸಂಯೋಜಕ, ಕನ್ನಡಿಗ ರವಿ ಬಸ್ರೂರು ಅವರು ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರವಿ ಬಸ್ರೂರು ಅವರು ಪ್ರಶಾಂತ್ ನೀಲ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ‘ಉಗ್ರಂ’ ಸಿನಿಮಾದಲ್ಲಿ ಇದೇ ಜೋಡಿ ಕೆಲಸ ಮಾಡಿತ್ತು. ‘ಕೆಜಿಎಫ್’ ಹಾಡು ಹಾಗೂ ಬಿಜಿಎಂ ಸಿನಿಮಾನ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಈ ಕಾರಣದಿಂದಲೇ ಪ್ರಶಾಂತ್ ನೀಲ್ ತಮ್ಮ ನಿರ್ದೇಶನದ ಸಿನಿಮಾಗಳ ಸಂಗೀತದ ಜವಾಬ್ದಾರಿಯನ್ನು ರವಿ ಬಸ್ರೂರು ಅವರಿಗೆ ನೀಡುತ್ತಾರೆ. ಈಗ ರವಿ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿದ್ದಾರೆ.

‘ಜೂನಿಯರ್ ಎನ್​ಟಿಆರ್ ಹಾಗೂ ನೀಲ್ ಸಿನಿಮಾ ಸಂಗೀತ ಹಾಗೂ ದೃಶ್ಯದಲ್ಲಿ ಅದ್ಭುತವಾಗಿ ಮೂಡಿ ಬರಲಿದೆ. ಕೆಜಿಎಫ್ ಹಾಗೂ ಸಲಾರ್​ಗಿಂತ ಈ ಚಿತ್ರದ ಮ್ಯೂಸಿಕ್ ಭಿನ್ನವಾಗಿ ಇರಲಿದೆ. ಹೊಸ ರೀತಿಯ ವಾದ್ಯ, ಎನರ್ಜಿ ಇರಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಸ್ಲಿಮ್ ಆದ ಜೂನಿಯರ್ ಎನ್​ಟಿಆರ್; ಇದಕ್ಕೆ ಕಾರಣ ಪ್ರಶಾಂತ್ ನೀಲ್

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಾಧಾರಣ ಎನಿಸಿಕೊಂಡಿತು. ಆ ಬಳಿಕ ಜೂನಿಯರ್ ಎನ್​ಟಿಆರ್​ ಅವರು ‘ವಾರ್ 2’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಡಿಸಾಸ್ಟರ್ ಎನಿಸಿಕೊಂಡಿತು. ಹೀಗಾಗಿ, ಜೂನಿಯರ್​ ಎನ್​ಟಿಆರ್ ಅಭಿಮಾನಿಗಳು ಈ ಚಿತ್ರದಿಂದ ಹೆಚ್ಚಿನದ್ದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಸಿನಿಮಾ ನಿಂತಿದೆ ಎಂಬ ವದಂತಿ ಕೇಳಿ ಅವರು ಆತಂಕಗೊಂಡಿದ್ದರು. ಈಗ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:06 pm, Tue, 18 November 25

ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
ಟಾಪ್​ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್
‘37 ಕೋಟಿ ವೋಟ್ ಅವನಿಗೆ ಬಿದ್ದಿದೆ’; ಹನುಮಂತನ ಪ್ರಕಾರವೂ ಗಿಲ್ಲಿನೇ ವಿನ್ನರ್
ಕಾರುಗಳಿಗೆ ಡಿಕ್ಕಿ ಹೊಡೆದು, ಟೋಲ್ ಸಿಬ್ಬಂದಿಯ ಎಳೆದೊಯ್ದ ಟ್ರಕ್
ಕಾರುಗಳಿಗೆ ಡಿಕ್ಕಿ ಹೊಡೆದು, ಟೋಲ್ ಸಿಬ್ಬಂದಿಯ ಎಳೆದೊಯ್ದ ಟ್ರಕ್
ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ
ಟ್ರಾಫಿಕ್​ ಜಾಮ್‌ನಲ್ಲಿ ಸಿಲುಕಿದ ಸಿಎಂ ಕಾರು: ಅಧಿಕಾರಿಗಳು ಹರಸಾಹಸ
ಕಾರಿನಲ್ಲಿ ಕುಳಿತು ರಾಜಾರೋಷವಾಗಿ ಗನ್ ತೋರಿಸಿದ ವ್ಯಕ್ತಿ!
ಕಾರಿನಲ್ಲಿ ಕುಳಿತು ರಾಜಾರೋಷವಾಗಿ ಗನ್ ತೋರಿಸಿದ ವ್ಯಕ್ತಿ!