AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ರೆ ಪಲಾಯನ: ಪುರಷರೊಂದಿಗೆ ಲೈಂಗಿಕ ಸಂಬಂಧ, ಸಲಿಂಗಕಾಮಿ ಪತಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ

ಮದುವೆಯಾದರೂ ಸಹ ಲೈಂಗಿಕ ಸಂಪರ್ಕ ಮುಂದೂಡುತ್ತಲ್ಲೇ ಬರುತ್ತಿದ್ದ ಪತಿ ನಡವಳಿಕೆ ಮೇಲೆ ಅನುಮಾನಗೊಂಡ ಪತ್ನಿ ಆತನ ವಾಟ್ಸಪ್​ ಹಾಗು ಮೆಸೆಂಜರ್​ ನೋಡಿ ಶಾಕ್ ಆಗಿದ್ದಾಳೆ. ಯಾಕಂದ್ರೆ, ತನ್ನ ಗಂಡ ಬೇರೊಂದು ಪುರಷನೊಂದಿಗೆ ಲೈಂಗಿಕತೆಗೆ ಸಂಬಂಧಪಟ್ಟಂತಹ ಫೊಟೋಗಳು ಸಿಕ್ಕಿವೆ. ಇದೀಗ ಮಹಿಳೆಗೆ ತನ್ನ ಪತಿ ಸಲಿಂಗಕಾಮಿ ಎಂದು ತಿಳಿದಿದ್ದು, ಈ ಬಗ್ಗೆ ನ್ಯಾಯಕ್ಕಾಗಿ ಪೊಲೀಸ್​ ಮೆಟ್ಟಿಲೇರಿದ್ದಾಳೆ.

ಮಕ್ಕಳು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ರೆ ಪಲಾಯನ: ಪುರಷರೊಂದಿಗೆ ಲೈಂಗಿಕ ಸಂಬಂಧ, ಸಲಿಂಗಕಾಮಿ ಪತಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ
ಸಾಂದರ್ಭಿಕ ಚಿತ್ರ
Jagadisha B
| Edited By: |

Updated on:Aug 16, 2023 | 8:34 AM

Share

ಬೆಂಗಳೂರು, (ಆಗಸ್ಟ್ 16): ಸಾವಿರ ಸುಳ್ಳು ಹೇಳಿ ಒಂದು ಮದುವೆ (Marriage) ಮಾಡು ಎಂಬ ಗಾದೆ ಇದೆ. ಏಕೆಂದರೆ ಮದುವೆಯಾಗುವ ಜೋಡಿ ಜೀವನಪರ್ಯಂತ ಒಬ್ಬರಿಗೊಬ್ಬರು ಜೊತೆ ಇರಬೇಕಾಗಿರುವುದರಿಂದ ಪ್ರತಿಯೊಬ್ಬರು ತಮ್ಮ ಕನಸಿನ ಹುಡುಗ ಅಥವಾ ಹುಡುಗಿ ಹೀಗೆ ಇರಬೇಕೆಂದು ಬಯಸುತ್ತಾರೆ. ಆದ್ರೆ, ಬೆಂಗಳೂರಿನಲ್ಲೊಂದು(Bengaluru) ಸುಳ್ಳು ಹೇಳಿ ಮದ್ವೆ ಮಾಡಿದ್ದು, ಇದೀಗ ಮಹಿಳೆಯೊಬ್ಬರು ಪೊಲೀಸ್ ಮೆಟ್ಟಿಲೇರಿದ್ದಾಳೆ. ಹೌದು….ಸಲಿಂಗಕಾಮಿ(Gay) ಎನ್ನುವುದು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿ  ಮಹಿಳೆ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕಳೆದ ಮೂರು ವರ್ಷದ ಹಿಂದೆ ಮದುವೆಯಾದರೂ ಸಹ ಪತಿ ಲೈಂಗಿಕ ಸಂಪರ್ಕ ಮುಂದೂಡುತ್ತಲ್ಲೇ ಬರುತ್ತಿದ್ದ. ಮಹಿಳೆಯ ಕುಟುಂಬಸ್ಥರು ಸಹ ಮಕ್ಕಳು ಮಾಡಿಕೊಳ್ಳುವಂತೆ ಒತ್ತಾತಿಸಿದ್ದಾರೆ. ಆದ್ರೆ, ಮಹಿಳೆ ಮಕ್ಕಳ ಬಗ್ಗೆ ಮಾತನಾಡಿದರೆ ಮರು ಉತ್ತರಿಸದೆ ಪಲಾಯನ ಮಾಡುತ್ತಿದ್ದ. ಅದು ಅಲ್ಲದೇ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ. ಇದರಿಂದ ಗಂಡನ ನಡವಳಿಕೆ ಕಂಡು ಅನುಮಾನಗೊಂಡ ಪತ್ನಿ, ಆತನ ವಾಟ್ಸಪ್, ಮೇಸೆಂಜರ್ ಚೆಕ್​ ಮಾಡಿದ್ದು, ಅದರಲ್ಲಿನ ಮೆಸೇಜ್ ಹಾಗೂ ಫೋಟೋಗಳನ್ನು ನೋಡಿ ಶಾಕ್ ಆಗಿದ್ದಾಳೆ. ಯಾಕಂದ್ರೆ, ತಾನಿರಬೇಕಾದ ಜಾಗದಲ್ಲಿ ಇದ್ದಿದ್ದು ಪರಪುರುಷ.

ಇದನ್ನೂ ಓದಿ: ಸಲುಗೆ ಬೆಳೆಸಿ ಓಯೋ ರೂಮ್​ಗೆ ಕರೆದು ವಿಡಿಯೋ ರೆಕಾರ್ಡ್, ಬಳಿಕ ಹಣಕ್ಕೆ ಬೇಡಿಕೆ ಇಟ್ಟ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

ವಾಟ್ಸಪ್ ಹಾಗು ಮೆಸೆಂಜರ್​​ನಲ್ಲಿ ಪರಪುರುಷನ ಜೊತೆ ಅತಿ ಸಲುಗೆಯಿಂದ ಇರುವ ಫೋಟೋಗಳು ಪತ್ತೆಯಾಗಿವೆ. ಅಲ್ಲದೇ ತಬ್ಬಿಕೊಂಡಿರುವ ಹಾಗೂ ಲೈಂಗಿಕತೆಗೆ ಸಂಬಂಧಪಟ್ಟಂತಹ ಫೊಟೋಗಳು ಸಿಕ್ಕಿವೆ. ಇದರ ಬಗ್ಗೆ  ಪತ್ನಿ  ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಸಿಕ್ಕಿದ್ದು ಮಹಿಳೆಗೆ ಮಾನಸಿಕ ಹಾಗೂ ದೈಹಿಕ‌ ಹಲ್ಲೆ. ಅಲ್ಲದೇ ಈ ಬಗ್ಗೆ ಪ್ರಶ್ನೆ ಮಾಡಿದರೆ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿಗೆ ಬೆದರಿಸುತ್ತಿದ್ದ. ಈ ಬಗ್ಗೆ ಮಹಿಳೆ ತನ್ನ ಪತಿಯ ಪೋಷಕರಿಗೆ ಹೇಳಿದರೆ ಅನುಸರಿಸಿಕೊಂಡು ಹೋಗಿ ಎಂದು ಕೈ ತೊಳೆದು ಸುಮ್ಮನಾಗಿದ್ದಾರೆ. ಇದರಿಂದ ರೋಸಿ ಹೋದ ಮಹಿಳೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

160 ಗ್ರಾಂ ಚಿನ್ನಾಭರಣ ಹಾಗೂ ನಗದು ಹಣ ಪಡೆದು ಸಲಿಂಗಕಾಮಿ ಜೊತೆ ಮದುವೆ ಮಾಡಿಸಿದ್ದಾರೆ. ತಮ್ಮ ಮಗ ಸಲಿಂಗಕಾಮಿ ಎನ್ನುವುದನ್ನು ಮುಚ್ಚಿಟ್ಟು ತನ್ನ ಜೊತೆ ಮದುವೆ ಮಾಡಿದ್ದಾರೆ ಎಂದು ಮಹಿಳೆ ಪತಿ ಹಾಗೂ ಆತನ ಪೋಷಕರು ವಿರುದ್ಧ ದೂರು ದಾಖಲಿಸಿದ್ದಾಳೆ. ಮಗನ ವಿಚಾರ ಗೊತ್ತಿದ್ದು ಪೊಷಕರು ಮದ್ವೆ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:34 am, Wed, 16 August 23