ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಕರ್ನಾಟಕದಲ್ಲಿ 15% ರಷ್ಟು ಅಕ್ಕಿ ದರ ಏರಿಕೆ, ಕಾರಣವೇನು?
ಜುಲೈ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ. ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ ₹ 50 ರಿಂದ ₹ 60 ರೂಗೆ ಏರಿಕೆಯಾಗಿದೆ. ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಕೆ.ಜಿಗೆ ₹ 62 ರಿಂದ ₹ 64 ಇತ್ತು. ಆದ್ರೆ ಈಗ ₹ 70 ರಿಂದ ₹ 74 ರವರೆಗೆ ತಲುಪಿದೆ.
ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆಯು ಸರಾಸರಿ 15% ರಷ್ಟು ಏರಿಕೆ ಕಂಡಿದೆ(Rice Price Rises). ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ. ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಜುಲೈ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ. ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ ₹ 50 ರಿಂದ ₹ 60 ರೂಗೆ ಏರಿಕೆಯಾಗಿದೆ. ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಕೆ.ಜಿಗೆ ₹ 62 ರಿಂದ ₹ 64 ಇತ್ತು. ಆದ್ರೆ ಈಗ ₹ 70 ರಿಂದ ₹ 74 ರವರೆಗೆ ತಲುಪಿದೆ. ಅನಿಯಮಿತ ಮಳೆಯಿಂದಾಗಿ ಭತ್ತದ ಉತ್ಪಾದನೆ ಆಗಿಲ್ಲ. ಇದು ಈಗ ಆತಂಕ ತಂದಿದೆ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸ್ಟೀಮ್ ರೈಸ್ ಮತ್ತು ಭಕ್ತ ಇತರವುಗಳಲ್ಲಿ 20% ರಷ್ಟು ಹೆಚ್ಚಳವಾಗಿದೆ ಎಂದು ಯಶವಂತಪುರ ಎಪಿಎಂಸಿ ಯಾರ್ಡ್ ಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಹೇಳಿದರು.
ಇದನ್ನೂ ಓದಿ: ಟೊಮೆಟೊ ಆಯ್ತು, ಈಗ ಬಾಳೆಹಣ್ಣಿಗೂ ತಟ್ಟಿತು ಬೆಲೆ ಏರಿಕೆ ಬಿಸಿ; ಬೆಂಗಳೂರಿನಲ್ಲಿ ಕೆಜಿಗೆ 100 ರೂ. ದಾಟಿದ ದರ
ಇಡ್ಲಿ, ದೋಸೆ ಮತ್ತು ಬಿಪಿಎಲ್ ಕುಟುಂಬಗಳು ಬಳಸುವ ಅಕ್ಕಿ ಕೆಜಿಗೆ ₹ 30 ರಿಂದ ₹ 36 ಕ್ಕೆ ಏರಿದೆ, ಅದು ಸುಮಾರು 20% ಹೆಚ್ಚಳವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಅಕ್ಕಿಯ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಅದು ಕಡಿಮೆಯಾಗಬಹುದು ಎಂದು ಉದ್ಯಮದ ಮೂಲಗಳು ತಿಳಿಸಿವೆ. ಕಟಾವು ಪೂರ್ಣಗೊಂಡಾಗ ನವೆಂಬರ್ ವೇಳೆಗೆ ಅಕ್ಕಿ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಅಕ್ಕಿ ಪೂರೈಕೆ ಕಡಿಮೆಯಾಗಿದ್ದು, ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಹೆಚ್ಚಿನ ದರದಲ್ಲಿ ಅಕ್ಕಿ ಬರುತ್ತಿದೆ ಎಂದು ಅಕ್ಕಿ ವ್ಯಾಪಾರಿಗಳು ತಿಳಿಸಿದ್ದಾರೆ. ಕೇಂದ್ರವು ಬಾಸ್ಮತಿಯೇತರ ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಬೆಲೆ ಈಗ ಸ್ವಲ್ಪ ಸ್ಥಿರವಾಗಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ.
ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣರಾವ್ ಪ್ರಕಾರ, ಕೇಂದ್ರವು ಪರಿಷ್ಕರಿಸಿದ ಅಕ್ಕಿ ಬೆಲೆ ಈ ವರ್ಷ ಹೆಚ್ಚಾಗಿದೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು 7% ರಷ್ಟು ಕಡಿಮೆಗೊಳಿಸಲಾಗಿದೆ. ಏಕೆಂದರೆ ಅದು MSP ಅನ್ನು ಪ್ರತಿ ಕ್ವಿಂಟಲ್‌ಗೆ ₹2,040 ರಿಂದ ₹2,183 ಕ್ಕೆ ಹೆಚ್ಚಿಸಿದೆ. “ಸಾಮಾನ್ಯವಾಗಿ, ಜೂನ್ ಮತ್ತು ಆಗಸ್ಟ್ ನಡುವೆ ಬೆಲೆಗಳು ಹೆಚ್ಚಾಗುತ್ತವೆ. ಕಳೆದ ವರ್ಷ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಕಂಡ್‌ನಲ್ಲಿ ಮಳೆಗೆ ಬೆಳೆ ಹಾನಿಯಿಂದಾಗಿ ದಾಸ್ತಾನು ಕಡಿಮೆಯಾಗಿದೆ. ರಫ್ತು ನಿಷೇಧವು ಬೆಲೆಗಳನ್ನು ಕಡಿಮೆಯಾಗಿಸಿದೆ ಮತ್ತು ವೈವಿಧ್ಯತೆಯ ಆಧಾರದ ಮೇಲೆ ಪ್ರತಿ ಕೆಜಿಗೆ ₹ 2 ರಿಂದ ₹ 4 ರ ನಡುವೆ ಬೆಲೆ ಕಡಿಮೆಯಾಗುತ್ತದೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ