ಮನೆಗೆ ಬರುವ ಅತಿಥಿಗಳನ್ನು ಬಿಕಿನಿಯಲ್ಲಿ ಸ್ವಾಗತಕೋರುವ ಹನಿಟ್ರ್ಯಾಪ್ ಸುಂದರಿ ಲಾಕ್​, ಮಾಡೆಲ್​ ರಂಗಿನಾಟ ಅಬ್ಬಬ್ಬಾ.!

ಬೆಂಗಳೂರಿನ ಮತ್ತೊಂದು ಹನಿಟ್ರ್ಯಾಪ್​ ಗ್ಯಾಂಗ್​ ಸಿಕ್ಕಿಬಿದ್ದಿದ್ದು, ಮುಂಬೈ ಮೂಲದ ಮಾಡೆಲ್​ ಒಬ್ಬಳನ್ನು ಮುಂದೆ ಬಿಟ್ಟು ಗಂಡಸರನ್ನು ಬಲೆಗೆ ಬೀಳುಸುತ್ತಿದ್ದ ಗ್ಯಾಂಗ್​ ಇದೀಗ ಪೊಲೀಸರ ಅತಿಥಿಯಾಗಿದೆ. ಮನೆಗೆ ಕರೆಯಿಸಿಕೊಂಡು ಬಿಕಿನಿಯಲ್ಲಿ ಸ್ವಾಗತ ಮಾಡಿಕೊಳ್ಳುತ್ತಿದ್ದ ಮಾಡೆಲ್​ನ ರಂಗಿನಾಟ ಬಟಾಬಯಲಾಗಿದೆ. ಹಾಗಾದ್ರೆ, ಈ ಗ್ಯಾಂಗ್​ ಹೇಗೆಲ್ಲ ಖೆಡ್ಡಕ್ಕೆ ಕೆಡವುತ್ತಿತ್ತು ಎನ್ನುವುದು ಇಲ್ಲಿದೆ ನೋಡಿ.

ಮನೆಗೆ ಬರುವ ಅತಿಥಿಗಳನ್ನು ಬಿಕಿನಿಯಲ್ಲಿ ಸ್ವಾಗತಕೋರುವ ಹನಿಟ್ರ್ಯಾಪ್ ಸುಂದರಿ ಲಾಕ್​, ಮಾಡೆಲ್​ ರಂಗಿನಾಟ ಅಬ್ಬಬ್ಬಾ.!
ನೇಹಾ ಅಲಿಯಾಸ್ ಮೆಹರ್
Follow us
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ

Updated on: Aug 16, 2023 | 9:58 AM

ಬೆಂಗಳೂರು, (ಆಗಸ್ಟ್ 16): ಬೆಂಗಳೂರಿನ(Bengaluru) ನಿವೃತ್ತ ಸರ್ಕಾರಿ ನೌಕರ ಸಿಧೀಂದ್ರ ಎಂಬುವರಿಗೆ ಹನಿಟ್ರ್ಯಾಪ್ (honeytrap) ಮಾಡಿ ಹಣ ವಸೂಲಿ ಪ್ರಕರಣ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್​ ಗ್ಯಾಂಗ್ ಸಿಕ್ಕಿಬಿದ್ದಿದೆ. ತನ್ನ ರಂಗಿನಾಟದೊಂದಿಗೆ ವಂಚಿಸುತ್ತಿದ್ದ ಮುಂಬೈ ಮಾಡೆಲ್ ಲಾಕ್ ಆಗಿದ್ದಾಳೆ. ಗಂಡಸರನ್ನ ಮನೆಗೆ ಬರಲು ಹೇಳಿ ಬಿಕಿನಿಯಲ್ಲಿ ಸ್ವಾಗತಿಸುತ್ತಿದ್ದ ನೇಹಾ ಅಲಿಯಾಸ್ ಮೆಹರ್ ಎನ್ನುವಾಕೆ ಇದೀಗ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರ ಅತಿಥಿಯಾಗಿದ್ದಾಳೆ. ಟೆಲಿಗ್ರಾಮ್ ಹಾಗೂ ಮನೆಗೆ ಕರೆಯಿಸಿಕೊಂಡು ರಂಗಿನಾಟದ ಹಸಿ ಬಿಸಿ ದೃಶ್ಯ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ ನೇಹಾ ಅಲಿಯಾಸ್ ಮೆಹರ್ ಎನ್ನುವಾಕೆಯನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆದು ತಂದಿದ್ದು, ತನಿಖೆ ವೇಳೆ ಮಾಡೆಲ್ ನೇಹಾಳ ಒಂದೊಂದೇ ರಂಗಿನಾಟ ಬಟಾಬಯಲಾಗಿವೆ. 12ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡುವ ಮೂಲಕ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ.

ಮಾಡೆಲ್​ ರಂಗಿನಾಟ ಹೇಗೆ ಶುರುವಾಗುತ್ತೆ ಗೊತ್ತಾ?

ಈ ಮೊದಲು ಕೇಸ್ ನಲ್ಲಿ ಶರಣ ಪ್ರಕಾಶ ಬಳಿಗೇರ,ಅಬ್ದುಲ್ ಖಾದರ್, ಯಾಸಿನ್ ಎನ್ನುವರ ಬಂಧನವಾಗಿದ್ದು, ಇವರು ಈ ಬಾಂಬೆ ಮಾಡೆಲ್ ಇಟ್ಟುಕೊಂಡು ಬಲೆ ಬೀಸುತ್ತಿದ್ದರು. ಅಲ್ಲದೇ ಹನಿಟ್ರ್ಯಾಪ್ ಜಾಲಕ್ಕೆ ಕೆಡವಲು ‘ಕತ್ನಾ’ ಅಸ್ತ್ರ ಪ್ರಯೋಗ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಟೆಲಿಗ್ರಾಮ್ ಮೂಲಕ ಕೆಲವರನ್ನು ಸಂಪರ್ಕ ಮಾಡಿದ್ದ ನೇಹಾ ಅಲಿಯಾಸ್ ಮೆಹರ್, ಲೈಂಗಿಕ ಕ್ರಿಯೆಗೆ ಜೆಪಿ ನಗರ ಐದನೇ ಹಂತದಲ್ಲಿರುವ ಮನೆಗೆ ಕರೆಯಿಸಿಕೊಳ್ಳುತ್ತಿದ್ದಳು. ಮಾಡೆಲ್​ ಮೇಲಿನ ಆಸೆಗೆ ಸಂತ್ರಸ್ಥರು ಬಂದು ಮನೆ ಬೆಲ್ ಮಾಡುತ್ತಿದ್ದಂತೆಯೇ ನೇಹಾ, ಬಿಕಿನಿಯಲ್ಲಿ ಬಂದು ಹಗ್​ ಮಾಡಿ ಸ್ವಾಗತ ಕೋರುತ್ತಿದ್ದಳು. ಈ ಬಿಕಿನಿ ಸ್ವಾಗತದ ಹಸಿ ಬಿಸಿ ದೃಶ್ಯ ಸಿಸಿಟಿವಿ ಸೆರೆ ಹಿಡಿಯುತ್ತಿತ್ತು. ಬಳಿಕ ಮೂರೇ ನಿಮಿಷದಲ್ಲಿ ಮನೆಗೆ ವಿಲನ್ಸ್ ಎಂಟ್ರಿಯಾಗಿ ಯುವತಿ ಜೊತೆಗಿನ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರು.

ಇದನ್ನೂ ಓದಿ: ಸಲುಗೆ ಬೆಳೆಸಿ ಓಯೋ ರೂಮ್​ಗೆ ಕರೆದು ವಿಡಿಯೋ ರೆಕಾರ್ಡ್, ಬಳಿಕ ಹಣಕ್ಕೆ ಬೇಡಿಕೆ ಇಟ್ಟ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

ಅದಕ್ಕೂ ಮೊದಲು ಮನೆಗಳ ಬರುವ ಅತಿಥಿಗಳ ವ್ಯಕ್ತಿ ಮೊಬೈಲ್ ಕಸಿದುಕೊಳ್ಳುತ್ತಿದ್ದರು. ಅಲ್ಲದೇ ಮೊಬೈಲ್ ನಲ್ಲಿರುವ ನಂಬರ್ ಎಲ್ಲವನ್ನು ನೋಟ್ ಮಾಡಿಕೊಳ್ಳುತ್ತಿದ್ದರು. ಇಷ್ಟವಾಗುತ್ತಿದ್ದಂತೆಯೇ ಹಣಕ್ಕೆ ಡಿಮ್ಯಾಂಡ್ ಇಡಲು ಶುರುಮಾಡುತ್ತಾರೆ, ಹಣ ಕೊಡದಿದ್ರೆ ವಿಡಿಯೋವನ್ನು ಸ್ನೇಹಿತರು,ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಕಳಿಸುವುದಾಗಿ ಬ್ಲ್ಯಾಕ್​ ಮೇಲೆ ಮಾಡುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದಾಳೆ, ಆಕೆಯನ್ನ ಮದುವೆ ಆಗುವಂತೆ ಬೆದರಿಕೆ ಜೊತೆಗೆ ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕುತ್ತಿದ್ದರು.

ಅದಲ್ಲದೇ ಮುಸ್ಲಿಂ ಆಗಿ ಕನ್ವರ್ಟ್ ಆಗುವಂತೆ ಬೆದರಿಸುತ್ತಿದ್ದರು. ಇದರಿಂದ ಸಂತ್ರಸ್ಥರು ಹೆದರಿ ಹಣ ವರ್ಗಾವಣೆ ಮಾಡುತ್ತಿದ್ದರು. ಆದ್ರೆ, ಇವರಿಂದ ವಂಚನೆಗೊಳಗಾದ ವ್ಯಕ್ತಿಯೋರ್ವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಈ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ 12ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡುವ ಮೂಲಕ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನಷ್ಟು ಬೆಂಗಳೂರಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ