ಸಲುಗೆ ಬೆಳೆಸಿ ಓಯೋ ರೂಮ್ಗೆ ಕರೆದು ವಿಡಿಯೋ ರೆಕಾರ್ಡ್, ಬಳಿಕ ಹಣಕ್ಕೆ ಬೇಡಿಕೆ ಇಟ್ಟ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್
ನಿವೃತ್ತ ಸರ್ಕಾರಿ ನೌಕರ ಸಿಧೀಂದ್ರ ಎಂಬುವರಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದ ಆರೋಪಿಗಳು ಸದ್ಯ ಅರೆಸ್ಟ್ ಆಗಿದ್ದಾರೆ. ಆರೋಪಿಗಳನ್ನು ಬಂಧಿಸಿ ಜಯನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಣ್ಣಮ್ಮ ಹಾಗೂ ಸ್ನೇಹ ಬಂಧಿತ ಆರೋಪಿಗಳು.
ಬೆಂಗಳೂರು, ಆ.15: ಹನಿಟ್ರ್ಯಾಪ್(Honey Trap) ಮಾಡಿ ಹಣ ಪೀಕುತ್ತಿದ್ದ ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗನ್ನು ಜಯನಗರ ಪೊಲೀಸರು(Jayanagar police) ಅರೆಸ್ಟ್ ಮಾಡಿದ್ದಾರೆ. ಅಣ್ಣಮ್ಮ ಹಾಗೂ ಸ್ನೇಹ ಬಂಧಿತ ಆರೋಪಿಗಳು. ನಿವೃತ್ತ ಸರ್ಕಾರಿ ನೌಕರ ಸಿಧೀಂದ್ರ ಎಂಬುವರಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದ ಆರೋಪಿಗಳು ಸದ್ಯ ಅರೆಸ್ಟ್ ಆಗಿದ್ದಾರೆ. ಆರೋಪಿಗಳನ್ನು ಬಂಧಿಸಿ ಜಯನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೊದಲಿಗೆ ಆರೋಪಿ ಅಣ್ಣಮ್ಮ ಜೀವನದಲ್ಲಿ ಕಷ್ಟ ಇದೆ ಎಂದು ಸಿಂಪತಿ ಗಿಟ್ಟಿಸಿಕೊಂಡು ಸುಧೀಂದ್ರ ಬಳಿ ಐದು ಸಾವಿರ ಹಣ ಪಡೆದಿದ್ದರು. ಬಳಿಕ ಸುಧೀಂದ್ರ ಬಳಿ ಸಲುಗೆ ಬೆಳೆಸಿ ಓಯೋ ರೂಂಗೆ ಕರೆಸಿಕೊಂಡರು. ಅಲ್ಲಿ ಸುಧೀಂದ್ರ ಜೊತೆ ದೈಹಿಕ ಸಂಬಂಧ ಬೆಳೆಸಿ ಅದನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದೇ ವಿಡಿಯೋನ ಬಳಸಿಕೊಂಡು ಬ್ಲಾಕ್ ಮೇಲ್ ಮಾಡಿ ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದಾರೆ. ಸಂಬಂಧಿಕರು ಹಾಗೂ ಸ್ನೇಹಿತರಿಗೆ ವಿಡಿಯೋ ವಾಟ್ಸಾಪ್ ಮಾಡೋದಾಗಿ ಹೆದರಿಸಿ ಹಣ ವಸೂಲಿ ಮಾಡಿದ್ದಾರೆ. ಅಣ್ಣಮ್ಮ ಮಾತ್ರವಲ್ಲದೇ ಆಕೆಯ ಸ್ನೇಹಿತೆ ಸ್ನೇಹ ಎಂಬಾಕೆ ಕೂಡ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿ ಪದೇ ಪದೇ ಸುಮಾರು 82 ಲಕ್ಷ ರೂಪಾಯಿ ವರೆಗೆ ಹಣ ವಸೂಲಿ ಮಾಡಿದ್ದಾರೆ. ಇಷ್ಟಕ್ಕೆ ನಿಲ್ಲದ ಮಹಿಳೆಯರು ಮತ್ತೆ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಕೊನೆಗೆ ಮಹಿಳೆಯರ ಕಾಟ ಸಹಿಸಲಾಗದೇ ಜಯನಗರ ಪೊಲೀಸ್ ಠಾಣೆಗೆ ಸಿಧೀಂದ್ರ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಜಯನಗರ ಪೊಲೀಸರು ಸದ್ಯ ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಗುಂಡಿನ ದಾಳಿ
ಕನಕಪುರ ದೇವಸ್ಥಾನದಲ್ಲಿ ಕಳ್ಳತನ
ರಾಮನಗರ: ಡಿಕೆ ಶಿವಕುಮಾರ್ ಮನೆದೇವತೆ ಕನಕಪುರದ ಕಂಕೇರಮ್ಮ ದೇವಾಲಯದಲ್ಲಿ 8 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಕಳ್ಳತನವಾಗಿದೆ. ಅರ್ಚಕರು ಊಟಕ್ಕೆ ಹೋಗಿದ್ದಾಗ ಚಿನ್ನ, ಬೆಳ್ಳಿ ಕದ್ದು ಖದೀಮರು ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ವಿಡಿಯೋ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:59 pm, Tue, 15 August 23