AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಮತ್ತೆ ಲವ್ ಜಿಹಾದ್: ಬಲೆಯಿಂದ ಪಾರಾಗಿ ಅಸಲಿ ಕಹಾನಿ ಬಿಚ್ಚಿಟ್ಟ ಸಂತ್ರಸ್ತೆಯರು

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಸಂತ್ರಸ್ತರು ತಮ್ಮ ನೋವಿನ ಕಥೆಗಳನ್ನು ಹಂಚಿಕೊಂಡಿದ್ದಾರೆ. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಲವ್ ಜಿಹಾದ್ ಬಲೆಯಿಂದ ಪಾರಾದವರು ಅನುಭವಿಸಿದ ಕಷ್ಟಗಳನ್ನು ವಿವರಿಸಿದ್ದಾರೆ. ದೇಶದಲ್ಲಿ ಲವ್ ಜಿಹಾದ್ ತಡೆಯಲು ಕಠಿಣ ಕಾನೂನು ಜಾರಿಗೆ ತರಲು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.

ಹುಬ್ಬಳ್ಳಿ ಮತ್ತೆ ಲವ್ ಜಿಹಾದ್: ಬಲೆಯಿಂದ ಪಾರಾಗಿ ಅಸಲಿ ಕಹಾನಿ ಬಿಚ್ಚಿಟ್ಟ ಸಂತ್ರಸ್ತೆಯರು
ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿImage Credit source: tv9 kannada
ಸಂಜಯ್ಯಾ ಚಿಕ್ಕಮಠ
| Edited By: |

Updated on: Mar 05, 2026 | 4:36 PM

Share

ಹುಬ್ಬಳ್ಳಿ, ಮಾರ್ಚ್​ 05: ಲವ್ ಜಿಹಾದ್ (Love Jihad) ಕಥೆಯುಳ್ಳ ಸಿನಿಮಾವೊಂದು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಕೇರಳದಲ್ಲಿ ಲವ್ ಜಿಹಾದ್ ಹೇಗೆ ಮಾಡಲಾಗುತ್ತಿದೆ ಅನ್ನೋದರ ಬಗ್ಗೆ ಎರಡು ಭಾಗಗಳಲ್ಲಿ ಸಿನಿಮಾ ತೆರೆಕಂಡಿದೆ. ಆದರೆ ರಾಜ್ಯದಲ್ಲಿ ಕೂಡ ಇದೇ ರೀತಿ ಲವ್ ಜಿಹಾದ್ ಹತ್ತಾರು ಪ್ರಕರಣಗಳು ನಡೆಯುತ್ತಿರುವ ಆರೋಪಗಳು ಮೇಲಿಂದ ಮೇಲೆ ಕೇಳಿ ಬರ್ತಿವೆ. ಇಂದು ಹುಬ್ಬಳ್ಳಿಯಲ್ಲಿ ಅನೇಕರು ತಾವು ಹೇಗೆ ಲವ್ ಜಿಹಾದ್ ಬಲೆಯಲ್ಲಿ ಬಿದ್ದೆವು. ಅದರಿಂದ ಪಾರಾಗಿ ಬಂದಿದ್ದು ಹೇಗೆ ಅಂತ ನೋವು ತೋಡಿಕೊಂಡರು. ಇನ್ನೊಂದಡೆ ಲವ್ ಜಿಹಾದ್ ವಿರುದ್ದ ಕಠಿಣ ಕ್ರಮಕ್ಕೆ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

ನೋವು ತೋಡಿಕೊಂಡ ಸಂತ್ರಸ್ತೆಯರು

ಕೇರಳದಲ್ಲಿ ನಡೆದಿವೆ ಅಂತ ಹೇಳಲಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಕಳೆದ ವರ್ಷ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅದರ ಎರಡನೇ ಭಾದ ಕೂಡ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಇಂದು ಹುಬ್ಬಳ್ಳಿಯಲ್ಲಿ ಅನೇಕ ಯುವತಿಯರು, ತಮ್ಮನ್ನು ಕೂಡ ಲವ್ ಜಿಹಾದ್ ಬಲೆಯೊಳಗೆ ಕೆಡವಲಾಗಿತ್ತು. ಅಲ್ಲಿ ತಾವು ಪಟ್ಟ ಕಷ್ಟಗಳೇನು, ಅಲ್ಲಿಂದ ಪಾರಾಗಿದ್ದು ಹೇಗೆ ಅಂತ ಹೇಳಿಕೊಂಡಿದ್ದಾರೆ. ಉಮ್ಮಳಿಸಿ ಬರ್ತಿರೋ ದುಖವನ್ನು ಸಹಿಸಿ ತಮಗಾದ ನೋವನ್ನು ಹಂಚಿಕೊಂಡರು.

ಬಣ್ಣದ ಮಾತಿನಿಂದ ಮರಳು ಮಾಡುತ್ತಾರೆ: ಸಂತ್ರಸ್ತೆ

ಇಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಅನೇಕರು, ಲವ್ ಜಿಹಾದ್ ಬಗ್ಗೆ ಹೇಳಿಕೊಂಡರು. ತಮಗೆ ಪರಿಚಯವಾದ ಅನ್ಯ ಧರ್ಮೀಯರು, ನನ್ನನ್ನು ಮದುವೆಯಾದರೆ ನೀನು ಮತಾಂತರವಾಗೋ ಅವಶ್ಯಕತೆಯಿಲ್ಲ. ಬುರ್ಖಾ ಹಾಕೋದು ಕೂಡ ಇಲ್ಲ. ನೀನು ರಾಣಿಯಂತೆ ಚೆನ್ನಾಗಿರ್ತಿಯಾ ಅಂತ ಹೇಳಿ ಮನಸು ಕೆಡಿಸುತ್ತಿದ್ದರು. ನಮ್ಮ ಹೆತ್ತವರನ್ನು, ನಮ್ಮ ಮನೆಯವರನ್ನು ನಾವೇ ದ್ವೇಷಿಸುವಂತೆ ಬಣ್ಣದ ಮಾತುಗಳನ್ನು ಹೇಳ್ತಿದ್ದರು. ಆದರೆ ನಂತರ ಗೊತ್ತಾಗಿದ್ದು, ಹೇಳಿದ್ದೆಲ್ಲಾ ಬಣ್ಣದ ಮಾತುಗಳು ಅಂತ. ಹೀಗಾಗಿ ಲವ್ ಜಿಹಾದ್ ಬಲೆಯಿಂದ ಪಾರಾಗಿ ಬಂದರು ಅಂತ ತಮ್ಮೋ ತಮ್ಮ ನೋವನ್ನು ಹೇಳಿಕೊಂಡರು.

ಇದನ್ನೂ ಓದಿ: ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲೊಂದು ಲವ್ ಜಿಹಾದ್

ಇನ್ನು ಹುಬ್ಬಳ್ಳಿಯಲ್ಲಿ ಈ ಹಿಂದೆ ಕಾಲೇಜು ಕ್ಯಾಂಪಸ್​ನಲ್ಲಿ ಹತ್ಯೆಯಾದ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಕೂಡ ಭಾಗಿಯಾಗಿದ್ದರು. ಲವ್ ಜಿಹಾದ್ ವ್ಯವಸ್ಥಿತವಾಗಿ ನಡೆಯುತ್ತಿದೆ. ತಮ್ಮ ಮಗಳನ್ನು ಕೊಂದವರಿಗೆ ಇಂದು ಜೈಲಿನಲ್ಲಿ ವಿವಿಐಪಿ ಆತಿಥ್ಯ ಸಿಗ್ತಿದೆ. ಅವರಿಗೆ ಬಿರಿಯಾನಿ ಕೊಡ್ತಿದ್ದಾರೆ. ನೇಹಾ ಹಿರೇಮಠ ಹತ್ಯೆಯಾದಾಗ ಮನೆಗೆ ಅನೇಕ ರಾಜಕಾರಣಿಗಳು ಬಂದು ನೂರು ದಿನದಲ್ಲಿ ನ್ಯಾಯ ಕೊಡಿಸ್ತೇವೆ ಅಂತ ಹೇಳಿದ್ರು. ಆದರೆ ಎರಡು ವರ್ಷವಾದರೂ ಕೂಡ ನ್ಯಾಯ ಸಿಕ್ಕಿಲ್ಲ. ಆರೋಪಿ ಬೆನ್ನಿಗೆ ಅನೇಕರು ನಿಂತಿದ್ದಾರೆ. ಹೀಗಾಗಿ ತಮ್ಮ ಮಗಳ ಹತ್ಯೆ ಪ್ರಕರಣವನ್ನು ಎನ್​ಐಎ ಇಲ್ಲವೇ ಸಿಬಿಐಗೆ ನೀಡಬೇಕು ಅಂತ ಆಗ್ರಹಿಸಿದರು.

ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು: ಮುತಾಲಿಕ್ ಆಗ್ರಹ

ಇನ್ನು ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಮಕ್ಕಳು ಮತ್ತು ಯುವತಿಯರು ಕಾಣೆಯಾಗ್ತಿದ್ದಾರೆ. ಕಾಣೆಯಾಗ್ತಿರೋರಲ್ಲಿ ಕೆಲವರು ಪತ್ತೆಯಾಗಿಲ್ಲ. ಹಾಗಾದರೆ ಅವರು ಎಲ್ಲಿ ಹೋಗ್ತಿದ್ದಾರೆ ಅಂತ ಪ್ರಶ್ನೆ ಮಾಡಿದ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯ ಮತ್ತು ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಣೆಯಾಗ್ತಿರೋರನ್ನು ಲವ್ ಜಿಹಾದ್​​ಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು ಅಂತ ಆಗ್ರಹಿಸಿದರು.

ಅನೇಕ ಮುಸ್ಲಿಂರು ತಮ್ಮ ಹೆಸರನ್ನು ಹೇಳದೆ, ಹಿಂದೂಗಳ ಹೆಸರನ್ನು ಹೇಳಿ ಲವ್ ಜಿಹಾದ್ ಮಾಡ್ತಿದ್ದಾರೆ. ಲವ್ ಜಿಹಾದ್ ಹಿಂದೆ ಕೇವಲ ಪ್ರೀತಿ, ಪ್ರೇಮ ಮಾತ್ರವಿಲ್ಲ, ಬದಲಾಗಿ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರವಿದೆ ಅಂತ ಆರೋಪಿಸಿದರು.

ಇದನ್ನೂ ಓದಿ: ವಿದ್ಯಾರ್ಥಿನಿಯನ್ನ ಅಪಹರಿಸಿ ಮದ್ವೆಯಾಗಲು ಯತ್ನ: ಉಡುಪಿಯಲ್ಲಿ ಹೀಗೊಂದು ಲವ್ ಜಿಹಾದ್ ಆರೋಪ

ಲವ್ ಜಿಹಾದ್ ಪ್ರಕರಣಗಳು ಆಗಾಗ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡ್ತಿವೆ. ಆದರೆ ಪ್ರೀತಿಸಿ ಮದುವೆಯಾಗಿರೋ ಅಂತರಧರ್ಮೀಯ ಅನೇಕ ಜೋಡಿಗಳು ಅನೋನ್ಯವಾಗಿವೆ. ಅನೇಕರ ಸಂಸಾರ ಹಾಳಾಗಿವೆ. ಇದರ ಹಿಂದೆ ನಿಜವಾಗಿಯೂ ಲವ್ ಜಿಹಾದ್ ಇದೆಯಾ, ಅಥವಾ ಅದು ಪ್ರೀತಿನಾ ಅನ್ನೋದು ಮಾತ್ರ ತನಿಖೆಯಿಂದ ಗೊತ್ತಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ