ಲವ್ ಜಿಹಾದ್ನಂತೆ ಮುಸಕುಧಾರಿಯ ಹಿಂದೆ ಮತಾಂಧರ ಒಂದು ದೊಡ್ಡ ಗ್ಯಾಂಗ್ ಇದೆ: ಅರ್ ಅಶೋಕ
ಪ್ರಗತಿಪರರು ಅಂತ ಹೇಳಿಕೊಡು ಸಿದ್ದರಾಮಯ್ಯರ ಕಚೇರಿಗೆ ತೆರಳಿ ಅವರನ್ನು ನಂಬಿಸಿದ್ದ ಜನ ಈಗ ಕಣ್ಮರೆಯಾಗಿದ್ದಾರೆ, ಧರ್ಮಸ್ಥಳದಲ್ಲಿ ನಡೆಸಿದ ಉತ್ಖನನ ಮತ್ತು ಬೇರೆ ಕಾರ್ಯಗಳಿಗಾಗಿ ₹ 2-3 ಕೋಟಿ ಖರ್ಚಾಗಿದೆ, ಇದು ನಿಯತ್ತಿನಿಂದ ತೆರಿಗೆ ಪಾವತಿಸುವ ಜನರ ದುಡ್ಡು, ಯಾವನೋ ದಾರಿಹೋಕ ದೂರಿದ್ದಕ್ಕೆ ಎಸ್ಐಟಿ ರಚನೆ ಮಾಡಲಾಯಿತು, ಸರ್ಕಾರಕ್ಕೆ ಧರ್ಮಸ್ಥಳವನ್ನು ಸರ್ಕಾರೀಕರಣ ಮಾಡೋದು ಬೇಕಾಗಿದೆ ಅಂತ ಅಶೋಕ ಹೇಳಿದರು.
ಕೊಪ್ಪಳ, ಆಗಸ್ಟ್ 25: ಕೊಪ್ಪಳ ಪ್ರವಾಸದಲ್ಲಿರುವ ಹಿರಿಯ ಬಿಜೆಪಿ ನಾಯಕ ಆರ್ ಅಶೋಕ ಅವರು ಧರ್ಮಸ್ಥಳದ ಬುರುಡೆ ಪುರಾಣವನ್ನು ಲವ್ ಜಿಹಾದ್ಗೆ ಹೋಲಿಸಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಇದೊಂಥರಾ ಮತಾಂಧರ ಜಿಹಾದ್, ಮತಾಂಧರ ಹಿಂದೆ ದೊಡ್ಡ ಗ್ಯಾಂಗ್ ಇದೆ, ಮುಸುಕುಧಾರಿಗೆ ಮುಸುಕು ಹಾಕಿದ್ದು ಸಿದ್ದರಾಮಯ್ಯ ಸರ್ಕಾರ ಅದರೆ ಮುಸುಕುಧಾರಿಗಳು ಸರ್ಕಾರಕ್ಕೆ ಮುಸುಕು ಹಾಕಿದರು ಎಂದು ಹೇಳಿದರು. ಅಸ್ತಿತ್ವವೇ ಇಲ್ಲದ ಅನನ್ಯ ಭಟ್ ತಮ್ಮ ಮಗಳು ಅಂತ ಎಲ್ಲರ ತಲೆ ಮೇಲೆ ಗೂಬೆ ಕೂರಿಸಿದ ಸುಜಾತಾ ಭಟ್ ಸೇರಿದಂತೆ ಎಲ್ಲರ ಬಣ್ಣ ಬಯಲಾಗುತ್ತಿದೆ, ಅವರೆಲ್ಲ ಕಂಬಿ ಎಣಿಸುವ ದಿನ ದೂರವಿಲ್ಲ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳ ಕೇಸ್: ಯುಟ್ಯೂಬರ್ ಸಮೀರ್ ಖಜಾನೆಗೆ ಕೈ ಹಾಕಿದ ಖಾಕಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Aug 25, 2025 05:49 PM
Latest Videos

