AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್: ಯುಟ್ಯೂಬರ್ ಸಮೀರ್ ಖಜಾನೆಗೆ ಕೈ ಹಾಕಿದ ಖಾಕಿ

ಧರ್ಮಸ್ಥಳ ಕೇಸ್: ಯುಟ್ಯೂಬರ್ ಸಮೀರ್ ಖಜಾನೆಗೆ ಕೈ ಹಾಕಿದ ಖಾಕಿ

ರಮೇಶ್ ಬಿ. ಜವಳಗೇರಾ
|

Updated on: Aug 25, 2025 | 3:15 PM

Share

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನೇ ತೋಡಿದ ಗುಂಡಿಗೆ ಬಿದ್ದಿರುವ ಬುರುಡೆ ಚಿನ್ನಯ್ಯನ ವಿಚಾರಣೆ ತೀವ್ರಗೊಳಿಸಲಾಗಿದೆ. ಎಸ್​ಐಟಿ ಅಧಿಕಾರಿಗಳು ಚಿನ್ನಯ್ಯನ ಪೂರ್ವಾಪರ ಕೆದಕುತ್ತಿದ್ದಾರೆ. ಇದೀಗ ಎಸ್​ಐಟಿ ತನಿಖೆ ಧರ್ಮಸ್ಥಳ, ಬೆಳ್ತಂಗಡಿಯಿಂದ ಮಂಡ್ಯ ಮತ್ತು ತಮಿಳುನಾಡಿಗೂ ವಿಸ್ತರಿಸುತ್ತಿದೆ. ಮತ್ತೊಂದೆಡೆ ಧರ್ಮಸ್ಥಳದ ಪ್ರಕರಣ ಸಂಬಂಧ ವಿಡಿಯೋ ಮಾಡಿ ಭಾರೀ ಸುದ್ದಿಯಾಗಿದ್ದ ಯುಟ್ಯೂಬರ್ ಸಮೀರ್ ಎಂಡಿ ವಿಚಾರಣೆ ಸಹ ತೀವ್ರಗೊಂಡಿದೆ.

ಮಂಗಳೂರು, (ಆಗಸ್ಟ್ 25): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನೇ ತೋಡಿದ ಗುಂಡಿಗೆ ಬಿದ್ದಿರುವ ಬುರುಡೆ ಚಿನ್ನಯ್ಯನ ವಿಚಾರಣೆ ತೀವ್ರಗೊಳಿಸಲಾಗಿದೆ. ಎಸ್​ಐಟಿ ಅಧಿಕಾರಿಗಳು ಚಿನ್ನಯ್ಯನ ಪೂರ್ವಾಪರ ಕೆದಕುತ್ತಿದ್ದಾರೆ. ಇದೀಗ ಎಸ್​ಐಟಿ ತನಿಖೆ ಧರ್ಮಸ್ಥಳ, ಬೆಳ್ತಂಗಡಿಯಿಂದ ಮಂಡ್ಯ ಮತ್ತು ತಮಿಳುನಾಡಿಗೂ ವಿಸ್ತರಿಸುತ್ತಿದೆ. ಮತ್ತೊಂದೆಡೆ ಧರ್ಮಸ್ಥಳದ ಪ್ರಕರಣ ಸಂಬಂಧ ವಿಡಿಯೋ ಮಾಡಿ ಭಾರೀ ಸುದ್ದಿಯಾಗಿದ್ದ ಯುಟ್ಯೂಬರ್ ಸಮೀರ್ ಎಂಡಿ ವಿಚಾರಣೆ ಸಹ ತೀವ್ರಗೊಂಡಿದೆ. ನಿನ್ನೆ(ಆಗಸ್ಟ್​ 24) ಮೊದಲ ದಿನ ವಿಡಿಯೋ ಸಂಬಂಧ ಹತ್ತಾರು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದರು. ಆದ್ರೆ, ಎರಡನೇ ದಿನದ ವಿಚರಣೆಯಲ್ಲಿ ಯುಟ್ಯೂಬ್ ಆದಾಯದ ಮೂಲದ ಕೆದಕುತ್ತಿದ್ದಾರೆ. ಯುಟ್ಯೂಬ್ ಆದಾಯದ ದಾಖಲೆ ಕೇಳಲಾಗಿದ್ದು. ವೀಡಿಯೊ ಮಾಡಿದ ಉದ್ದೇಶ ‘ಹಣಕಾಸು ಲಾಭ’ ಆಗಿದೆಯೇ ಎಂದು ಪತ್ತೆ ಮಾಡಲು ತನಿಖಾಧಿಕಾರಿ ದಾಖಲೆ ಕೇಳಿದ್ದಾರೆ. ಹೆಚ್ಚಿನ ಅದಾಯಕ್ಕಾಗಿ ತಪ್ಪು ಹಾಗೂ ಸುಳ್ಳು ವಿಷಯ ಹಂಚಿದ್ದಾನೆಯೇ ಎಂದು ದೃಢಪಡಿಸಲು ಹಾಗೂ YouTube Monetization (AdSense account) ಮೂಲಕ ಆದಾಯ, ಬ್ಯಾಂಕ್ ಖಾತೆಗೆ ಟ್ರಾನ್ಸ್‌ಫರ್ ಆದ ಹಣದ ದಾಖಲೆ ಸಂಗ್ರಹಿಸುತ್ತಿದ್ದಾರೆ.