ಆ ಹಾಡು ತುಂಬಾ ಚೆನ್ನಾಗಿದೆ: RSS ಗೀತೆ ಹಾಡಿದ ಡಿಕೆಶಿ ಪರ ಕಾಂಗ್ರೆಸ್ ಶಾಸಕ ಬ್ಯಾಟಿಂಗ್
ನಮಸ್ತೇ ಸದಾ ವತ್ಸಲೇ ಮಾತೃಭೂಮೇ.. ಹೀಗೆ ವಿಧಾನಸಭೆಯಲ್ಲೇ ಆರ್ ಎಸ್ ಎಸ್ ಗೀತೆ ಹಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಸ್ವಪಕ್ಷದ ನಾಯಕರೇ ತಿರುಗೇಟು ಕೊಟ್ಟಿದ್ದಾರೆ. ನಿನ್ನೆ ಡಿಕೆ ಶಿವಕುಮಾರ್ ವಿರುದ್ಧ ರಾಜಣ್ಣ ತಿರುಗಿಬಿದ್ದಿದ್ದರು. ಇಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, RSSನ ದೇಶದಲ್ಲಿ 3 ಭಾರಿ ನಿಷೇಧ ಮಾಡಲಾಗಿತ್ತು. ಡಿಸಿಎಂ ಆಗಿ ಸಂಘದ ಪ್ರಾರ್ಥನೆ ಮಾಡಿದ್ರೆ ಅಭ್ಯಂತರವಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ RSS ಪ್ರಾರ್ಥನೆ ಮಾಡೋದು ತಪ್ಪು. RSS ಗೀತೆ ಹಾಡಿದ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕುಣಿಗಲ್ ಕಾಂಗ್ರೆಸ್ ಶಾಸಕ ಹೆಚ್.ಡಿ.ರಂಗನಾಥ್ ಅವರು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ತುಮಕೂರು, (ಆಗಸ್ಟ್ 25): ನಮಸ್ತೇ ಸದಾ ವತ್ಸಲೇ ಮಾತೃಭೂಮೇ.. ಹೀಗೆ ವಿಧಾನಸಭೆಯಲ್ಲೇ ಆರ್ ಎಸ್ ಎಸ್ ಗೀತೆ ಹಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಸ್ವಪಕ್ಷದ ನಾಯಕರೇ ತಿರುಗೇಟು ಕೊಟ್ಟಿದ್ದಾರೆ. ನಿನ್ನೆ ಡಿಕೆ ಶಿವಕುಮಾರ್ ವಿರುದ್ಧ ರಾಜಣ್ಣ ತಿರುಗಿಬಿದ್ದಿದ್ದರು. ಇಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, RSSನ ದೇಶದಲ್ಲಿ 3 ಭಾರಿ ನಿಷೇಧ ಮಾಡಲಾಗಿತ್ತು. ಡಿಸಿಎಂ ಆಗಿ ಸಂಘದ ಪ್ರಾರ್ಥನೆ ಮಾಡಿದ್ರೆ ಅಭ್ಯಂತರವಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ RSS ಪ್ರಾರ್ಥನೆ ಮಾಡೋದು ತಪ್ಪು. RSS ಗೀತೆ ಹಾಡಿದ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕುಣಿಗಲ್ ಕಾಂಗ್ರೆಸ್ ಶಾಸಕ ಹೆಚ್.ಡಿ.ರಂಗನಾಥ್ ಅವರು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಮಸ್ತೆ ಸದಾ ವಸ್ತಲೇ ಆ ಹಾಡು ತುಂಬಾ ಚೆನ್ನಾಗಿದೆ. ಡಿಕೆ ಶಿವಕುಮಾರ್ ಸಾಹೇಬ್ರು ಹಾಡಿದ ಮೇಲೆ ನಾನು ಅದರ ಅರ್ಥ ಓದಿದೆ. ಅದು ಏನೂ ಹೇಳುತ್ತೆ ಅಂದರೆ ತನ್ನ ಹುಟ್ಟಿದ ಭೂಮಿಗೆ ನಮಸ್ಕಾರ ಮಾಡಿ ಎಂದು ಹೇಳುತ್ತೆ. ಅದರಲ್ಲಿ ಏನೂ ತಪ್ಪು ಕಾಣಿಸಿಲ್ಲ. ನಮ್ಮದು ಜಾತ್ಯಾತೀತ ಪಕ್ಷ ಯಾವ ಯಾವ ಪಕ್ಷದಲ್ಲಿ ಮನುಷ್ಯನಲ್ಲಿ ಒಳೆಯದು ಇದೆ ಅದನ್ನ ಸ್ವೀಕರಿಸಬೇಕು. ಬಲ ಪಂಥೀಯರಾದ ಬಿಜೆಪಿಯವರು ಜಾತಿಯ, ಧರ್ಮದ ಒಡಕನ್ನು ಮೂಡಿಸುವ ವಿಷಯದಲ್ಲಿ ಜಿದ್ದಾಜಿದ್ದಿ ಇದೆ. ಅದನ್ನು ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ಅವರ ಸಿದ್ಧಾಂತಕ್ಕೂ ನಮ್ಮ ಸಿದ್ಧಾಂತಕ್ಕೂ ಹೊಂದಿಕೆಯಾಗಲ್ಲ ಎಂದರು.

