AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಆಟಗಾರನ ನೀಚ ಕೃತ್ಯ; ಹೋಟೆಲ್​ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ! ದಂಡ

Pak Cricketer Fined for Misconduct with Hotel Staff: 2026ರ ಟಿ20 ವಿಶ್ವಕಪ್ ವೇಳೆ ಶ್ರೀಲಂಕಾದಲ್ಲಿ ಪಾಕಿಸ್ತಾನ ಕ್ರಿಕೆಟಿಗನೊಬ್ಬ ಹೋಟೆಲ್ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ದಂಡನೆಗೆ ಒಳಗಾಗಿದ್ದಾನೆ. ಹೋಟೆಲ್ ಆಡಳಿತ ಮಂಡಳಿ ಹಾಗೂ ಸಂತ್ರಸ್ತ ಮಹಿಳೆಯ ಬಳಿ ಮಂಡಿಯೂರಿ ಕ್ಷಮೆಯಾಚಿಸಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಶಿಸ್ತು ಸಮಿತಿ ತನಿಖೆ ಎದುರಿಸುವ ಸಾಧ್ಯತೆ ಇದೆ. ಪಾಕ್ ತಂಡದ ವ್ಯವಸ್ಥಾಪಕರು ಈ ಆಟಗಾರನಿಗೆ ದಂಡ ವಿಧಿಸಿದ್ದಾರೆ. ವಿಶ್ವ ಕ್ರಿಕೆಟ್‌ಗೆ ನಾಚಿಕೆ ತರುವಂತಹ ಈ ಘಟನೆ ಪಾಕ್ ಆಟಗಾರರ ಶಿಸ್ತಿನ ಬಗ್ಗೆ ಪ್ರಶ್ನೆ ಮೂಡಿಸಿದೆ.

ಪಾಕ್ ಆಟಗಾರನ ನೀಚ ಕೃತ್ಯ; ಹೋಟೆಲ್​ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ! ದಂಡ
Pakistan Team
ಪೃಥ್ವಿಶಂಕರ
|

Updated on: Mar 05, 2026 | 4:28 PM

Share

2026 ರ ಟಿ20 ವಿಶ್ವಕಪ್​ನಲ್ಲಿ (T20 World Cup) ಹೀನಾಯ ಪ್ರದರ್ಶನ ನೀಡಿ ತನ್ನ ಅಭಿಮಾನಿಗಳು ಹಾಗೂ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟಿಗರ ಬಗ್ಗೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮೈದಾನದಲ್ಲಿ ತಮ್ಮ ಪೌರುಷ ತೋರಿಸುವಲ್ಲಿ ವಿಫಲನಾಗಿದ್ದ ಪಾಕ್ ಕ್ರಿಕೆಟಿಗ ತಾವು ತಂಗಿದ್ದ ಹೋಟೆಲ್​ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹೋಟೆಲ್​ನ ಆಡಳಿತ ಮಂಡಳಿಯಿಂದ ದಂಡನೆಗೆ ಒಳಗಾಗಿದ್ದಾನೆ. ಇದರ ಜೊತೆಗೆ ಸಂತ್ರಸ್ತ ಮಹಿಳೆ ಹಾಗೂ ಹೋಟೆಲ್ ಆಡಳಿತ ಮಂಡಳಿಯ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾನೆ ಎಂದು ವರದಿಯಾಗಿದೆ.

ನಿಮಗೆಲ್ಲ ತಿಳಿದಿರುವಂತೆ ಭಾರತದೊಂದಿಗೆ ಸಂಬಂಧ ಹಳಸಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನೇಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಕ್ರಿಕೆಟ್ ಆಡಲು ಬಂದಿದ್ದ ಪಾಕ್ ಕ್ರಿಕೆಟಿಗರು ಬಂದಿರುವ ಕೆಲಸವನ್ನು ಮಾಡದೆ, ತಾವು ತಂಗಿದ್ದ ಹೋಟೆಲ್‌ನಲ್ಲಿ ಮಾಡಬಾರದ ಕೆಲಸ ಮಾಡಿದ್ದು, ವಿಶ್ವ ಕ್ರಿಕೆಟ್​ ನಾಚಿಕೆ ಪಡುವಂತಹ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ತಪ್ಪು ಮಾಡಿದ ಆ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಚೀಮಾರನ್ನು ಒತ್ತಾಯಿಸಲಾಗಿದೆ.

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ

ಶ್ರೀಲಂಕಾದಲ್ಲಿ ಹೋಟೆಲ್​ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪಾಕಿಸ್ತಾನಿ ಆಟಗಾರನಿಗೆ ದಂಡ ವಿಧಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ತಂಡ ತಂಗಿದ್ದ ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಗಳ ಪ್ರಕಾರ, ಪಾಕ್ ಆಟಗಾರನೊಬ್ಬ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.ಈ ಸಲುವಾಗಿ ಹೋಟೆಲ್ ಅಧಿಕಾರಿಗಳು ತಂಡದ ವ್ಯವಸ್ಥಾಪಕ ನವೀದ್ ಚೀಮಾ ಅವರಿಗೆ ದೂರು ನೀಡಿದ್ದು, ದೂರಿನನ್ವಯ ವ್ಯವಸ್ಥಾಪಕರು ಆಟಗಾರನಿಗೆ ದಂಡ ವಿಧಿಸಿ ಹೋಟೆಲ್ ಆಡಳಿತ ಮಂಡಳಿ ಮುಂದೆ ಆ ಕ್ರಿಕೆಟಿಗನಿಂದ ಕ್ಷಮೆಯಾಚಿಸಿದ್ದಾರೆ.

ಆಟಗಾರನ ಹೆಸರು ಬಹಿರಂಗವಾಗಿಲ್ಲ

ಇದರ ಜೊತೆಗೆ ಹೆಚ್ಚಿನ ವಿಚಾರಣೆಗಾಗಿ ಆ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆ ಆಟಗಾರನ ಹೆಸರು ಇನ್ನೂ ಬಹಿರಂಗವಾಗಿಲ್ಲ. ವರದಿಯ ಪ್ರಕಾರ, ಈ ಘಟನೆ ಪಾಕಿಸ್ತಾನದ ಅಂತಿಮ ಸೂಪರ್ 8 ಪಂದ್ಯಕ್ಕೂ ಸ್ವಲ್ಪ ಮೊದಲು ಅಥವಾ ಆ ಸಮಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಇಂತಹ ವಿವಾದಗಳು ಹುಟ್ಟಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿಂದೆ ತಂಡದ ಪ್ರವಾಸಗಳಲ್ಲಿ ಆಟಗಾರರು ಅಥವಾ ಸಹಾಯಕ ಸಿಬ್ಬಂದಿಗಳು ಅಶಿಸ್ತಿನ ಆರೋಪ ಹೊತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ