- TV9 Kannada Photo gallery Cricket photos Afghanistan Qualify for 2027 ODI World Cup; Two Major Teams Forced into Qualifiers
ಏಕದಿನ ವಿಶ್ವಕಪ್‌ಗೆ ಆಫ್ಘಾನಿಸ್ತಾನ್ ಎಂಟ್ರಿ: 2 ತಂಡಗಳು ಔಟ್..!
ODI World Cup 2027: 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಮುಂಬರುವ ಟೂರ್ನಿಗೆ ಆಫ್ರಿಕಾ ಖಂಡದ ಪ್ರಮುಖ ಮೂರು ದೇಶಗಳಾದ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.
Updated on: Aug 08, 2026 | 10:26 AM

ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ, ಆಫ್ಘಾನಿಸ್ತಾನ್ ತಂಡವು 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಐಸಿಸಿ ನಿಗದಿಪಡಿಸಿದ್ದ ಸೆಪ್ಟೆಂಬರ್ 30ರ ಗಡುವಿಗೂ ಮುನ್ನವೇ ಅಫ್ಘಾನ್ ಪಡೆ ಅಧಿಕೃತವಾಗಿ ಅಗ್ರ ತಂಡಗಳ ಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. (PC: GettyImages)

2027ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಬೇಕಿದ್ದರೆ ಐರ್ಲೆಂಡ್ ತಂಡವು ಆಫ್ಘಾನಿಸ್ತಾನ್ ವಿರುದ್ಧದ ಎಲ್ಲಾ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಬ್ರೆಡಿಯಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಗೆ ಆಹುತಿಯಾಗುತ್ತಿದ್ದಂತೆ ಐರ್ಲೆಂಡ್ ಕನಸು ಭಗ್ನಗೊಂಡಿದೆ. ಇದರಿಂದಾಗಿ ಆಫ್ಘಾನಿಸ್ತಾನ್ ರೇಟಿಂಗ್ ಪಾಯಿಂಟ್‌ಗಳನ್ನು ಹಿಂದಿಕ್ಕಲು ಐರ್ಲೆಂಡ್‌ಗೆ ಇನ್ನು ಸಾಧ್ಯವಿಲ್ಲ ಎಂಬುದು ಖಾತರಿಯಾಯಿತು. (PC: GettyImages)

ಇತ್ತ ಅಫ್ಘಾನಿಸ್ತಾನ್ ತಂಡ ನೇರವಾಗಿ ಎಂಟ್ರಿ ಕೊಟ್ಟಿರುವ ಹಿನ್ನಲೆ ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳು 2027ರ ಆರಂಭದಲ್ಲಿ ನಡೆಯಲಿರುವ 10 ತಂಡಗಳ ಗ್ಲೋಬಲ್ ಕ್ವಾಲಿಫೈಯರ್ ಟೂರ್ನಿ ಆಡುವುದು ಅನಿವಾರ್ಯ. ಅಂದರೆ ಐಸಿಸಿ ರ‍್ಯಾಂಕಿಂಗ್ ಮೂಲಕ ಅರ್ಹತೆ ಪಡೆದಿರುವ ಅವಕಾಶದಿಂದ ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳು ಹೊರಬಿದ್ದಿವೆ. ಇನ್ನು ಈ ಎರಡು ತಂಡಗಳು ಗ್ಲೋಬಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದರೆ ಮಾತ್ರ 2027ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ. (PC: GettyImages)

ಈ ಬಾರಿಯ ವಿಶ್ವಕಪ್‌ಗೆ 10 ತಂಡಗಳು ನೇರವಾಗಿ ಅರ್ಹತೆ ಪಡೆದರೆ, 4 ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್‌ಗೆ ಕ್ವಾಲಿಫೈ ಆಗಲಿದೆ. ಇಲ್ಲಿ ಡೈರೆಕ್ಟ್ ಎಂಟ್ರಿ ಪಡೆಯುವ ತಂಡಗಳಲ್ಲಿ ಎರಡು ಆತಿಥೇಯ ರಾಷ್ಟ್ರಗಳು ಎಂಬುದು ವಿಶೇಷ. ಅದರಂತೆ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು ವಿಶ್ವಕಪ್ ಆಡಲಿರುವುದು ಖಚಿತ. (PC: ICC)

ಇನ್ನುಳಿದಂತೆ ಐಸಿಸಿ ರ‍್ಯಾಂಕಿಂಗ್ ಮೂಲಕ ಅರ್ಹತೆ ಪಡೆದ ತಂಡಗಳೆಂದರೆ... ಭಾರತ, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಪಾಕಿಸ್ತಾನ್, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಅಫ್ಘಾನಿಸ್ತಾನ್. ಅಂದರೆ ಈ 8 ತಂಡಗಳ ಜೊತೆ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು 2027ರ ಏಕದಿನ ವಿಶ್ವಕಪ್‌ಗೆ ಕಣಕ್ಕಿಳಿಯುವುದು ಖಚಿತವಾಗಿದೆ. (PC: ICC)




