ಪೆನ್ ಡ್ರೈವ್ ಬಗ್ಗೆ ಪ್ರಸ್ತಾಪಿಸಿದ ಹೆಚ್ ಡಿ ಕುಮಾರಸ್ವಾಮಿ ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ರಿಲೀಸ್ ಮಾಡಿದರೂ ವ್ಯರ್ಥ ಅನ್ನುತ್ತಾರೆ!
ನೀರಜಾ ಚೌಧುರಿ ಬರೆದಿರುವ ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್ ಪುಸ್ತಕವನ್ನು ತೋರಿಸಿ ಅದರಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ವಿಪಿ ಸಿಂಗ್ ಮೊದಲಾದವರೆಲ್ಲ ಪ್ರಧಾನ ಮಂತ್ರಿ ಸ್ಥಾನ ಹೋದ ಮೇಲೆ ಏನು ಹೇಳಿದ್ದರು ಅನ್ನೋದನ್ನು ದಾಖಲಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಗರದ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೊಷ್ಟಿಯೊಂದನ್ನು ನಡೆಸಿ ಮಾತಾಡುವಾಗ ಖ್ಯಾತ ಪತ್ರಕರ್ತೆ ನೀರಜಾ ಚೌಧುರಿ (Neerja Choudhury) ಅವರು ಬರೆದಿರುವ ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್ (How Prime Ministers Decide) ಪುಸ್ತಕವನ್ನು ತೋರಿಸಿ ಅದರಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ವಿಪಿ ಸಿಂಗ್ ಮೊದಲಾದವರೆಲ್ಲ ಪ್ರಧಾನ ಮಂತ್ರಿ ಸ್ಥಾನ ಹೋದ ಮೇಲೆ ಏನು ಹೇಳಿದ್ದರು ಅನ್ನೋದನ್ನು ದಾಖಲಿಸಿದ್ದಾರೆ. ಹಾಗೆಯೇ 1977 ರಲ್ಲಿ ಇಂದಿರಾ ಗಾಂಧಿಯವರು ಅಧಿಕಾರ ಕಳೆದುಕೊಂಡ ಬಳಿಕ ಏನು ಹೇಳಿದ್ದರು ಅನ್ನೋದನ್ನೂ ಉಲ್ಲೇಖಿಸಿದ್ದಾರೆ. ಹೆಚ್ ಡಿ ದೇವೇಗೌಡರ ಬಗ್ಗೆ ಇಲ್ಲೇಖ ಇದೆಯಾ ಇಲ್ಲವಾ ಅಂತ ಅವರು ಹೇಳಲಿಲ್ಲ. ನಂತರ ತಮ್ಮ ಪೆನ್ ಡ್ರೈವ್ ವಿಷಯಕ್ಕೆ ಬಂದ ಕುಮಾರಸ್ವಾಮಿ, ಅದು ಖಾಲಿ ಅಲ್ಲ, ಅದರಲ್ಲಿ ಸಾಕಷ್ಟು ವಿಷಯವಿದೆ ಅಂತ ಹೇಳಿ, ಅದನ್ನು ಬಿಡಗಡೆ ಮಾಡಿದರೂ ಸರ್ಕಾರ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಬಾಯಿ ಮುಚ್ಚಿಸುತ್ತದೆ, ಪಾಪ ಅವರ ಬದುಕು ಹಾಳು ಮಾಡುವುದು ಸರಿಯಲ್ಲ ಎನ್ನುತ್ತಾರೆ. ಇತ್ತೀಚಿಗೆ ಕುಮಾರಸ್ವಾಮಿ ಮಾತಾಡುವಾಗ ಸ್ಪಷ್ಟತೆಯೇ ಇರೋದಿಲ್ಲ. ಏನೋ ಹೇಳಹೋಗಿ ಏನೋ ಮಾತಾಡಿ ಕೊನೆಗೆಲ್ಲೋ ಮುಗಿಸಿಬಿಡುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ