Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆನ್​ಡ್ರೈವ್​ ಅನ್ನು ಹೆಚ್ ಡಿ ಕುಮಾರಸ್ವಾಮಿ ಮರೆತರೂ ಮಾಧ್ಯಮದವರು ಮರೆಯಲಾರರು, ಕೇಳಿದಾಗ ತಲೆ ಚಚ್ಚಿಕೊಳ್ಳಬೇಕಾಯಿತು!

ಪೆನ್​ಡ್ರೈವ್​ ಅನ್ನು ಹೆಚ್ ಡಿ ಕುಮಾರಸ್ವಾಮಿ ಮರೆತರೂ ಮಾಧ್ಯಮದವರು ಮರೆಯಲಾರರು, ಕೇಳಿದಾಗ ತಲೆ ಚಚ್ಚಿಕೊಳ್ಳಬೇಕಾಯಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2023 | 11:20 AM

ಕಾಂಗ್ರೆಸ್ ಪರ ತೀರ್ಪು ನೀಡಿದ ಜನತೆಗೆ ಮುಂದೆ ಇನ್ನಷ್ಟು ಆಘಾತಗಳು ಕಾದಿವೆ, ಅವರಿಗೆ ತಮ್ಮ ತಪ್ಪಿನ ಅರಿವಾಗಬೇಕು, ಸೂಕ್ತ ಸಮಯದಲ್ಲಿ ಪೆನ್​ಡ್ರೈವ್ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ವರಸೆಯೇ ಹಾಗೆ, ಒಮ್ಮೆ ಮಾತಿಗೆ ನಿಂತರೆ ಹಲವಾರು ವಿಷಯಗಳನ್ನು ಮಾತಾಡುತ್ತಾರೆ. ಕುಟುಂಬದೊಂದಿಗೆ ಯುರೋಪ್ ಪ್ರವಾಸ (Europe Trip) ಮುಗಿಸಿಕೊಂಡು ರಾಜ್ಯ ರಾಜಧಾನಿಗೆ ಹಿಂತಿರುಗಿದ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಮೂರುವಾರಗಳಿಂದ ಪ್ರೆಸ್ ನಿಂದ ದೂರವಿದ್ದ ಬರವನ್ನು ನೀಗಿಸಿಕೊಂಡರು. ಸುದ್ದಿಗಾರರೊಂದಿಗೆ ಮಾತಾಡುವಾಗ ಅವರು ತಮ್ಮ ಪೆನ್ ಡ್ರೈವ್ (pendrive) ಅಸ್ತ್ರವನ್ನು ಮರೆತಿರುತ್ತಾರೆ ಅಂತ ಭಾವಿಸಿದ್ದರು! ಆದರೆ, ಪತ್ರಕರ್ತರೊಬ್ಬರು ಸರ್ ಎಲ್ಲಿ ಪೆನ್ ಡ್ರೈವ್ ಅಂತ ಕೇಳಿದಾಗ, ‘ಅಯ್ಯೋ ರಾಮ!’ ಅಂತ ಹಣೆ ಚಚ್ಚಿಕೊಂಡರು. ಅದನ್ನು ರಿಲೀಸ್ ಮಾಡುವ ಸಮಯ ಇನ್ನೂ ಬಂದಿಲ್ಲ, ಕಾಂಗ್ರೆಸ್ ಪರ ತೀರ್ಪು ನೀಡಿದ ಜನತೆಗೆ ಮುಂದೆ ಇನ್ನಷ್ಟು ಆಘಾತಗಳು ಕಾದಿವೆ, ಅವರಿಗೆ ತಮ್ಮ ತಪ್ಪಿನ ಅರಿವಾಗಬೇಕು, ಸೂಕ್ತ ಸಮಯದಲ್ಲಿ ಅದನ್ನು ಬಿಡುಗಡೆ ಮಾಡುವುದಾಗಿ ಹೇಳಿ ಮತ್ತೊಮ್ಮೆ ಡಿಫೆನ್ಸಿವ್ ಶಾಟ್ ಆಡಿದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ