ಜೇಬಿನಿಂದ ಪೆನ್ ಡ್ರೈವ್ ತೆಗೆದು ಅಕ್ರಮ ಬಯಲು ಮಾಡುವುದಾಗಿ ಹೆಚ್​ಡಿ ಕುಮಾರಸ್ವಾಮಿಯಿಂದ ಎಚ್ಚರಿಕೆ

ಜೇಬಿನಿಂದ ಪೆನ್ ಡ್ರೈವ್ ತೆಗೆದು ಇದರಲ್ಲಿ ಎಲ್ಲಾ ದಾಖಲೆ ಇದೆ. ಸರಿಯಾದ ಸಮಯಕ್ಕೆ ರಿವಿಲ್ ಮಾಡ್ತೀನಿ. ನಾನು ಸುಮ್ ನುಮ್ನೇ ಚರ್ಚೆ ಮಾಡಲ್ಲ ಎಂದು ಹೆಚ್​ಡಿ ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.

ಜೇಬಿನಿಂದ ಪೆನ್ ಡ್ರೈವ್ ತೆಗೆದು ಅಕ್ರಮ ಬಯಲು ಮಾಡುವುದಾಗಿ ಹೆಚ್​ಡಿ ಕುಮಾರಸ್ವಾಮಿಯಿಂದ ಎಚ್ಚರಿಕೆ
| Updated By: ಆಯೇಷಾ ಬಾನು

Updated on:Jul 05, 2023 | 1:14 PM

ಬೆಂಗಳೂರು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿಧಾನಸೌಧದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಜೇಬಿನಿಂದ ಪೆನ್ ಡ್ರೈವ್ ತೆಗೆದು ಇದರಲ್ಲಿ ಎಲ್ಲಾ ದಾಖಲೆ ಇದೆ. ಸರಿಯಾದ ಸಮಯಕ್ಕೆ ರಿವಿಲ್ ಮಾಡ್ತೀನಿ. ನಾನು ಸುಮ್ ನುಮ್ನೇ ಚರ್ಚೆ ಮಾಡಲ್ಲ. ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡಿದ್ದೀನಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿಗೆ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ ಎಂದು ಆರೋಪ ಮಾಡಿದ್ದಾರೆ.

ನಿನ್ನೆ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ತಗೊತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದವನು ನಾನು. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತಾಡ್ತಾರೆ. ವರ್ಗಾವಣೆ ದಂಧೆದೇ ಪೆನ್ ಡ್ರೈವ್ ಇದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಈ ಸರ್ಕಾರದಲ್ಲಿ ನಗದು ಅಭಿವೃದ್ಧಿ ಇಲಾಖೆ ಎಂದು ಯಾರೋ ಹೇಳಿದ್ರು. ಅದಕ್ಕೆ ನಾನು ಅಂದೆ ನಗರಾಭಿವೃದ್ಧಿ ಇಲಾಖೆ ಬಗ್ಗೆ ಗೊತ್ತು. ನಗದು ಅಭಿವೃದ್ಧಿ ಇಲಾಖೆ ಯಾವುದು ಅಂತಾ ಅರ್ಥವಾಗಲಿಲ್ಲ. ಯಾಕೆ ಹೀಗೆ ಕರೆತಿದಿದ್ದಾರೆಂದು ಆಮೇಲೆ ಗೊತ್ತಾಯಿತು. ನಗರಾಭಿವೃದ್ಧಿ ಇಲಾಖೆ ಅಲ್ಲ ನಗದು ಅಭಿವೃದ್ಧಿ ಇಲಾಖೆ ಅಂತ ಸರ್ಕಾರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

Published On - 1:09 pm, Wed, 5 July 23

Follow us