Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 44 ವರ್ಷಗಳಲ್ಲಿ ಬೆಂಗಳೂರು ಶೇ 1,005 ರಷ್ಟು ಬೆಳೆದಿದೆ: ವರದಿ

1973 ರಿಂದ 2017ರ ವರೆಗೆ ಬೆಂಗಳೂರು ಶೇ 1,005ರಷ್ಟು ಬೆಳೆದಿದೆ. ನಗರದಲ್ಲಿ ರಾಜ್ಯದ ಜನಸಂಖ್ಯೆಗಿಂತ ಶೇ 15 ಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ ಎಂದು ಕಾರ್ಪರೇಟ್ಸ್​ ಇನ್​ ರಿಯಲ್​ ಎಸ್ಟೆಟ್​ (CIRE) ಎಂದು ಕರೆಯಲ್ಪಡುವ ಲೀಡರ್​​ಶಿಪ್​​ ನೆಟ್​ವರ್ಕ್​​ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖವಾಗಿದೆ.

ಕಳೆದ 44 ವರ್ಷಗಳಲ್ಲಿ ಬೆಂಗಳೂರು ಶೇ 1,005 ರಷ್ಟು ಬೆಳೆದಿದೆ: ವರದಿ
ಬೆಂಗಳೂರು
Follow us
ವಿವೇಕ ಬಿರಾದಾರ
|

Updated on: Aug 16, 2023 | 10:06 AM

ಬೆಂಗಳೂರು: 1973 ರಿಂದ 2017ರ ವರೆಗೆ ಬೆಂಗಳೂರು (Bengaluru) ಶೇ 1,005ರಷ್ಟು ಬೆಳೆದಿದೆ. ನಗರದಲ್ಲಿ ರಾಜ್ಯದ ಜನಸಂಖ್ಯೆಗಿಂತ ಶೇ 15 ಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ ಎಂದು ಕಾರ್ಪರೇಟ್ಸ್​ ಇನ್​ ರಿಯಲ್​ ಎಸ್ಟೆಟ್​ (CIRE) ಎಂದು ಕರೆಯಲ್ಪಡುವ ಲೀಡರ್​​ಶಿಪ್​​ ನೆಟ್​ವರ್ಕ್​​ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನು ಬೆಂಗಳೂರು ನಗರವು ಉದ್ಯೋಗಿಗಳಿಗೆ ಪ್ರಮುಖ ಕೇಂದ್ರವಾಗಿದೆ ಮತ್ತು ನೈಜ ಅಭಿವೃದ್ಧಿಗೆ ಕೇಂದ್ರಬಿಂದುವಾಗಿದೆ.

ಕಳೆದ ವರ್ಷ ಭಾರತದ ವಾಣಿಜ್ಯ ಗುತ್ತಿಗೆಗಳಲ್ಲಿ ನಗರವು ಶೇ 20 ರಷ್ಟು ಭಾಗ ಹೊಂದಿದೆ. 2022 ರಲ್ಲಿ, ನಗರದ 12.5 ಮಿಲಿಯನ್ ಚದರ ಅಡಿ ಭೂಮಿಯಲ್ಲಿ ಕಚೇರಿಗಳೇ ಇವೆ. ಈ ವರ್ಷದ ಅಂತ್ಯದ ವೇಳೆಗೆ ಇದು 8-7 ಮಿಲಿಯನ್ ಚದರ​​ ಅಡಿಗೆ ಏರುವ ನಿರೀಕ್ಷೆ ಇದೆ. ಕಳೆದ ವರ್ಷ ಒಂದರಲ್ಲೇ 8.5 ಮಿಲಿಯನ್ ಚದರ ಅಡಿ ಭೂಮಿ ವಾಣಿಜ್ಯ ರಿಯಲ್ ಎಸ್ಟೇಟ್​​ಗಾಗಿ ಬಳಕೆಯಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ (IT-BPM) ವಲಯವು ಕಳೆದ ವರ್ಷ ಶೇ 40ರಷ್ಟು ಭೂಮಿಯನ್ನು ಬಾಡಿಗೆ ಪಡೆದುಕೊಂಡಿದೆ. ನಂತರ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಲಯ ಶೇ 25 ರಷ್ಟು ಭೂಮಿಯನ್ನು ಬಾಡಿಗೆ ಪಡೆದುಕೊಂಡಿದೆ. ನಗರದ ಒಟ್ಟು ಗುತ್ತಿಗೆಯ ಶೇ 17 ರಷ್ಟು ಭೂಮಿಯು ಕಚೇರಿಗಳಿವೆ. ಹೊರ ವರ್ತುಲ ರಸ್ತೆ, ಪೆರಿಫೆರಲ್ ಈಸ್ಟ್ (ಆನೇಕಲ್) ಮತ್ತು ಪೆರಿಫೆರಲ್ ಸೌತ್ (ಕನಕಪುರ) ಪ್ರದೇಶಗಳ ಒಟ್ಟು ಭೂಮಿಯಲ್ಲಿ ಶೇ 50 ರಷ್ಟು ಅನ್ನು ರಿಯಲ್ ಎಸ್ಟೇಟ್​​ಗಾಗಿ ಮೀಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ತೆರವಿಗೆ ಬಿಬಿಎಂಪಿ ಆದೇಶ

ಇನ್ನು 2022ರಲ್ಲಿ ನಗರದಲ್ಲಿ 1.8 ಮಿಲಿಯನ್​​ ಚದರ ಅಡಿ ಭಾಮಿಯಲ್ಲಿ ಅಂಗಡಿಗಳೇ ಇವೆ. ಸಣ್ಣಪುಟ್ಟ ಅಂಗಡಿಗಳು ಹೆಚ್ಚಾಗಿ ಇಂದಿರಾನಗರ, ಜಯನಗರ ಮತ್ತು ಕೋರಮಂಗಲದಲ್ಲಿವೆ. ಚಿಲ್ಲರೆ ಮಾರುಕಟ್ಟೆ 2022ರಲ್ಲಿ 65 ರಿಂದ 70 ಪ್ರತಿಶತದಷ್ಟು ಆಕ್ರಮಿಸಿಕೊಂಡಿದೆ. ಈ ಮಾರುಕಟ್ಟೆಯಿಂದ ಇಲ್ಲಿಯ ಭೂಮಿಗೆ ಹೆಚ್ಚು ಬೇಡಿಕೆ ಬಂದಿದೆ.

ಬಾಡಿಗೆಗಳು ಹೆಚ್ಚಳ

ಕಳೆದ ಎರಡು-ಮೂರು ವರ್ಷಗಳಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಬಾಡಿಗೆ ಮನೆಗಳ ಬಾಡಿಗೆ 2019 ರಿಂದ 2021ರ ಅಂತ್ಯದವರೆಗೆ ಸ್ಥಿರವಾಗಿತ್ತು. ಆದರೆ 2022 ರ ನಂತರ ಬಾಡಿಗೆ ಏರಿಕೆ ಕಂಡಿದೆ. ಹೂಡಿಕೆ, ಮೂಲಸೌಕರ್ಯ ಮತ್ತು ಇನ್ನಿತರ ಸೌಲಭ್ಯಗಳು ಸುಲಭವಾಗಿ ದೊರೆಯುವುದರಿಂದ ಬಾಡಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಲೈವ್​​​ಬಿಲಿಟಿ ಇಂಡೆಕ್ಸ್​​ ವರದಿ ಪ್ರಕಾರ 1991ರಲ್ಲಿ 16 ಕೋಟಿ ರೂ. ಅಷ್ಟು ಸಾಪ್ಟ್​​ವೇರ್​ ರಪ್ತಾಗಿದ್ದು, 2022ರಲ್ಲಿ 6.3 ಲಕ್ಷ ಕೋಟಿ ರೂ. ನಷ್ಟು ಸ್ಪಾಪ್ಟ್​​ವೇರ್​ ರಪ್ತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್