AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮೆಗೆ ದುಬಾರಿ ಗಿಫ್ಟ್​​ ಕೊಡಲು ಹಲವೆಡೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

ಎರಡು ದಿನಗಳ ಹಿಂದೆ ನ್ಯೂಯಾರ್ಕ್ ನ ಬಿಗ್ ಆ್ಯಪಲ್ ಸ್ಟೋರ್ ನಲ್ಲಿ ಕಳ್ಳತನವಾಗಿತ್ತು. ಈ ವೇಳೆ 40 ವರ್ಷದ ಯಾರೊಂಗ್ ವಾನ್ ಎರಡು ಆಭರಣಗಳನ್ನು ಕದ್ದಿರುವುದು ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದಾಗ ಈತ ಹಲವಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಿಯತಮೆಗೆ ದುಬಾರಿ ಗಿಫ್ಟ್​​ ಕೊಡಲು ಹಲವೆಡೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
ಪ್ರಿಯತಮೆಗೆ ದುಬಾರಿ ಗಿಫ್ಟ್​​ ಕೊಡಲು ಹಲವೆಡೆ ಕಳ್ಳತನ
Follow us
ಅಕ್ಷತಾ ವರ್ಕಾಡಿ
|

Updated on: May 09, 2024 | 4:50 PM

ನ್ಯೂಯಾರ್ಕ್:  ತನ್ನ ಪ್ರೇಯಸಿಯನ್ನು ಸದಾ ಖುಷಿ ಪಡಿಸಲು, ಅವಳು ಬಯಸಿದ್ದಂತಹ ವಜ್ರದ ಉಂಗುರ, ದುಬಾರಿ ಆಭರಣ, ಐಫೋನ್​​​ಗಳನ್ನು ಗಿಫ್ಟ್​​ ನೀಡುತ್ತಿದ್ದ ವ್ಯಕ್ತಿ. ಕಷ್ಟಪಟ್ಟು ದುಡಿದ ಹಣದಿಂದಲೇ ಇದೆಲ್ಲವನ್ನೂ ಖರೀದಿಸಿರಬೇಕು ಎಂದುಕೊಂಡಿದ್ದ ಗೆಳತಿ. ಆದರೆ ಇತ್ತೀಚಿಗಷ್ಟೇ ತನ್ನ ಪ್ರಿಯಕರನ ಕಳ್ಳತನದ ಭಯಾನಕ ರಹಸ್ಯ ಬಹಿರಂಗವಾಗಿ, ಯುವತಿ ಆಘಾತಕ್ಕೊಳಗಾಗಿದ್ದಾಳೆ. ಈ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ನ್ಯೂಯಾರ್ಕ್ ನ ಬಿಗ್ ಆ್ಯಪಲ್ ಸ್ಟೋರ್ ನಲ್ಲಿ ಕಳ್ಳತನವಾಗಿತ್ತು. 40 ವರ್ಷದ ಯಾರೊಂಗ್ ವಾನ್ ಎರಡು ಆಭರಣಗಳನ್ನು ಕದ್ದಿರುವುದು ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದಾಗ ಇಂಟರ್‌ಪೋಲ್ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿರುವುದು ಕಂಡುಬಂದಿದೆ. ಏಕೆಂದರೆ ಈತ ಈ ಹಿಂದೆ ದಕ್ಷಿಣ ಕೊರಿಯಾದ ಆಭರಣ ಮಳಿಗೆಗಳಿಗೂ ಕನ್ನ ಹಾಕಿ ಸಿಕ್ಕಿ ಬಿದ್ದಿದ್ದ. ಈ ಸುದ್ದಿ ಹೊರಬಿದ್ದ ಕೂಡಲೇ ಯಾರೊಂಗ್ ವಾನ್ ಗೆಳತಿ ಶಾಕ್​ಗೆ ಒಳಗಾಗಿದ್ದಾಳೆ.

ಇದನ್ನು ಓದಿ: ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು ಮದುವೆಯಾದ 70ರ ವೃದ್ಧನ ಬಂಧನ

ಜನವರಿಯಲ್ಲಿ ಲಾಸ್ ಏಂಜಲೀಸ್‌ಗೆ ತನ್ನ ಪ್ರವಾಸದ ಸಮಯದಲ್ಲಿ ಅವಳು ವಾನ್‌ನನ್ನು ಭೇಟಿಯಾಗಿದ್ದಳು. ನಂತರ ಅವನು ತನ್ನ ಹೆಸರನ್ನು ವೇಯ್ನ್ ಸ್ಯಾನ್ ಎಂದು ಹೇಳಿದನು. ಇವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು, ಇಬ್ಬರು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ. ಇದಲ್ಲದೇ ಪ್ರೇಯಸಿ ಕೇಳುವ ದುಬಾರಿ ಬೆಲೆಯ ವಸ್ತುಗಳನ್ನು ಗಿಫ್ಟ್​​ ನೀಡುತ್ತಿದ್ದ. ಈ ವರೆಗೆ ಲಂಡನ್ ಜ್ಯುವೆಲರ್ಸ್ ನಿಂದ 17,000 ಡಾಲರ್ ಮೌಲ್ಯದ ವಾಚ್ ಕದ್ದಿದ್ದಾನೆ. ರಾಕ್‌ಫೆಲ್ಲರ್ ಸೆಂಟರ್‌ನಲ್ಲಿರುವ ಟಿಫಾನಿ & ಕಂ.ನಿಂದ ಕಾಲು ಮಿಲಿಯನ್ ಡಾಲರ್ ಮೌಲ್ಯದ ಉಂಗುರವನ್ನು ಮತ್ತು ಹಡ್ಸನ್ ಯಾರ್ಡ್‌ನಲ್ಲಿರುವ ಕಾರ್ಟಿಯರ್‌ನಿಂದ ಮತ್ತೊಂದು ಉಂಗುರವನ್ನು ಕದ್ದಿರುವುದು ಇದೀಗ ಬಯಲಿಗೆ ಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ