ಅಮೆರಿಕದ ಅಂಕಲ್ ಚರ್ಮದ ಆಧಾರದ ಮೇಲೆ ಭಾರತೀಯರನ್ನು ನಿಂದಿಸಿದ್ದು ತಪ್ಪು ಎಂದು ಸ್ಯಾಮ್ ಪಿತ್ರೋಡಾಗೆ ತಿರುಗೇಟು ನೀಡಿದ ಮೋದಿ
ಚರ್ಮದ ಬಣ್ಣದ ಆಧಾರದ ಮೇಲೆ ನನ್ನ ದೇಶದವರನ್ನು ಅವಮಾನಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಯಾಮ್ ಪಿತ್ರೋಡಾಗೆ ಹೇಳಿದ್ದಾರೆ. ದೇಶದ ಈಶಾನ್ಯ ಮತ್ತು ದಕ್ಷಿಣ ಪ್ರದೇಶದ ರಾಜ್ಯಗಳಲ್ಲಿ ವಾಸಿಸುವ ಜನರ ಬಗ್ಗೆ ಸ್ಯಾಮ್ ಪಿತ್ರೋಡಾ ಮಾತನಾಡಿದ್ದರು. ಪೂರ್ವ ಭಾರತದ ಜನರು ಚೀನಾದ ಜನರಂತೆ, ಪಶ್ಚಿಮ ಭಾರತದಲ್ಲಿ ವಾಸಿಸುವ ಅರಬ್ಬರಂತೆ ಮತ್ತು ದಕ್ಷಿಣದಲ್ಲಿ ವಾಸಿಸುವ ಆಫ್ರಿಕನ್ ಜನರಂತೆ ಕಾಣುತ್ತಾರೆ. ಆದರೆ ಇದರ ಹೊರತಾಗಿಯೂ, ನಾವೆಲ್ಲರೂ ಇನ್ನೂ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದಿದ್ದರು.
‘‘ಅಮೆರಿಕದ ಅಂಕಲ್ ಚರ್ಮದ ಆಧಾರದ ಮೇಲೆ ಭಾರತೀಯರನ್ನು ನಿಂದಿಸಿದ್ದು ತಪ್ಪು’’ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾಗೆ ತಿರುಗೇಟು ನೀಡಿದ್ದಾರೆ. ಸ್ಯಾಮ್ ಪಿತ್ರೋಡಾ ಅವರ ‘ಜನಾಂಗೀಯ’ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರನ್ನು ಅವರ ಬಣ್ಣದ ಆಧಾರದ ಮೇಲೆ ಅವಮಾನಿಸುತ್ತಿದ್ದಾರೆ ಎಂದರು.
ಪೂರ್ವ ಭಾರತದವರು ಚೀನೀಯರಂತೆ ಕಂಡರೆ ದಕ್ಷಿಣ ಭಾರತದವರು ಆಫ್ರಿಕನ್ನರನ್ನು ಹೋಲುತ್ತಾರೆ ಆದರೆ ನಾವು ಎಲ್ಲಾ ಭಾಷಿಗರನ್ನು ಗೌರವಿಸುತ್ತೇವೆ ಎಂದು ವಿವಾದ ಹುಟ್ಟುಹಾಕಿದ್ದರು. ತೆಲಂಗಾಣದ ವಾರಂಗಲ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಏಕೆ ಅವಮಾನಿಸುತ್ತಿದ್ದಾರೆ ಎಂದು ಈಗ ನನಗೆ ಅರ್ಥವಾಗುತ್ತಿದೆ ಎಂದು ಹೇಳಿದರು.
ಆದಿವಾಸಿ ಕುಟುಂಬದ ಮಗಳಾಗಿರುವ ದ್ರೌಪದಿ ಮುರ್ಮು ಅವರನ್ನು ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸುತ್ತಿದೆ ಎಂದು ನಾನು ತುಂಬಾ ಯೋಚಿಸುತ್ತಿದ್ದೆ ಆದರೆ ಇಂದು ನನಗೆ ಕಾರಣ ತಿಳಿಯಿತು. ನಾನು ಇಂದು ತುಂಬಾ ಕೋಪಗೊಂಡಿದ್ದೇನೆ, ಯಾರಾದರೂ ನನ್ನನ್ನು ನಿಂದಿಸಿದರೆ, ನಾನು ಅದನ್ನು ಸಹಿಸಿಕೊಳ್ಳಬಲ್ಲೆ, ಆದರೆ ಜನರನ್ನು ಚರ್ಮದ ಆಧಾರದಲ್ಲಿ ನಿಂತಿಸಿದರೆ ನಾನು ಸಹಿಸಿಕೊಳ್ಳುವುದಿಲ್ಲ ಎಂದರು.
ಮತ್ತಷ್ಟು ಓದಿ: ಭಾರತದ ಪೂರ್ವದಲ್ಲಿರುವವರು ಚೀನೀಯರಂತೆಯೂ ದಕ್ಷಿಣದವರು ಆಫ್ರಿಕನ್ನರಂತೆಯೂ ಕಾಣ್ತಾರೆ: ಸ್ಯಾಮ್ ಪಿತ್ರೋಡಾ
ಸ್ಯಾಮ್ ಪಿತ್ರೋಡಾ ನೀಡಿದ ಸಂದರ್ಶನದಲ್ಲಿ ನಾವು 75 ವರ್ಷಗಳ ಕಾಲ ಸಂತೋಷದ ವಾತಾವರಣದಲ್ಲಿ ಬದುಕಿದ್ದೇವೆ, ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದ ಜನರು ಅರಬ್‌ರಂತೆ ಕಾಣುತ್ತಾರೆ, ಉತ್ತರದಲ್ಲಿರುವ ಜನರು ಬಿಳಿಯಂತೆ ಕಾಣುತ್ತಾರೆ ಮತ್ತು ಬಹುಶಃ ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ ಎಂದರು.
ಮೋದಿ ವಿಡಿಯೋ
#WATCH | Addressing a public gathering in Warangal, Telangana, PM Modi says “I was thinking a lot that Droupadi Murmu who has a very good reputation and is the daughter of Adiwasi family, then why is Congress trying so hard to defeat her but today I got to know the reason. I got… pic.twitter.com/nPJLQ6DQ3Z
— ANI (@ANI) May 8, 2024
ಪಿತ್ರೋಡಾ ಅಮೆರಿಕದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಇದೆ ಎಂದು ಹೇಳಿದ್ದರು. ಒಬ್ಬ ವ್ಯಕ್ತಿ 100 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿದ್ದರೆ ಅವರ ಮರಣದ ನಂತರ 45ರಷ್ಟು ಆಸ್ತಿಯನ್ನು ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ ಮತ್ತು ಶೇ.55ರಷ್ಟು ಆಸ್ತಿ ಸರ್ಕಾರದ ಮಾಲೀಕತ್ವದಲ್ಲಿರುತ್ತದೆ. ಇದೊಂದು ಕುತೂಹಲಕಾರಿ ಕಾನೂನು ಎಂದು ಪಿತ್ರೋಡಾ ಹೇಳಿದ್ದರು. ನಿಮ್ಮ ತಲೆಮಾರಿನಲ್ಲಿ ಆಸ್ತಿ ಸಂಪಾದಿಸಿ ಅದನ್ನು ಬಿಟ್ಟು ಹೋಗುತ್ತಿದ್ದೀರೆಂದರೆ, ಸಾರ್ವಜನಿಕರಿಗೆ ನೀವು ಆಸ್ತಿ ಬಿಟ್ಟುಹೋಗಬೇಕಾಗುತ್ತದೆ. ಎಲ್ಲಾವೂ ಅಲ್ಲ, ಅರ್ಧದಷ್ಟು ಆಸ್ತಿ ಮಾತ್ರ. ಇದು ನನಗೆ ನ್ಯಾಯಯುತ ಎನಿಸುತ್ತದೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Wed, 8 May 24