AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯ ಮೂಳೆ ಮುರಿಯುವವರೆಗೂ, ಗಾಯ ಆಗುವವರೆಗೂ ಹೊಡೀಬಹುದು, ತಾಲಿಬಾನ್​​ನ ಭಯಾನಕ ಕಾನೂನಿಂದ ಬೆಚ್ಚಿಬಿದ್ದ ಮಹಿಳೆಯರು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ 90 ಪುಟಗಳ ಹೊಸ 'ಕ್ರಿಮಿನಲ್ ಕೋಡ್' ಜಾರಿಗೊಳಿಸಿದೆ. ಇದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಗೃಹ ಹಿಂಸಾಚಾರಕ್ಕೆ ಕಾನೂನು ಮಾನ್ಯತೆ ನೀಡುತ್ತದೆ. ಪತಿಗಳು ತಮ್ಮ ಪತ್ನಿಯರು ಮತ್ತು ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸಬಹುದು. ಗಾಯಗಳಾಗಬಾರದು ಎಂಬುದು ಷರತ್ತು. ದೂರು ನೀಡಲು ಮಹಿಳೆಯರು ಹಲವು ಅಡೆತಡೆಗಳನ್ನು ಎದುರಿಸುತ್ತಾರೆ, ಇದು ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳನ್ನು ಇನ್ನಷ್ಟು ಕುಗ್ಗಿಸುತ್ತದೆ.

ಹೆಂಡತಿಯ ಮೂಳೆ ಮುರಿಯುವವರೆಗೂ, ಗಾಯ ಆಗುವವರೆಗೂ ಹೊಡೀಬಹುದು, ತಾಲಿಬಾನ್​​ನ ಭಯಾನಕ ಕಾನೂನಿಂದ ಬೆಚ್ಚಿಬಿದ್ದ ಮಹಿಳೆಯರು
ಅಫ್ಘಾನಿಸ್ತಾನImage Credit source: Observer Research Foundation
ನಯನಾ ರಾಜೀವ್
|

Updated on: Feb 19, 2026 | 2:51 PM

Share

ತಾಲಿಬಾನ್, ಫೆಬ್ರವರಿ 19: ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡಿರುವ ತಾಲಿಬಾನ್(Taliban), 90 ಪುಟಗಳ ಹೊಸ ‘ಕ್ರಿಮಿನಲ್ ಕೋಡ್’ ಅನ್ನು ಜಾರಿಗೆ ತಂದಿದೆ. ಈ ಹೊಸ ಕೋಡ್ ಮಹಿಳೆಯರು ಮತ್ತು ಮಕ್ಕಳ ಮೇಲಿನ ಕೌಟುಂಬಿಕ ಹಿಂಸಾಚಾರಕ್ಕೆ ಕಾನೂನು ಮಾನ್ಯತೆ ನೀಡುತ್ತದೆ. ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಸಹಿ ಮಾಡಿದ ಈ ಕಾನೂನು, ಗಂಡಂದಿರು ತಮ್ಮ ಹೆಂಡತಿಯರು ಮತ್ತು ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸಬಹುದು ಎಂದು ಹೇಳುತ್ತದೆ. ಮೂಳೆ ಮುರಿಯಬಾರದು, ಗಾಯಗಳಾಗಬಾರದು ಅಷ್ಟೇ. ಈ ಕಾನೂನು 2009 ರಲ್ಲಿ ಮಹಿಳೆಯರಿಗಾಗಿ ಜಾರಿಗೆ ತಂದ ಹಳೆಯ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

ಹೊಸ ಕಾನೂನಿನಡಿಯಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳು ಆಘಾತಕಾರಿ. ಗಂಡನು ತನ್ನ ಹೆಂಡತಿಯನ್ನು ಹೊಡೆದರೆ, ಅದು ಗಂಭೀರ ಗಾಯವನ್ನು ಉಂಟುಮಾಡಿದರೂ, ಅವನಿಗೆ ಗರಿಷ್ಠ 15 ದಿನಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮಹಿಳೆ ದೂರು ದಾಖಲಿಸಲು ಬಯಸಿದರೆ, ಅವಳು ಸಂಪೂರ್ಣವಾಗಿ ಮುಸುಕು ಧರಿಸಿ ನ್ಯಾಯಾಧೀಶರ ಮುಂದೆ ಹಾಜರಾಗಬೇಕು. ಅವಳೊಂದಿಗೆ ಪುರುಷ ರಕ್ಷಕ ಕೂಡ ಇರಬೇಕು, ಹಿಂಸೆ ಮಾಡಿದ ಪತಿ ಇರಬೇಕು. ಗಂಡನ ಅನುಮತಿಯಿಲ್ಲದೆ ಸಂಬಂಧಿಕರನ್ನು ಭೇಟಿ ಮಾಡುವ ವಿವಾಹಿತ ಮಹಿಳೆ ಮೂರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ತಾಲಿಬಾನ್ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದಾರೆ ಮತ್ತು ಅದರ ಆಧಾರದ ಮೇಲೆ ಶಿಕ್ಷೆಗಳನ್ನು ನಿರ್ಧರಿಸಿದ್ದಾರೆ.

ಮತ್ತಷ್ಟು ಓದಿ: ಅಫ್ಘಾನಿಸ್ತಾನ: ಹೆಣ್ಣುಮಕ್ಕಳಿರುವ ವಸತಿ ಕಟ್ಟಡಗಳಲ್ಲಿ ಕಿಟಕಿಯೂ ಇರಬಾರದೆಂದು ತಾಲಿಬಾನ್ ಆದೇಶ

ಧಾರ್ಮಿಕ ವಿದ್ವಾಂಸರು: ಅವರಿಗೆ ಸಲಹೆ ಮಾತ್ರ ನೀಡಲಾಗುವುದು, ಶಿಕ್ಷೆಯಿಲ್ಲ. ಎಲೈಟ್ ವರ್ಗ: ಅವರನ್ನು ಕರೆಸಿ ವಿವರಿಸಲಾಗುವುದು ಮಧ್ಯಮ ವರ್ಗ: ಅವರಿಗೆ ಜೈಲು ಶಿಕ್ಷೆ ವಿಧಿಸಬಹುದು ಕೆಳವರ್ಗ: ಇವರು ಜೈಲು ಶಿಕ್ಷೆ ಮತ್ತು ದೈಹಿಕ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ, ಉದಾಹರಣೆಗೆ ಚಾಟಿಯೇಟು. ಆಶ್ಚರ್ಯಕರವೆಂದರೆ, ಚಾಟಿಯೇಟು ಹೊಡೆಯುವಿಕೆಯನ್ನು ಜೈಲು ಅಧಿಕಾರಿಗಳು ನಿರ್ವಹಿಸುವುದಿಲ್ಲ, ಬದಲಾಗಿ ಧಾರ್ಮಿಕ ಮುಖಂಡರು ಮಾಡುತ್ತಾರೆ.

ಈ ಹೊಸ ಕಾನೂನು ಅಫ್ಘಾನಿಸ್ತಾನದ ಜನರನ್ನು ಆವರಿಸಿಕೊಂಡಿದ್ದು, ಅದರ ಬಗ್ಗೆ ಚರ್ಚಿಸುವುದನ್ನೂ ಅಪರಾಧವೆಂದು ಪರಿಗಣಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಾಲಿಬಾನ್ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು, ಆದರೆ ಈ ಹೊಸ ಕ್ರಿಮಿನಲ್ ಕಾನೂನು ಅವರ ವೈಯಕ್ತಿಕ ಭದ್ರತೆಯನ್ನು ಮತ್ತಷ್ಟು ಕುಗ್ಗಿಸುತ್ತದೆ. ಅಂತರರಾಷ್ಟ್ರೀಯ ಒತ್ತಡದ ಹೊರತಾಗಿಯೂ, ಈ ಕಾನೂನಿನ ಬಗ್ಗೆ ತಾಲಿಬಾನ್ ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.

ಗಂಡನ ದೌರ್ಜನ್ಯ ವಿವರಿಸಲು ಪತ್ನಿ ನ್ಯಾಯಾಲಯಕ್ಕೆ ಬಂದರೆ ತನ್ನ ಗಾಯಗಳನ್ನು ತೋರಿಸಬೇಕು, ಆದರೆ ಇದೇ ದೇಶದಲ್ಲಿ ಮಹಿಳೆ ನ್ಯಾಯಾಧೀಶರ ಮುಂದೆ ಸಂಪೂರ್ಣವಾಗಿ ಬಟ್ಟೆ ಮುಚ್ಚಿಕೊಳ್ಳಬೇಕಾಗುತ್ತದೆ. ತಾನು ಅನುಭವಿಸಿದ ದೌರ್ಜನ್ಯದ ಬಗ್ಗೆ ದೂರು ನೀಡಲು ಮಹಿಳೆ ನ್ಯಾಯಾಲಯಕ್ಕೆ ಹೋಗಲು ಬಯಸಿದರೆ, ಅವಳು ಒಬ್ಬಂಟಿಯಾಗಿ ಹೋಗಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ, ಅವಳು ತನ್ನ ಪತಿ ಹಾಗೂ ಪುರುಷ ಸಂಬಂಧಿಯೊಂದಿಗೆ ಹೋಗಬೇಕು. ಈಗ ಪ್ರಶ್ನೆ ಉದ್ಭವಿಸುವುದೇನೆಂದರೆ ಅವಳನ್ನು ಹೊಡೆದ ಪತಿ ತನ್ನ ವಿರುದ್ಧ ಸಾಕ್ಷಿ ಹೇಳಲು ಅವಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಾನೆಯೇ? ಎಂಬುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?