AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ

ಜೆನ್ಸೆನ್ ಹುವಾಂಗ್ ಅವರ ನಿರ್ಗಮನದ ಬಳಿಕ ಈಗ ಎನ್​ವಿಡಿಯಾದ ಸಿಇಒ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಶೋಧಿಸಲಾಗುತ್ತಿದೆ. ವಿವಿಧ ವರದಿಗಳ ಪ್ರಕಾರ, ಹತ್ತಕ್ಕೂ ಹೆಚ್ಚು ಜನರ ಹೆಸರು ಸಿಇಒ ಸ್ಥಾನಕ್ಕೆ ಕಂಡು ಬಂದಿದೆ. ಈ ಪೈಕಿ ಭಾರತ ಮೂಲದ ಮೂವರಿದ್ದಾರೆ. ಚಿಪ್ ತಯಾರಿಕೆ ಕ್ಷೇತ್ರದಲ್ಲಿ ಪಳಗಿದವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವಿ ಇರುವವರ ಹೆಸರುಗಳು ರೇಸ್​ನಲ್ಲಿವೆ.

ಎನ್​ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ
ಎನ್​ವಿಡಿಯಾImage Credit source: Benjamin Fanjoy/Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2026 | 1:37 PM

Share

ನವದೆಹಲಿ, ನವೆಂಬರ್ 13: ಅನೈತಿಕ ಸಂಬಂಧಗಳನ್ನು ಹೊಂದಿದ ಆರೋಪ ಎದುರಿಸುತ್ತಿರುವ ಜೆನ್ಸೆನ್ ಹುವಾಂಗ್ ಅವರು ಎನ್​ವಿಡಿಯಾದ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಹಂಗಾಮಿ ಸಿಇಒ ಆಗಿ ಕೊಲೆಟ್ಟೆ ಕ್ರೆಸ್ ಅವರನ್ನು ಹೆಸರಿಸಲಾಗಿದೆ. ಕಳೆದ 12 ವರ್ಷಗಳಿಂದ ಎನ್​ವಿಡಿಯಾದಲ್ಲಿ ಸಿಎಫ್​ಒ ಆಗಿದ್ದ ಕ್ರೆಸ್ ಸೇರಿದಂತೆ 10ಕ್ಕೂ ಹೆಚ್ಚು ಜನರು ಸಿಇಒ ಸ್ಥಾನದ ರೇಸ್​ನಲ್ಲಿ ಅಥವಾ ಪರಿಗಣನೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿ ಭಾರತ ಮೂಲದ ಮೂವರು ದಿಗ್ಗಜರೂ ಇರುವುದು ಗಮನಾರ್ಹ.

ಎನ್​ವಿಡಿಯಾದ ಸಿಇಒ ರೇಸ್​ನಲ್ಲಿ ಇರುವ ಭಾರತ ಮೂಲದವರು ಇವರು…

  1. ಸಂಜಯ್ ಮೆಹ್ರೋತ್ರಾ: ಇವರು ಮೆಮೊರಿ ಚಿಪ್ ತಯಾರಿಸುವ ಮೈಕ್ರಾನ್ ಟೆಕ್ನಾಲಜೀಸ್​ನ ಸಿಇಒ ಆಗಿದ್ದಾರೆ. ಮೈಕ್ರಾನ್​ನ ಉತ್ಪನ್ನಗಳು ಎನ್​ವಿಡಿಯಾಗೆ ಸರಬರಾಜಾಗುತ್ತವೆ. ಹೀಗಾಗಿ, ಎನ್​ವಿಡಿಯಾ ಕಂಪನಿ ಜೊತೆ ಸಂಜಯ್ ಮೆಹ್ರೋತ್ರಾ ನಿಕಟ ಸಂಪರ್ಕದಲ್ಲಿರುತ್ತಾ ಬಂದಿದ್ದಾರೆ. ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸಂಜಯ್ ಮೆಹ್ರೋತ್ರಾ ಹೆಸರು ಎನ್​ವಿಡಿಯ ಸಿಇಒ ಸ್ಥಾನಕ್ಕೆ ಸಹಜವಾಗಿ ಕೇಳಿಬರುತ್ತದೆ.
  2. ನಿಕೇಶ್ ಅರೋರಾ: ಪಾಲೊ ಆಲ್ಟೋ ನೆಟ್ವರ್ಕ್ಸ್​ ಸಿಇಒ ಆಗಿರುವ ನಿಕೇಶ್ ಅರೋರಾ ಹೆಸರು ಎನ್​ವಿಡಿಯಾ ಸಿಇಒ ರೇಸ್​ನಲ್ಲಿ ಕಾಣಿಸಿದೆ. ಗೂಗಲ್, ಸಾಫ್ಟ್​ಬ್ಯಾಂಕ್ ಇತ್ಯಾದಿ ಕಂಪನಿಗಳಲ್ಲೂ ಕೆಲಸ ಮಾಡಿದ್ದಾರೆ. ಅವರು ಸೈಬರ್​ಸೆಕ್ಯೂರಿಟಿ ಕ್ಷೇತ್ರದಲ್ಲಿ ಹೆಚ್ಚಿನ ಅನುಭವಿಯಾಗಿದ್ದಾರೆ.
  3. ಥಾಮಸ್ ಕುರಿಯನ್: ಗೂಗಲ್ ಕ್ಲೌಡ್​ನ ಸಿಇಒ ಆಗಿರುವ ಥಾಮಸ್ ಕುರಿಯನ್ ಅವರ ಹೆಸರೂ ಕೂಡ ರೇಸ್​ನಲ್ಲಿದೆ. ಕ್ಲೌಡ್ ಇನ್​​ಫ್ರಾಸ್ಟ್ರಕ್ಚರ್, ಎಂಟರ್ಪ್ರೈಸ್ ಸಾಫ್ಟ್​ವೇರ್, ಎಐ ಸರ್ವಿಸ್​ಗಳನ್ನು ನೋಡಿಕೊಳ್ಳುವ ಕುರಿಯನ್ ಅವರು ಜಾಗತಿಕವಾಗಿ ದೊಡ್ಡ ಗ್ರಾಹಕರೊಂದಿಗೆ ಒಡನಾಟ ಹೊಂದಿದ್ದಾರೆ. ಅವರ ಅನುಭವವು ಎನ್​ವಿಡಿಯಾಗೆ ನೆರವಾಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ನಮ್ಮ ಬಾಸ್ ಬೇಕು’: ಜೆನ್ಸೆನ್ ಹುವಾಂಗ್ ಪರ ನಿಂತ ಎನ್​ವಿಡಿಯಾದ 1,600ಕ್ಕೂ ಹೆಚ್ಚು ಉದ್ಯೋಗಿಗಳು

ಎನ್​ವಿಡಿಯಾ ಸಿಇಒ ರೇಸ್​ನಲ್ಲಿ ಕಂಡಿರುವ ಇತರ ಹೆಸರುಗಳು

  • ಕೊಲೆಟ್ಟೆ ಕ್ರೆಸ್: ಎನ್​ವಿಡಿಯಾದಲ್ಲಿ 2013ರಿಂದ ಸಿಎಫ್​ಒ ಆಗಿರುವ ಇವರು (Colette Kress) ಸದ್ಯ ಹಂಗಾಮಿ ಸಿಇಒ ಆಗಿದ್ದಾರೆ. ಇದೂ ಒಳಗೊಂಡಂತೆ ಹಲವು ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವಿ ಇವರು.
  • ಇಯಾನ್ ಬಕ್: ಎನ್​ವಿಡಿಯಾದ ಹೈಪರ್​ಸ್ಕೇಲ್ ಮತ್ತು ಹೈಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ವಿಭಾಗದಲ್ಲಿ ವೈಸ್ ಪ್ರೆಸಿಡೆಂಟ್ ಆಗಿರುವ ಇಯಾನ್ ಬಕ್ ಅವರು ಟೆಕ್ ಜೀನಿಯಸ್ ಎನ್ನುವವರಿದ್ದಾರೆ. ವಿಡಿಯೋ ಗೇಮ್ ಚಿಪ್​ಗಳನ್ನು ಮಾಡುತ್ತಿದ್ದ ಕಂಪನಿಯು ಎಐ ಹಾರ್ಡ್​ವೇರ್​ಗೆ ಕಡೆಗೆ ಗಮನ ಹೊರಳಿಸಲು ಇವರ ಪಾತ್ರ ದೊಡ್ಡದಂತೆ.
  • ಟಿಮ್ ಕುಕ್: ಆ್ಯಪಲ್ ಕಂಪನಿಯ ಮಾಜಿ ಸಿಇಒ ಟಿಮ್ ಕುಕ್ ಅವರ ಹೆಸರು ಎನ್​ವಿಡಿಯಾಗೆ ಕೇಳಿಬರುತ್ತಿದೆ. ಸ್ಟೀವ್ ಜಾಬ್ಸ್ ಸಾವಿನ ಬಳಿಕ ಆ್ಯಪಲ್ ಕಂಪನಿಯ ಮಾರುಕಟ್ಟೆಯನ್ನು ಹೆಚ್ಚಿಸಿದ ಶ್ರೇಯಸ್ಸು ಇವರದ್ದು.
  • ರೆನೆ ಹಾಸ್: ಇವರು 2013ರಲ್ಲಿ ಆರ್ಮ್ ಎನ್ನುವ ಬ್ರಿಟನ್ ದೇಶದ ಚಿಪ್ ತಯಾರಕ ಕಂಪನಿ ಸಿಇಒ ಆಗಿದ್ದಾರೆ. ಅದಕ್ಕೆ ಮುನ್ನ ಇವರು ಎನ್​ವಿಡಿಯದಲ್ಲಿ ಕೆಲಸ ಮಾಡಿದ ಅನುಭವಿ.
  • ಪ್ಯಾಟ್ ಗೆಲ್​ಸಿಂಗರ್: ಎನ್​ವಿಡಿಯಾದ ಪ್ರತಿಸ್ಪರ್ಧಿ ಕಂಪನಿಯಾದ ಇಂಟೆಲ್​ನಲ್ಲಿ ಸಿಇಒ ಆಗಿದ್ದವರು ಪ್ಯಾಟ್ ಗೆಲ್ಸಿಂಗರ್. ಚಿಪ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಎರಡರಲ್ಲೂ ಪಳಗಿದವರು ಅವರು.
  • ಲೀಸಾ ಸು: ಎನ್​ವಿಡಿಯಾದ ಮತ್ತೊಂದು ಪ್ರತಿಸ್ಪರ್ಧಿ ಕಂಪನಿಯಾದ ಎಎಂಡಿ ಮುಖ್ಯಸ್ಥೆ ಲೀಸಾ ಸು. ಎನ್​ವಿಡಿಯಾ ಸಂಸ್ಥಾಪಕ ಜೆನ್ಸೆನ್ ಹುವಾಂಗ್ ಅವರಂತೆ ಇವರೂ ಕೂಡ ತೈವಾನ್ ಮೂಲದವರು. ಇಬ್ಬರೂ ದೂರದ ಸಂಬಂಧಿ. ಆದರೆ, ಹುವಾಂಗ್​ಗಿಂತ ಭಿನ್ನ ವ್ಯಕ್ತಿತ್ವದವರು.

ಇದನ್ನೂ ಓದಿ: ಪ್ರೇಮ ಪ್ರಕರಣದ ವಿವಾದ: ಜೆನ್ಸನ್ ಹುವಾಂಗ್ ಮಾತ್ರವಲ್ಲ,ಈ 4 ಕಂಪನಿಗಳ ಸಿಇಒಗಳೂ ಹುದ್ದೆ ಕಳೆದುಕೊಂಡಿದ್ದರು

ಹಾಗೆಯೇ, ಮಾರ್ವೆಲ್ ಟೆಕ್ನಾಲಜಿಯ ಮ್ಯಾಟ್ ಮರ್ಫಿ, ಆ್ಯಪಲ್​ನ ಚೀಫ್ ಹಾರ್ಡ್​ವೇರ್ ಆಫೀಸರ್ ಜಾನಿ ಸ್ರೂಜಿ ಅವರ ಹೆಸರೂ ಕೇಳಿಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?