ಕ್ಯಾಪ್ಟನ್ ಆದರೂ ಜಗದೀಶ್ಗೆ ಕಡಿಮೆ ಆಗಿಲ್ಲ ಭಯ; ಎಲಿಮಿನೇಷನ್ ಆತಂಕ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಹಲವು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಕ್ಯಾಪ್ಟನ್ ಜಗದೀಶ್ ಹಾಗೂ ಸೋನಿಕಾ ಹೊರಹೋಗುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ಜಗದೀಶ್ ಎಲಿಮಿನೇಟ್ ಆದರೆ, ಅವರು ಕ್ಯಾಪ್ಟನ್ ಆಗಿಯೇ ಮನೆಯಿಂದ ಹೊರಬಿದ್ದಂತೆ ಆಗಲಿದೆ. ವಾರದ ಅಂತಿಮ ಘಟ್ಟದಲ್ಲಿ ಕಿಚ್ಚ ಸುದೀಪ್ ಈ ಕುರಿತು ಅಂತಿಮ ತೀರ್ಪು ನೀಡಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿದೆ. ಈ ವಾರ ಹಲವರು ನಾಮಿನೇಟ್ ಆಗಿದ್ದು ಮನೆಯಿಂದ ಹೊರ ಹೋಗೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಕ್ಯಾಪ್ಟನ್ ಆಗಿರುವ ಜಗದೀಶ್ ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಲುಕಿಕೊಂಡಿದ್ದಾರೆ.
ಈ ವಾರ ಆಸಿಯಾ, ಧನುಷ್, ಗಾನವಿ, ಜಗದೀಶ್, ಕಿರಣ್, ಪ್ರಶಾಂತ್, ಸೋನಿಕಾ ಹಾಗೂ ತಾಂಡವ್ ನಾಮಿನೇಟ್ ಆಗಿದ್ದಾರೆ. ಈ ವಾರ ಜಗದೀಶ್ ಅಥವಾ ಸೋನಿಕಾ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ವಾರದ ಅಂತಿಮ ಘಟ್ಟದಲ್ಲಿ ಕಿಚ್ಚ ಸುದೀಪ್ ಅವರ ಸಮ್ಮಮುಖದಲ್ಲಿ ನಡೆಯುವ ಸಂಚಿಕೆಯಲ್ಲಿ ಯಾರ ನಿರ್ಗಮನವಾಗಲಿದೆ ಎಂಬುದು ಅಧಿಕೃತವಾಗಿ ತಿಳಿಯಲಿದೆ. ಒಂದೊಮ್ಮೆ ಜಗದೀಶ್ ಹೋದರೆ ಕ್ಯಾಪ್ಟನ್ ಆಗಿಯೇ ಅವರು ಮನೆಯಿಂದ ಹೊರ ಹೋದಂತೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

