AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡಲ್ಲ: ಟ್ರಂಪ್​ಗೆ ಉತ್ತರಿಸಿದ ತಾಲಿಬಾನ್; ಅಮೆರಿಕಕ್ಕೆ ಯಾಕೆ ಮುಖ್ಯ ಬಗರಮ್ ವಾಯುನೆಲೆ?

Taliban rejects US threat to retake Bagram Airbase: ಅಫ್ಘಾನಿಸ್ತಾನದ ಸುಸಜ್ಜಿತ ಬಗರಮ್ ಏರ್​ಬೇಸ್ ಅನ್ನು ತಾನೇ ಕಟ್ಟಿದ್ದು. ತನಗೆ ಬಿಟ್ಟುಕೊಡಬೇಕು ಎಂದು ಅಮೆರಿಕ ಕೇಳಿದೆ. ಆದರೆ, ಡೊನಾಲ್ಡ್ ಟ್ರಂಪ್ ಅವರ ಈ ಬೆದರಿಕೆಯನ್ನು ತಾಲಿಬಾನ್ ತಿರಸ್ಕರಿಸಿದೆ. ತಾನು ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡಲ್ಲ. ಅಮೆರಿಕವು ವಾಸ್ತವ ಅರಿತುಕೊಳ್ಳಲಿ ಎಂದು ತಾಲಿಬಾನ್ ಹೇಳಿದೆ.

ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡಲ್ಲ: ಟ್ರಂಪ್​ಗೆ ಉತ್ತರಿಸಿದ ತಾಲಿಬಾನ್; ಅಮೆರಿಕಕ್ಕೆ ಯಾಕೆ ಮುಖ್ಯ ಬಗರಮ್ ವಾಯುನೆಲೆ?
ಬಗರಮ್ ವಾಯುನೆಲೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2025 | 11:17 PM

Share

ನವದೆಹಲಿ, ಸೆಪ್ಟೆಂಬರ್ 21: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಸಮೀಪದಲ್ಲೇ ಇರುವ ಬಗರಮ್ ವಾಯು ನೆಲೆಯನ್ನು ತಮ್ಮ ವಶಕ್ಕೆ ಮತ್ತೆ ಒಪ್ಪಿಸಬೇಕು ಎಂದು ಡೊನಾಲ್ಡ್ ಟ್ರಂಪ್ (Donald Trump) ಮಾಡಿದ ಒತ್ತಾಯವನ್ನು ತಾಲಿಬಾನ್ ತಿರಸ್ಕರಿಸಿದೆ. ವಾಯುನೆಲೆಯನ್ನು ಅಮೆರಿಕಕ್ಕೆ ಒಪ್ಪಿಸುವುದು ಇರಲಿ, ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡಲ್ಲ ಎಂದು ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದೆ.

‘ದೋಹಾ ಒಪ್ಪಂದದ ಅಡಿಯಲ್ಲಿ ಅಮೆರಿಕವು ಅಫ್ಘಾನಿಸ್ತಾನದ ಸಾರ್ವಭೌಮತ್ವಕ್ಕಾಗಲೀ ರಾಜಕೀಯ ಸ್ವಾತಂತ್ರ್ಯಕ್ಕಾಗಲೀ ಧಕ್ಕೆಯಾಗುವ ರೀತಿಯಲ್ಲಿ ಬಲ ಪ್ರಯೋಗ ಮಾಡುವುದಿಲ್ಲ. ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅಮೆರಿಕ ವಾಗ್ದಾನ ಕೊಟ್ಟಿದೆ. ಕೊಟ್ಟ ಮಾತಿಗೆ ಅದು ಬದ್ಧವಾಗಿರಬೇಕು. ಹಿಂದೆ ವಿಫಲವಾದ ಪ್ರಯತ್ನಗಳನ್ನೇ ಮತ್ತೆ ಮತ್ತೆ ಮಾಡುವ ಬದಲು ವಾಸ್ತವಕ್ಕೆ ಹತ್ತಿರ ಇರುವ ನೀತಿಯನ್ನು ಅನುಸರಿಸಬೇಕು’ ಎಂದು ಅಫ್ಘಾನಿಸ್ತಾನ ಸರ್ಕಾರವು ಅಧಿಕೃತ ಹೇಳಿಕೆಯಲ್ಲಿ ಅಮೆರಿಕಕ್ಕೆ ತಿಳಿಹೇಳಿದೆ.

ಬಗರಮ್ ಏರ್ ಬೇಸ್ ಬಿಟ್ಟು ಕೊಡದಿದ್ದರೆ ಭಾರೀ ಬೆಲೆ ತೆರಬೇಕಾದೀತು: ಟ್ರಂಪ್

ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಸೇನೆಗಳು ಅಫ್ಗಾನಿಸ್ತಾನದ ಬಗರಮ್ ವಾಯುನೆಲೆಯನ್ನು ತ್ಯಜಿಸಿ ತಮ್ಮ ದೇಶಕ್ಕೆ ವಾಪಸ್ಸಾಗಿದ್ದರು. ಅಮೆರಿಕ ಬೆಂಬಲಿತ ಸರ್ಕಾರ ಪತನಗೊಂಡು ತಾಲಿಬಾನ್ ಆಡಳಿತ ಬಂದ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ನಿರ್ಗಮಿಸಿತ್ತು.

ಇದನ್ನೂ ಓದಿ: ಭಾರತದ ಜೊತೆ ಯುದ್ಧವಾದರೆ ಸೌದಿ ಅರೇಬಿಯಾ ಪಾಕಿಸ್ತಾನವನ್ನು ರಕ್ಷಿಸುತ್ತದೆ; ಪಾಕ್ ರಕ್ಷಣಾ ಸಚಿವ ಹೇಳಿಕೆ!

ಆಗ ಟ್ರಂಪ್ ಅವರೇ ಅಮೆರಿಕ ಅಧ್ಯಕ್ಷರಾಗಿದ್ದರು. ಈಗ ಎರಡನೇ ಬಾರಿ ಅಧ್ಯಕ್ಷರಾಗಿರುವ ಟ್ರಂಪ್ ತಾವು ಹಿಂದೆ ಸರಿದಿದ್ದ ಬಗರಮ್ ಅನ್ನು ಮತ್ತೆ ಬಿಟ್ಟುಕೊಡುವಂತೆ ತಾಕೀತು ಮಾಡುತ್ತಿದ್ದಾರೆ.

ಬಗರಮ್ ಏರ್​ಬೇಸ್ ಅನ್ನು ನಾವೇ ನಿರ್ಮಿಸಿದ್ದೇವೆ. ನಮಗೆ ಅದನ್ನು ಬಿಟ್ಟುಕೊಡದಿದ್ದರೆ ಕೆಟ್ಟ ಘಟನೆಗಳು ಜರುಗಲಿವೆ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಗರಮ್ ವಾಯುನೆಲೆ ಯಾಕೆ ಮುಖ್ಯ?

ಅಫ್ಗಾನಿಸ್ತಾನವು ಸೆಂಟ್ರಲ್ ಏಷ್ಯಾ ಸಮೀಪ ಇರುವ ಜಾಗ. ಇರಾನ್, ರಷ್ಯಾ, ಚೀನಾ, ಪಾಕಿಸ್ತಾನ ದೇಶಗಳಿಗೆ ಹೊಂದಿಕೊಂಡಂತೆ ಇದು ಇದೆ. ಈ ವಾಯುನೆಲೆಯು ಚೀನಾದ ಸೂಕ್ಷ್ಮ ಪರಮಾಣ ಘಟಕಗಳಿರುವ ಶಿನ್​ಜಿಯಾಂಗ್ ಪ್ರಾಂತ್ಯಕ್ಕೆ ಸಮೀಪ ಇದೆ.

ಇದನ್ನೂ ಓದಿ: ಈ ವಿದೇಶೀ ಕಂಪನಿಗಳಿಗೆ ಭಾರತ ಕೊಡೋ ದುಡ್ಡು ಅದರ ಡಿಫೆನ್ಸ್ ಬಜೆಟ್​ಗೆ ಸಮ?

ಸೆಂಟ್ರಲ್ ಏಷ್ಯಾದಲ್ಲಿ ಅಮೆರಿಕದ ಹಿಡಿತ ಬಲಗೊಳ್ಳಲು ಬಗರಮ್ ಏರ್​ಬೇಸ್ ಬಹಳ ಮುಖ್ಯ ಪಾತ್ರ ವಹಿಸಬಲ್ಲುದು. ಇಲ್ಲಿಂದ ಅದು ಬಹಳ ಪ್ರಬಲವಾದ ಯೂರೇಷಿಯಾ ಪ್ರದೇಶವನ್ನು ನಿಯಂತ್ರಿಸಲು ಸಾಧ್ಯ. ರಷ್ಯಾ, ಚೀನಾ, ಭಾರತದಂತಹ ಶಕ್ತಿಗಳನ್ನು ತನ್ನ ತಹಬದಿಯಲ್ಲಿ ಇಟ್ಟುಕೊಳ್ಳಲು ಅಮೆರಿಕಕ್ಕೆ ತುಸು ಸುಲಭ ಮಾಡಿಕೊಡಬಹುದು.

ಬಗರಮ್ ಏರ್​ಬೇಸ್ ಅನ್ನು ಮೊದಲು ನಿರ್ಮಿಸಿದ್ದು ರಷ್ಯಾ ಪೂರ್ವದ ಸೋವಿಯತ್ ಒಕ್ಕೂಟ. ಆದರೆ, ಅಮೆರಿಕದವು ಇದರ ಅಭಿವೃದ್ಧಿ ಮಾಡಿದ್ದಾರೆ. ಸಕಲ ಮೂಲಸೌಕರ್ಯಗಳನ್ನು ಇದು ಒಳಗೊಂಡಿದೆ. ಇದು ತನ್ನ ಅಧೀನದಲ್ಲಿದ್ದರೆ ಸುತ್ತಲಿನ ರಾಷ್ಟ್ರಗಳ ಮೇಲೆ ಕಣ್ಣಿಡಲು, ಬೆದರಿಸಲು ಸುಲಭವಾಗುತ್ತದೆ ಎಂಬುದು ಅಮೆರಿಕದ ಎಣಿಕೆ. ಅದಕ್ಕಾಗೇ ಅದು ಈ ಏರ್​ಬೇಸ್ ಅನ್ನು ವಾಪಸ್ ಕೇಳುತ್ತಿರುವುದು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಾಲುಮರದ ತಿಮ್ಮಕ್ಕ ಕಷ್ಟಕಾಲದಲ್ಲಿದ್ದಾಗ ಜೊತೆಗೆ ನಿಂತಿದ್ದ ಟಿವಿ9
ಸಾಲುಮರದ ತಿಮ್ಮಕ್ಕ ಕಷ್ಟಕಾಲದಲ್ಲಿದ್ದಾಗ ಜೊತೆಗೆ ನಿಂತಿದ್ದ ಟಿವಿ9
SENA ದೇಶಗಳ ವಿರುದ್ಧ ಪಾರುಪತ್ಯ ಮುಂದುವರೆಸಿದ ಬುಮ್ರಾ
SENA ದೇಶಗಳ ವಿರುದ್ಧ ಪಾರುಪತ್ಯ ಮುಂದುವರೆಸಿದ ಬುಮ್ರಾ
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?