Viral Video: ಪ್ರತಿನಿತ್ಯ ಆತನ ಬರುವಿಕೆಗಾಗಿ ಕಾಯುವ ಶ್ವಾನ: ಇದು ಲೋಕೋ ಪೈಲಟ್ ಮತ್ತು ಬೀದಿನಾಯಿಯ ಸುಂದರ ಸ್ನೇಹ

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಎಂಬ ಮಾತಿದೆ.  ಮನುಷ್ಯರಿಗೆ ನಾಯಿಗಿಂತ ಹೆಚ್ಚು ಆಪ್ತರು ಬೇರಾರೂ ಇಲ್ಲ.  ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲೋಕೋ ಪೈಲಟ್ ಮತ್ತು ಬೀದಿ ನಾಯಿಯ ಸುಂದರ ಸ್ನೇಹವನ್ನು ಕಂಡು ನೋಡುಗರು ಭಾವುಕರಾಗಿದ್ದಾರೆ. 

Viral Video: ಪ್ರತಿನಿತ್ಯ ಆತನ ಬರುವಿಕೆಗಾಗಿ ಕಾಯುವ ಶ್ವಾನ: ಇದು ಲೋಕೋ ಪೈಲಟ್ ಮತ್ತು ಬೀದಿನಾಯಿಯ ಸುಂದರ ಸ್ನೇಹ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 09, 2024 | 12:28 PM

ಈ ಆಧುನಿಕ ಯುಗದಲ್ಲಿ ಮನುಷ್ಯತ್ವಕ್ಕೆ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಆದರೆ ಮನುಷ್ಯನಿಗೆ ಇಲ್ಲದ ಮಾನವೀಯತೆ, ಸ್ನೇಹ ಮನೋಭಾವವನ್ನು ಪ್ರಾಣಿಗಳಲ್ಲಿ ಕಾಣಬಹುದು. ಅದರಲ್ಲೂ ಶ್ವಾನಗಳಿಗೆ ತುಸು ಹೆಚ್ಚೇ ನಿಯತ್ತು ಇದೆ. ಹೌದು ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ಅದರ ಕೊನೆಯುಸಿರು ಇರುವವವರೆಗೂ ಅನ್ನ ಹಾಕಿದವರಿಗೆ ನಿಯತ್ತಿನಿಂದ ಇರುತ್ತದೆ. ಜೊತೆಗೆ ಅನ್ನ ಹಾಕಿದವರೊಂದಿಗೆ ಸ್ನೇಹಪೂರ್ವಕವಾಗಿಗೂ ಇರುತ್ತವೆ. ಅಂತಹದ್ದೇ ಸುಂದರ ಸ್ನೇಹ ಬಾಂಧವ್ಯದ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಲೋಕೋ ಪೈಲಟ್ ಮತ್ತು ಬೀದಿ ನಾಯಿಯ ಸುಂದರ ಸ್ನೇಹವನ್ನು ಕಂಡು ನೋಡುಗರು ಭಾವುಕರಾಗಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು @1hakankapucu ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರೈಲು ಚಾಲಕ ನೀಡುವ ಆಹಾರಕ್ಕಾಗಿ ಪ್ರತಿನಿತ್ಯ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿರುವ ಶ್ವಾನ. ಸ್ನೇಹಿತನ ರೈಲು ಬರುವಾಗ ಶ್ವಾನದ ಸಂತೋಷವನ್ನು ನೋಡುವುದೇ ನಮಗೊಂದು ಭಾಗ್ಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ರೈಲ್ವೆ ನಿಲ್ದಾಣದಲ್ಲಿ ಬೀದಿ ನಾಯಿಯೊಂದು ತನಗೆ ಪ್ರತಿನಿತ್ಯ ಊಟ ಹಾಕುವಂತಹ  ಲೋಕೋ ಪೈಲಟ್ ಗಾಗಿ  ಕಾದು ಕುಳಿತಿರುವ ದೃಶ್ಯವನ್ನು ಕಾಣಬಹುದು.  ರೈಲು ಬರುತ್ತಿದ್ದಂತೆಯೇ ಅರೇ ನನ್ನ ಸ್ನೇಹಿತ ನನಗಾಗಿ ಊಟವನ್ನು ತಂದ ಎಂದು ಶ್ವಾನವು ಖುಷಿಯಿಂದ ರೈಲಿನ ಜೊತೆ ಜೊತೆಗೆ ಓಡಿಕೊಂಡು ಹೋಗುತ್ತದೆ. ನಂತರ ರೈಲು ನಿಲ್ಲಿಸಿ ಆ ಲೋಕೋ ಪೈಲಟ್  ಶ್ವಾನಕ್ಕೆ ತಾನು ತಂದಿರುವ  ಊಟವನ್ನು ಹಾಕ್ತಾನೆ. ಆ ಸಂದರ್ಭದಲ್ಲಿ ಶ್ವಾನ ತನ್ನ ಮನುಷ್ಯ ಸ್ನೇಹಿತನನ್ನು ಕಂಡು ಖುಷಿಯಿಂದ ಕುಣಿದಾಡಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಗುಡಿಸುವ ಶೈಲಿ ನೋಡಿ ಹೌಸ್​​​​ ಕೀಪರ್ ಪ್ರೀತಿಗೆ ಬಿದ್ದು ಮದುವೆಯಾದ ಲೇಡಿ ಡಾಕ್ಟರ್ 

ಮೇ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಲೋಕೋ ಪೈಲಟ್ ಮತ್ತು  ಬೀದಿ ನಾಯಿಯ ನಿಸ್ವಾರ್ಥ ಸ್ನೇಹವನ್ನು ಕಂಡು ಭಾವುಕರಾಗಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್