Guinness World Records: 1ಗಂಟೆಯಲ್ಲಿ 1,123 ಮರಗಳನ್ನು ತಬ್ಬಿ ವಿಶ್ವ ದಾಖಲೆ ಬರೆದ ವ್ಯಕ್ತಿ
ಪ್ರತಿ ಮೂರು ಸೆಕೆಂಡಿಗೆ ಒಂದು ಮರವನ್ನು ಅಪ್ಪಿಕೊಳ್ಳುವ ಮೂಲಕ ಒಂದು ಘಂಟೆಯಲ್ಲಿ 1,123 ಮರಗಳನ್ನು ತಬ್ಬಿ ವಿಶ್ವ ದಾಖಲೆ ಮಾಡಿದ್ದಾರೆ. ಇದಲ್ಲದೇ ಈ ದಾಖಲೆ ಮಾಡುವಂತಹ ಸಂದರ್ಭದಲ್ಲಿ ಅಬುಬಕರ್ ರಂಜಾನ್ ಉಪವಾಸ ಮಾಡುತ್ತಿದ್ದು, ಹೀಗಾಗಿ ಒಂದು ಹನಿ ನೀರನ್ನು ಕುಡಿಯದೇ ದಾಖಲೆ ಬರೆದಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಆಫ್ರಿಕಾದ ಘಾನಾದ ವಿದ್ಯಾರ್ಥಿ ಅಬುಬಕರ್ ತಾಹಿರು(29) 1ಗಂಟೆಯಲ್ಲಿ 1,123 ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ (Guinness World Records) ಯನ್ನು ಬರೆದಿದ್ದಾನೆ. ಅಮೆರಿಕಾದ ಅಲಬಾಮಾದಲ್ಲಿರುವ ಟುಸ್ಕೆಗೀ ರಾಷ್ಟ್ರೀಯ ಅರಣ್ಯದಲ್ಲಿ ಒಂದು ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಳ್ಳುವ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದ್ದಾನೆ. ಆತ ಮರಗಳನ್ನು ಅಪ್ಪಿಕೊಳ್ಳುವ ವಿಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
@guinnessworldrecords ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇ 05ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಮೂರು ದಿನಗಳಲ್ಲಿ 9ಲಕ್ಷದ 98ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಮರವನ್ನು ತಬ್ಬಿಕೊಳ್ಳುವ ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ 200ಕ್ಕೆ 212 ಅಂಕ, ಇದು ಹೇಗೆ ಸಾಧ್ಯ?
ಪ್ರತಿ ಮೂರು ಸೆಕೆಂಡಿಗೆ ಒಂದು ಮರವನ್ನು ಅಪ್ಪಿಕೊಳ್ಳುವ ಮೂಲಕ ಒಂದು ಘಂಟೆಯಲ್ಲಿ 1,123 ಮರಗಳನ್ನು ತಬ್ಬಿ ವಿಶ್ವ ದಾಖಲೆ ಮಾಡಿದ್ದಾರೆ. ಇದಲ್ಲದೇ ಈ ದಾಖಲೆ ಮಾಡುವಂತಹ ಸಂದರ್ಭದಲ್ಲಿ ಅಬುಬಕರ್ ರಂಜಾನ್ ಉಪವಾಸ ಮಾಡುತ್ತಿದ್ದು, ಹೀಗಾಗಿ ಒಂದು ಹನಿ ನೀರನ್ನು ಕುಡಿಯದೇ ದಾಖಲೆ ಬರೆದಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ