AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಆಸ್ಪತ್ರೆಯಲ್ಲಿ ಗುಡಿಸುವ ಶೈಲಿ ನೋಡಿ ಹೌಸ್​​​​ ಕೀಪರ್ ಪ್ರೀತಿಗೆ ಬಿದ್ದು ಮದುವೆಯಾದ ಲೇಡಿ ಡಾಕ್ಟರ್ 

ಜನ ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಈ ಮಾತು ನಿಜ ಎಂಬುದನ್ನು ಇಲ್ಲೊಂದು ಜೋಡಿ ತೋರಿಸಿಕೊಟ್ಟಿದ್ದು, ಪಾಕಿಸ್ತಾನದ ವೈದ್ಯೆಯೊಬ್ಬರು ಆಸ್ಪತ್ರೆಯ ಸ್ಪಚ್ಛತಾ ಸಿಬ್ಬಂದಿಯ ಸ್ವಚ್ಛತಾ ಕಾರ್ಯ, ಆತನ ಸರಳತೆಯನ್ನು  ಕಂಡು ಆತನ ಪ್ರೀತಿಯಲ್ಲಿ ಬಿದ್ದು, ಕೊನೆಗೆ ಆತನನ್ನೇ ಮದುವೆಯಾಗಿದ್ದಾರೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗಿದೆ. 

Viral Post: ಆಸ್ಪತ್ರೆಯಲ್ಲಿ ಗುಡಿಸುವ ಶೈಲಿ ನೋಡಿ ಹೌಸ್​​​​ ಕೀಪರ್ ಪ್ರೀತಿಗೆ ಬಿದ್ದು ಮದುವೆಯಾದ ಲೇಡಿ ಡಾಕ್ಟರ್ 
ಮಾಲಾಶ್ರೀ ಅಂಚನ್​
| Edited By: |

Updated on:May 08, 2024 | 4:26 PM

Share

ಪ್ರೇಮ ಕುರುಡು, ಪ್ರೀತಿ ಮಾಡಲು ವಯಸ್ಸು, ಸಾಮಾಜಿಕ ಸ್ಥಾನಮಾನ, ಜಾತಿ ಮುಖ್ಯವಲ್ಲ ಬದಲಿಗೆ ಮನಸ್ಸು ಮುಖ್ಯ ಎಂದು ಹೇಳುವ ಮಾತಿದೆ. ಹೀಗೆ ವಯಸ್ಸಿನ ಅಂತರ, ಜಾತಿ, ಸ್ಥಾನಮಾನವನ್ನು ಲೆಕ್ಕಿಸದೆ ಪ್ರೀತಿಸುವ ಜೋಡಿಹಕ್ಕಿಗಳನ್ನು ನೋಡಿದ್ರೇ ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಆಸ್ಪತ್ರೆಯ  ಸ್ವಚ್ಛತಾ ಸಿಬ್ಬಂದಿಯ ಸ್ವಚ್ಛತಾ ಕಾರ್ಯವನ್ನು ಕಂಡು ಆತನ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನದ ಲೇಡಿ ಡಾಕ್ಟರ್ ಆತನನ್ನೇ ಮದುವೆಯಾಗಿದ್ದಾರೆ. ಈ ಘಟನೆ 2022 ರಲ್ಲಿ ನಡೆದಿದ್ದು, ಈ ಕುರಿತ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ.

ಪಾಕಿಸ್ತಾನದ ಎಂ.ಬಿ.ಬಿ.ಎಸ್ ವೈದ್ಯೆಯಾದ ಕಿಶ್ವರ್ ಸಾಹಿಬಾ ಅವರು ತಾವು ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಶಹಜಾದ್‌ನನ್ನು  ಪ್ರೀತಿಸಿ ಮದುವೆಯಾಗಿದ್ದಾರೆ. ಶಹಜಾದ್‌ಗಿದ್ದ ಕೆಲಸದ ಮೇಲಿನ ಶ್ರದ್ಧೆ, ಆತನ ಸರಳತೆಗೆ ಮಾರುಹೋದ ಕಿಶ್ವರ್‌, ಆತನನ್ನು ಪ್ರೀತಿಸಲು ಶುರು ಮಾಡುತ್ತಾರೆ. ಮತ್ತು ತನ್ನ ಪ್ರೀತಿಯನ್ನು ಶಹಜಾದ್‌ ಬಳಿ ಹೇಳಿಕೊಳ್ಳುತ್ತಾರೆ. ಇದರಿಂದ ಶಾಕ್‌ ಆದಂತಹ ಶಹಜಾದ್‌ ಮೊದಲಿಗೆ ಇದಕ್ಕೆ ಒಪ್ಪಿಗೆಯನ್ನು ನೀಡಿರಲಿಲ್ಲ. ಕೊನೆಗೆ ಕಿಶ್ವರ್‌ ಶಹಜಾದ್‌ನ  ಮನವೊಲಿಸಿ ಆತನನ್ನೇ ಮದುವೆಯಾಗಿದ್ದಾರೆ. ಇದೀಗ ಈ ದಂಪತಿ ತಮ್ಮದೇ ಆದ ಸ್ವಂತ ಕ್ಲಿನಿಕ್‌ ಒಂದನ್ನು ತೆರೆಯುವ ಯೋಜನೆಯಲ್ಲಿದ್ದಾರೆ.

ಇದನ್ನೂ ಓದಿ: ನೋ ಟೆನ್ಶನ್, ಫುಲ್​​​ ಹ್ಯಾಪಿ, ನದಿಯಲ್ಲಿ ಮರಿ ಆನೆಯ ಸಖತ್ ಎಂಜಾಯ್ಮೆಂಟ್

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು @ministry_of_facts.24 ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಡಾಕ್ಟರ್‌ ಆಗಿದ್ರೂ ಕೂಡಾ ಸಾಮಾನ್ಯ ಸ್ವಚ್ಛತಾ ಸಿಬ್ಬಂದಿಯನ್ನು ವಿವಾಹವಾದ ಕಿಶ್ವರ್‌ ಸಾಹಿಬಾ ಅವರ ಸರಳತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:24 pm, Wed, 8 May 24