AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋಟೋ ಅಪ್​ಲೋಡ್ ಮಾಡಿ, ನಿಮ್ಮ ಚಿತ್ರವಿರುವ ಕೇಕ್ ಪಡೆಯಿರಿ; ಇದು ಜೊಮಾಟೋದ ಫೋಟೋ ಕೇಕ್ ಫೀಚರ್

Zomato and Photo Cake feature: ಅಮ್ಮನ ದಿನ ಬರುತ್ತಿದೆ. ತಾಯಿ ಜೊತೆ ನೀವಿರುವ ಅಥವಾ ತಾಯಿಯ ಚಿತ್ರ ಇರುವ ಕೇಕ್ ತರಿಸಿ ಅಮ್ಮ ಕೈಯಿಂದ ಕಟ್ ಮಾಡಿಸುವ ಐಡಿಯಾ ಹೇಗಿರುತ್ತದೆ? ಜೊಮಾಟೋ ಇಂಥದ್ದೊಂದು ಅವಕಾಶ ಕೊಟ್ಟಿದೆ. ಅದರ ಫೋಟೋ ಕೇಕ್ ಫೀಚರ್​ನಲ್ಲಿ ನೀವು ಯಾವುದೇ ಫೋಟೋ ಹಾಕಿದರೂ ಆ ಚಿತ್ರವಿರುವ ಕೇಕ್ ಅನ್ನು ನಿಮ್ಮ ಮನೆ ಬಾಗಿಲಿಗೆ ಕೆಲವೇ ನಿಮಿಷಗಳಲ್ಲಿ ಡೆಲವರಿ ಮಾಡುತ್ತದೆ ಜೊಮಾಟೊ.

ಫೋಟೋ ಅಪ್​ಲೋಡ್ ಮಾಡಿ, ನಿಮ್ಮ ಚಿತ್ರವಿರುವ ಕೇಕ್ ಪಡೆಯಿರಿ; ಇದು ಜೊಮಾಟೋದ ಫೋಟೋ ಕೇಕ್ ಫೀಚರ್
ಫೋಟೋ ಕೇಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 09, 2024 | 7:02 PM

ನಿಮ್ಮ ಬರ್ತ್ ಡೇ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಕೇಕ್ ಡಿಸೈನ್ ಮಾಡಿಸುವ ತಲೆ ನೋವು ಇಟ್ಟುಕೊಳ್ಳಬೇಡಿ. ನೀವು ಬಯಸಿದ ರೀತಿಯಲ್ಲಿ ಕೇಕ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಜೊಮಾಟೋ (Zomato) ಹೊಸದಾದ ಫೋಟೋ ಕೇಕ್ (Photo cake) ಎಂಬ ಹೊಸ ಫೀಚರ್ ತಂದಿದೆ. ಕೇಕ್ ಮೇಲೆ ಯಾರ ಅಥವಾ ಯಾವ ಫೋಟೋ ಇರಬೇಕೆಂದು ನೀವೇ ನಿರ್ಧರಿಸಬಹುದು. ಆ ಫೋಟೋ ಅಪ್​ಲೋಡ್ ಮಾಡಿದರೆ ಸಾಕು. ಆ ಚಿತ್ರ ಇರುವ ಕೇಕ್ ನೀವು ಬಯಸಿದ ಬೇಕರಿಯಿಂದಲೇ ನಿಮಗೆ ತಯಾರಾಗಿ ಬರುತ್ತದೆ. ಕೇಕ್ ಮೇಲೆ ಏನಾದರೂ ಬರೆಸಬೇಕೆಂದರೆ ಸಾಮಾನ್ಯವಾಗಿ ಮೊದಲೇ ಪ್ರೀ ಬುಕಿಂಗ್ ಮಾಡಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಜೊಮಾಟೋ ನಿಮ್ಮಿಚ್ಛೆ ರೀತಿಯ ವಿನ್ಯಾಸದ ಕೇಕ್ ಅನ್ನು ನಿಮಗೆ ತಲುಪಿಸುತ್ತಿದೆ.

ಜೊಮಾಟೊ ಈಗಾಗಲೇ ಈ ಫೀಚರ್ ಅನ್ನು ಅಳವಡಿಸಿದೆ. ಒಂದು ವೇಳೆ ನಿಮ್ಮ ಫೋನ್​ನಲ್ಲಿರುವ ಜೊಮಾಟೋದಲ್ಲಿ ಈ ಫೀಚರ್ ಸಿಗದೇ ಇರಬಹುದು. ಆ್ಯಪ್ ಅಪ್​ಡೇಟ್ ಮಾಡಬೇಕಾಗುತ್ತದೆ. ಫೋಟೋ ಕೇಕ್ ಸೇವೆ ಕೊಡುವ ಬೇಕರಿಗಳ ಪಟ್ಟಿಯಲ್ಲಿ ನಿಮಗೆ ಬೇಕಾದ ಶಾಪ್​ನಿಂದ ಇಂಥ ಕೇಕ್ ತರಿಸಬಹುದು. ಇತರೆಯಂತೆ ಡೆಲಿವರಿ ಅವಧಿ 30ರಿಂದ 40 ನಿಮಿಷ ಆಗಬಹುದು. ಆ್ಯಪ್​ನಲ್ಲೇ ನೀವು ಕೇಕ್ ಯಾವ ರೀತಿ ಕಾಣುತ್ತದೆ ಎಂದು ಪ್ರಿವ್ಯೂ ಕೂಡ ಮಾಡಬಹುದು.

ಇದನ್ನೂ ಓದಿ: ನಿಮ್ಮನ್ನು ಈ ರೀತಿ ನೋಡೋಕೆ ತುಂಬಾ ನೋವಾಗುತ್ತೇ, ದಯವಿಟ್ಟು RCBಗೆ ಬಂದ್ಬಿಡಿ ಕೆ.ಎಲ್‌ ರಾಹುಲ್​​ಗೆ ಅಭಿಮಾನಿಗಳ ಮನವಿ

ಜೊಮಾಟೋ ಆ್ಯಪ್​ನಲ್ಲಿ ಫೋಟೋ ಕೇಕ್ ತರಿಸುವ ಕ್ರಮ ಹೀಗೆ

  • ಜೊಮಾಟೋ ಆ್ಯಪ್​ನ ಸರ್ಚ್ ಬಾರ್​ನಲ್ಲಿ Photo Cake ಎಂದು ಹುಡುಕಿ
  • ಅಲ್ಲಿ ಈ ಸೇವೆ ನೀಡುವ ಬೇಕರಿ ಅಥವಾ ರೆಸ್ಟೋರೆಂಟ್​ಗಳ ಪಟ್ಟಿ ಕಾಣುತ್ತದೆ.
  • ನಿಮಗೆ ಬೇಕಾದ ಅಂಗಡಿಯನ್ನು ಆಯ್ದುಕೊಳ್ಳಿ
  • ಎಷ್ಟು ತೂಕದ್ದು ಮತ್ತು ಯಾವ ಫ್ಲೇವರ್​ನದ್ದು ಎಂಬುದನ್ನು ಆಯ್ದುಕೊಳ್ಳಿ.
  • ಕೇಕ್ ಮೇಲೆ ಯಾವ ಚಿತ್ರ ಇರಬಯಸುತ್ತೀರೋ ಆ ಫೋಟೋವನ್ನು ಅಪ್​ಲೋಡ್ ಮಾಡಿ.
  • ಫೋಟೋ ಕೇಕ್ ಹೇಗೆ ಕಾಣಬಹುದು ಎಂದು ಅಲ್ಲಿಯೇ ಪ್ರಿವ್ಯೂ ಮಾಡಿ.
  • ಬಳಿಕ ಆರ್ಡರ್ ಮಾಡಿ.

ಮದರ್ ಡೇಗೆಂದು ರೂಪಿಸಲಾಗಿರುವುದು ಈ ಫೋಟೋ ಕೇಕ್

ಮೇ 12ಕ್ಕೆ ವಿಶ್ವ ಅಮ್ಮನ ದಿನ ಇದೆ. ಅದಕ್ಕೆಂದು ಜೊಮಾಟೊ ಫೋಟೋ ಕೇಕ್ ಫೀಚರ್ ಹೊರತಂದಿದೆ ಎಂದು ಹೇಳಲಾಗುತ್ತಿದೆ. ಮದರ್ಸ್ ಡೇ ದಿನದಂದು ಜೊಮಾಟೋದಲ್ಲಿ ಕೇಕ್​ಗಳು ಭರ್ಜರಿ ಸೇಲ್ ಆಗುತ್ತವಂತೆ. ಕಳೆದ ವರ್ಷ ಅಮ್ಮನ ದಿನದಂದು ನಿಮಿಷಕ್ಕೆ 150 ಕೇಕ್ ಮಾರಾಟವಾಗಿದ್ದವಂತೆ. ಈ ಬಾರಿ ಮದರ್ಸ್ ಡೇಗೆ ಆಕರ್ಷಕ ಫೀಚರ್ ಸೇರಿಸಿರುವುದರಿಂದ ಇನ್ನಷ್ಟು ಕೇಕ್​ಗಳು ಸೇಲ್ ಆಗಬಹುದು. ವರದಿ ಪ್ರಕಾರ ಮೇ 12ರ ಬಳಿಕವೂ ಜೊಮಾಟೋದಲ್ಲಿ ಫೋಟೋ ಕೇಕ್ ಸೇವೆ ಮುಂದುವರಿಯಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ