Viral: 4 ವಾರವಾದರೂ ಬಿಯರ್​​​​ನ ಅಮಲು ಬಿಡಲಿಲ್ಲ, ‘ಲಾಂಗ್ ಹ್ಯಾಂಗೋವರ್’ ದಾಖಲೆ ಮಾಡಿದ ವ್ಯಕ್ತಿ!

ಸ್ಕಾಟ್ಲೆಂಡ್‌ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಕಂಠ ಪೂರ್ತಿ ಬಿಯರ್​ ಕುಡಿದಿದ್ದಾನೆ. ಆದರೆ ಆಶ್ಚರ್ಯವೆನೆಂದರೆ 4 ವಾರವಾದರೂ ಬಿಯರ್ ನ ಅಮಲು ಬಿಟ್ಟಿಲ್ಲ. ಕೊನೆಗೆ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈಮೂಲಕ 'ಲಾಂಗ್ ಹ್ಯಾಂಗೋವರ್' ಹೊಂದಿರುವ ವ್ಯಕ್ತಿ ಎಂಬ ದಾಖಲೆಯನ್ನು ಮಾಡಿದ್ದಾನೆ.

Viral: 4 ವಾರವಾದರೂ ಬಿಯರ್​​​​ನ ಅಮಲು ಬಿಡಲಿಲ್ಲ, 'ಲಾಂಗ್ ಹ್ಯಾಂಗೋವರ್' ದಾಖಲೆ ಮಾಡಿದ ವ್ಯಕ್ತಿ!
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Nov 23, 2023 | 11:00 AM

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮಿತಿಮೀರಿದ ಪ್ರಮಾಣದಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ಕ್ಯಾನ್ಸರ್, ಯಕೃತ್ತಿನ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೂ ಕೂಡ ಕುಡಿಯುವವರು ತಮ್ಮ ಕುಡಿಯುವ ಅಭ್ಯಾಸವನ್ನು ಮಾತ್ರ ಬಿಡುವುದಿಲ್ಲ. ಸಾಮಾನ್ಯವಾಗಿ ಆಲ್ಕೋಹಾಲ್ ಕುಡಿದ ನಂತರ ಅದರ ಅಮಲು ಮರುದಿನದ ವರೆಗೂ ಇರುತ್ತದೆ. ಹೆಚ್ಚೆಂದರೆ ಒಂದೆರಡು ದಿನಗಳ ವರೆಗೆ ಅದೇ ಅಮಲಿನಲ್ಲಿ ಇರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬಿಯರ್​​ ಕುಡಿದು, ಒಂದೆರಡು ದಿನವಲ್ಲ, ಬರೋಬ್ಬರಿ 4 ವಾರವಾದರೂ ಆತನಿಗೆ ಅದರ ಅಮಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಈ ವಿಚಿತ್ರ ಘಟನೆ ಸ್ಕಾಟ್ಲೆಂಡ್‌ನಲ್ಲಿ ನಡೆದಿದೆ.

‘ದಿ ಲ್ಯಾನ್ಸೆಟ್’ ಎಂಬ ನಿಯತಕಾಲಿಕೆಯ ಪ್ರಕಾರ ಈ 37 ವರ್ಷದ ವ್ಯಕ್ತಿಯನ್ನು ಆಲಸ್ಯ, ತಲೆನೋವು ಮತ್ತು ಕಣ್ಣು ಮಂಜಾಗುತ್ತಿದೆ ಎಂಬ ಸಮಸ್ಯೆಯಿಂದಾಗಿ ಮೊದಲಿಗೆ ಆಸ್ಪ್ರತೆಗೆ ದಾಖಲಿಸಲಾಗಿದೆ. ಆದರೆ ಆ ವ್ಯಕ್ತಿಗೆ ಇಂತಹ ಸಮಸ್ಯೆಗಳು ಏಕೆ ಬರುತ್ತಿವೆ ಎಂದು ಆರಂಭದಲ್ಲಿ ವೈದ್ಯರಿಗೂ ಅರ್ಥವಾಗಲಿಲ್ಲ. ಸಿಟಿ ಸ್ಕ್ಯಾನ್ ಮಾಡಿ, ಫಲಿತಾಂಶ ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ವ್ಯಕ್ತಿಯ ಮೆದುಳಿನ ಸುತ್ತ ಏನೋ ಸಮಸ್ಯೆ ಇದೆ ಎಂದು ವೈದ್ಯರಿಗೆ ತಿಳಿದುಬಂದಿದೆ.

ಇದನ್ನೂ ಓದಿ: ಕದಿಯಲು ಬಂದಿದ್ದ ಕಳ್ಳ ನಿದ್ರೆಗೆ ಜಾರಿದ, ಗೊರಕೆಯ ಸದ್ದಿಗೆ ಪೊಲೀಸರಿಗೆ ಮಾಹಿತಿ ನೀಡಿದ ಮನೆಯವರು

28 ಲೀಟರ್ ಬಿಯರ್ ಕುಡಿದಿದ್ದ ವ್ಯಕ್ತಿ:

ನಂತರ, ವೈದ್ಯರು ವ್ಯಕ್ತಿಯ ಜೀವನಶೈಲಿಯ ಬಗ್ಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಆತ ತಾನು ಒಂದು ತಿಂಗಳ ಹಿಂದೆ 60 ಪಿಂಟ್‌ಗಳು ಅಂದರೆ ಸುಮಾರು 28 ಲೀಟರ್‌ ಬಿಯರ್‌ ಕುಡಿದಿರುವುದಾಗಿ ಹೇಳಿಕೊಂಡಿದ್ದಾನೆ. ವೈದ್ಯರು ಆತನ ರಕ್ತವನ್ನು ಪರೀಕ್ಷಿಸಿದಾಗ ಆತನ ದೇಹದಲ್ಲಿ ಲೂಪಸ್ ಹೆಪ್ಪುರೋಧಕ ಅಂಶ ಹೆಚ್ಚಿರುವುದು ಕಂಡುಬಂದಿದೆ. ಈ ಮೂಲಕ ‘ಲಾಂಗ್ ಹ್ಯಾಂಗೊವರ್’ ಹೊಂದಿರುವ ವ್ಯಕ್ತಿ ಎಂಬ ದಾಖಲೆಯನ್ನು ಮಾಡಿದ್ದಾನೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?