AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಒಮ್ಮೆ ನೋಡಿ: ಇದು ಹಾವು ಅಲ್ಲ, ಸ್ಪೀಡ್ ಬ್ರೇಕರಾ, ಫುಲ್ ಕನ್ಫ್ಯೂಸ್ 

ಸಾಮಾಜಿಕ ಜಾಲತಾಣದಲ್ಲಿ ಸರ್ಪಗಳ ಬಗೆಗಿನ ವಿಡಿಯೋಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಈ ವೈರಲ್ ವೀಡಿಯೋಗಳ ಮೂಲಕವೇ ನಾವೆಲ್ಲರೂ ಚಿತ್ರವಿಚಿತ್ರ ಹಾವುಗಳನ್ನು ನೋಡಿರುತ್ತೇವೆ. ಕೆಲವು ಹಾವುಗಳ ಮೈ ಬಣ್ಣದ ಕಾರಣದಿಂದಾಗಿ ಅವುಗಳು ನಿಜ ಸರ್ಪವೇ ಅಥವಾ ಇನ್ನಾವುದೇ ವಸ್ತುವೇ ಎಂದು ಹಲವರು ಗೊಂದಲಕ್ಕಿಡಾಗುತ್ತಾರೆ.  ಅದೇ ರೀತಿ ಇದೀಗ  ವೈರಲ್ ಆಗಿರುವ ವೀಡಿಯೋದಲ್ಲಿ  ಹಳದಿ ಮತ್ತು ಕಪ್ಪು ಬಣ್ಣದ ಕಟ್ಟು ಹಾವನ್ನು ಕಂಡು ಇದೇನಿದು ನೋಡಲು  ರಸ್ತೆಗಳಲ್ಲಿರುವ  ಸ್ಪೀಡ್ ಬ್ರೇಕರ್ನಂತಿದೆ ಎಂದು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

ನೀವು ಒಮ್ಮೆ ನೋಡಿ: ಇದು ಹಾವು ಅಲ್ಲ, ಸ್ಪೀಡ್ ಬ್ರೇಕರಾ, ಫುಲ್ ಕನ್ಫ್ಯೂಸ್ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Nov 22, 2023 | 6:51 PM

Share

ಈ ಭೂಮಿಯಲ್ಲಿ ಹಲವಾರು ಬಗೆಯ ಹಾವುಗಳಿವೆ. ಅದರಲ್ಲಿ  ಕೆಲವೊಂದು ಹಾವುಗಳು ತುಂಬಾ ವಿಷಪೂರಿತವಾಗಿದ್ದರೆ,  ಇನ್ನೂ ಕೆಲವು ಹಾವುಗಳು ಅಷ್ಟೇನೂ ವಿಷಪೂರಿತವಾಗಿರುವುದಿಲ್ಲ. ಇನ್ನೊಂದು ತಮಾಷೆಯ ವಿಷಯ ಏನಪ್ಪಾ ಅಂದ್ರೆ, ಕೆಲವೊಂದು ಹಾವುಗಳು ಅವುಗಳ ಚಿತ್ರವಿಚಿತ್ರ ಬಣ್ಣಗಳ ಕಾರಣದಿಂದಾಗಿ ನೋಡಲು ಹಾವಿನಂತಿರದೆ, ಯಾವುದೋ ಒಂದು ವಸ್ತುವಿನ ತರಹ ಕಾಣಿಸುತ್ತವೆ.  ಅಂತಹ ಹಲವು ಹಾವುಗಳಿವೆ. ಇಂತಹ ಸರ್ಪಗಳ ಕುರಿತ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ.  ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು,  ಅರೇ ಇದೇನಿದು ನಿಜ ಸರ್ಪವೇ?  ನೋಡಲು  ಥೇಟ್ ಸ್ಪೀಡ್ ಬ್ರೇಕರ್ನಂತಿದೆ  ಎಂದು ಹಳದಿ ಮತ್ತು ಕಪ್ಪು ಬಣ್ಣದ ವಿಷಪೂರಿತ ಕಟ್ಟು ಹಾವನ್ನು ಕಂಡು  ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗಿದ್ದಾರೆ.

ಈ  ವೈರಲ್ ವೀಡಿಯೋವನ್ನು ಜಾರ್ಖಾಂಡ್ ಮೂಲದ ಪ್ರಾಣಿಪ್ರಿಯ ಸಂದೀಪ್ ಜೋಷಿ  (@sandeepjoshi.22) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಅಪರೂಪವಾಗಿ ಕಾಣಸಿಗುವ ಹಳದಿ ಮತ್ತು ಕಪ್ಪು ಬಣ್ಣದ ಕಟ್ಟು ಹಾವುಗಳೆರಡು ನದಿದಡದಲ್ಲಿ ಸರಸರನೇ ತೆವಳಿಕೊಂಡು ಹೋಗುವುದನ್ನು ಕಾಣಬಹುದು.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ಥೇಟ್  ರಸ್ತೆಗಳಲ್ಲಿರುವ ಸ್ಪೀಡ್ ಬ್ರೇಕರ್ನಂತೆಯೇ ಕಾಣುವ ಹಳದಿ ಮತ್ತು ಕಪ್ಪು ಬಣ್ಣದ ಅಪರೂಪದ  ಪಟ್ಟೆ ಹಾವುಗಳೆರಡು ನಾ ಮುಂದು ತಾ ಮುಂದು ಎಂದುಕೊಂಡು  ನದಿ ದಡಲ್ಲಿನ ನೀರಿನಲ್ಲಿ ಸರಸರನೆ  ತೇಳಿಕೊಂಡು ಹೋಗುತ್ತವೆ. ನಂತರ ಅದರಲ್ಲಿ ಒಂದು ಪಟ್ಟೆ ಹಾವು ಸಂದೀಪ್ ಅವರ ಮೈಮೇಲೆ ಹತ್ತಿಕೊಂಡು ಬರುವುದನ್ನು ಕಾಣಬಹುದು. ಆದರೂ ಈ ಹಾವಿಗೆ ಭಯಪಡದೆ ಧೈರ್ಯದಿಂದ ಸಂದೀಪ್ ಅವರು ಕ್ಯಾಮರಾಗೆ ಪೋಸ್ ನೀಡುತ್ತಾರೆ. ಈ ವಿಚಿತ್ರ ಹಾವನ್ನು ಕಂಡು  ಇಂತಹ ಬಣ್ಣಬಣ್ಣದ ಹಾವುಗಳಿರುತ್ತವೆಯೇ ಎಂದು ಹಲವರು ಆಶ್ಚರ್ಯಚಕಿತರಾಗಿದ್ದರೆ.

ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿಯ ಬಳಿಕ ಡ್ರೈವಿಂಗ್‌ ಲೈಸೆನ್ಸ್‌ ರಿನಿವಲ್​​​ ಮಾಡಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿದ ಮಹಿಳೆ

ಐದು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 9.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  433K ಲೈಕ್ಸ್ಗಳನ್ನು ಪಡೆದುಕೊಂಡಿವೆ.  ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼಈ ಹಾವು ರಸ್ತೆಗಳಲ್ಲಿರುವ ಸ್ಪೀಡ್ ಬ್ರೇಕರ್ನಂತಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಹಾವು  ರಸ್ತೆಗಳಲ್ಲಿ ಇರುವ ಜೀಬ್ರಾ ಕ್ರಾಸಿಂಗ್ ಚಿಹ್ನೆಯಂತಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಅತ್ಯಂತ ಅಪಾಯಕಾರಿ ಹಾವು, ಸಹೋದರ ನೀನು ಸಾವಿನೊಂದಿಗೆ ಆಟವಾಡುತ್ತಿದ್ದೀಯಾ ಜೋಪಾನʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ