30 ವರ್ಷವಾದ ಬಳಿಕ ಹೃದ್ರೋಗದಿಂದ ಪಾರಾಗಲು ಈ 3 ಟೆಸ್ಟ್​ ಮಾಡಿಸಲು ಮರೆಯಬೇಡಿ

ಹೃದ್ರೋಗವು ದೀರ್ಘಾವಧಿಯ ಮತ್ತು ಆರೋಗ್ಯಕರ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು 30ನೇ ವಯಸ್ಸು ದಾಟಿದ ಬಳಿಕ ಯಾವೆಲ್ಲ ವೈದ್ಯಕೀಯ ಟೆಸ್ಟ್​ಗಳನ್ನು ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

30 ವರ್ಷವಾದ ಬಳಿಕ ಹೃದ್ರೋಗದಿಂದ ಪಾರಾಗಲು ಈ 3 ಟೆಸ್ಟ್​ ಮಾಡಿಸಲು ಮರೆಯಬೇಡಿ
ಹೃದಯಾಘಾತImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 26, 2023 | 2:40 PM

ಇತ್ತೀಚೆಗೆ 30 ವರ್ಷದ ಆಸುಪಾಸಿನವರಿಗೆ ಹೃದಯಾಘಾತ ಹೆಚ್ಚಾಗುತ್ತಿದೆ. 30 ವರ್ಷವಾಗುವುದು ವ್ಯಕ್ತಿಯ ಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಈ ಅವಧಿಯು ಸಾಮಾನ್ಯವಾಗಿ ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಗಮನವನ್ನು ಸೂಚಿಸುತ್ತದೆ. ಆದರೆ, ನಮ್ಮ ಯೋಗಕ್ಷೇಮಕ್ಕೂ ಆದ್ಯತೆ ನೀಡಲು ಈ ಸಮಯ ಒಂದು ಪ್ರಮುಖ ಘಟ್ಟವಾಗಿದೆ. ವಿಶೇಷವಾಗಿ ಹೃದ್ರೋಗದಿಂದ ಪಾರಾಗಲು ನಾವು ಈ ಸಮಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

30ರಿಂದ 40 ವರ್ಷದವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹೃದ್ರೋಗವು ದೀರ್ಘಾವಧಿಯ ಮತ್ತು ಆರೋಗ್ಯಕರ ಜೀವನಕ್ಕೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು 30ನೇ ವಯಸ್ಸು ದಾಟಿದ ಬಳಿಕ ಯಾವೆಲ್ಲ ವೈದ್ಯಕೀಯ ಟೆಸ್ಟ್​ಗಳನ್ನು ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Heart Health: ನಿಮ್ಮ ಹೃದಯದ ಆರೋಗ್ಯಕ್ಕೆ ದಿನಕ್ಕೆ 50 ಮೆಟ್ಟಿಲು ಹತ್ತಿ

ಕೊಲೆಸ್ಟ್ರಾಲ್​ ಮಟ್ಟದ ತಪಾಸಣೆ:

ನಿಮ್ಮ ರಕ್ತಪ್ರವಾಹದಲ್ಲಿ ಇರುವ ಲಿಪಿಡ್ ಅನ್ನು ಹೋಲುವ ವಸ್ತುವಾದ ಕೊಲೆಸ್ಟ್ರಾಲ್ ವಿವಿಧ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಅತಿಯಾದ ಕೊಲೆಸ್ಟರಾಲ್ ಮಟ್ಟಗಳು ಅಪಧಮನಿಯ ಪ್ಲೇಕ್‌ನ ಶೇಖರಣೆಗೆ ಕಾರಣವಾಗಬಹುದು. ಇದು ಹೃದಯದ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ. ನಿಯಮಿತ ಕೊಲೆಸ್ಟರಾಲ್ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯದ ಬಗ್ಗೆ ನಮಗೆ ತಿಳಿಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Red Grapes Benefits: ಕಣ್ಣಿನ ಆರೋಗ್ಯ, ಅಧಿಕ ರಕ್ತದೊತ್ತಡ  ನಿಯಂತ್ರಣಕ್ಕೆ, ಕೆಂಪು ದ್ರಾಕ್ಷಿ ಉತ್ತಮ

ರಕ್ತದೊತ್ತಡದ ಪರೀಕ್ಷೆ:

ಅಧಿಕ ರಕ್ತದೊತ್ತಡ ನಿಮ್ಮ ಅಪಧಮನಿಗಳು ಮತ್ತು ಪ್ರಮುಖ ಅಂಗಗಳ ಮೇಲೆ ಹಾನಿ ಉಂಟುಮಾಡಬಹುದು. ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಗುರುತಿಸಲು ಮತ್ತು ನಿರ್ವಹಿಸಲು ನಿಯಮಿತವಾಗಿ ರಕ್ತದೊತ್ತಡದ ಮಾನಿಟರಿಂಗ್ ಕಡ್ಡಾಯವಾಗಿದೆ. ನಿಮಗೆ 30 ವರ್ಷವಾದ ನಂತರ ಆಗಾಗ ರಕ್ತದೊತ್ತಡದ ತಪಾಸಣೆ ಮಾಡಿಸಿಕೊಳ್ಳುತ್ತಾ ಇರಿ. ಮೊದಲೆಲ್ಲ ಬಿಪಿ ವಯಸ್ಸಾದವರಿಗೆ ಬರುವ ಸಮಸ್ಯೆ ಎಂಬ ಅಭಿಪ್ರಾಯವಿತ್ತು. ಆದರೆ, ಈಗ ಇದು ಎಲ್ಲ ವಯಸ್ಸಿನವರಿಗೂ ಬರುವ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ಬಿಪಿ ಜಾಸ್ತಿಯಾದಾಗಲೂ ಹೃದಯಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ.

ಮಧುಮೇಹದ ತಪಾಸಣೆ:

ಟೈಪ್ 2 ಮಧುಮೇಹ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅತ್ಯಂತ ಅಪಾಯಕಾರಿಯಾಗಿದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತವೆ. ನಿಯಮಿತ ಮಧುಮೇಹ ತಪಾಸಣೆಗಳು ಆರಂಭಿಕ ಹಂತದಲ್ಲಿ ಈ ಸಮಸ್ಯೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ