Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Health: ನಿಮ್ಮ ಹೃದಯದ ಆರೋಗ್ಯಕ್ಕೆ ದಿನಕ್ಕೆ 50 ಮೆಟ್ಟಿಲು ಹತ್ತಿ

Health Tips: ಒಂದು ದಿನದಲ್ಲಿ 50 ಮೆಟ್ಟಿಲುಗಳನ್ನು ಹತ್ತಿದ ಜನರಲ್ಲಿ ಪ್ರತಿದಿನ ಯಾವುದೇ ಮೆಟ್ಟಿಲುಗಳನ್ನು ಏರದ ಜನರಿಗೆ ಹೋಲಿಸಿದರೆ ಹೃದಯರಕ್ತನಾಳದ ಕಾಯಿಲೆಯ ಅಪಾಯ ಶೇ. 20ರಷ್ಟು ಕಡಿಮೆ ಎಂದು ಅಧ್ಯಯನ ಕಂಡುಹಿಡಿದಿದೆ.

Heart Health: ನಿಮ್ಮ ಹೃದಯದ ಆರೋಗ್ಯಕ್ಕೆ ದಿನಕ್ಕೆ 50 ಮೆಟ್ಟಿಲು ಹತ್ತಿ
ಹೃದಯImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 23, 2023 | 11:49 AM

ನಮ್ಮ ಬೇರೆ ಅಂಗಗಳಂತೆಯೇ ಹೃದಯಕ್ಕೂ ವ್ಯಾಯಾಮ ಬೇಕಾಗುತ್ತದೆ. ಜಡ ಜೀವನಶೈಲಿಯಿಂದ ಹೃದಯದ ಆರೋಗ್ಯ ಹಾಳಾಗುತ್ತದೆ. ಇದರಿಂದ ಹೃದ್ರೋಗ, ಹೃದಯಾಘಾತ, ಪಾರ್ಶ್ವವಾಯುವಿನಂತಹ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ, ಪ್ರತಿದಿನ 50 ಮೆಟ್ಟಿಲುಗಳನ್ನು ಹತ್ತುವುದರಿಂದ ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತದಂತಹ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಶೇ. 20ರಷ್ಟು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ದಿನಕ್ಕೆ 5 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದರ ಮೂಲಕ ಈ ಅಧ್ಯಯನವನ್ನು ಆರಂಭಿಸಲಾಗಿತ್ತು. ನಂತರ 50 ಮೆಟ್ಟಿಲು ಬಳಸುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಪ್ರತಿದಿನ ಮೆಟ್ಟಿಲು ಹತ್ತಿಳಿಯುವವರ ಮತ್ತು ಯಾವುದೇ ಮೆಟ್ಟಿಲುಗಳನ್ನು ಹತ್ತದವರ ನಡುವೆ ಸಮೀಕ್ಷೆ ನಡೆಸಲಾಗಿತ್ತು. ಪ್ರತಿದಿನ ಯಾವುದೇ ಮೆಟ್ಟಿಲುಗಳನ್ನು ಏರದ ಜನರಿಗೆ ಹೋಲಿಸಿದರೆ ಮೆಟ್ಟಿಲುಗಳನ್ನು ಹತ್ತಿ ಇಳಿಯುವವರ ಆರೋಗ್ಯದಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬಂದಿತು. ಮೆಟ್ಟಿಲುಗಳ ಮೇಲೆ ನಡೆಯುವುದು ಏರೋಬಿಕ್ ವ್ಯಾಯಾಮದಂತೆಯೇ ಕೆಲಸ ಮಾಡುತ್ತದೆ. ಇದರಲ್ಲಿ ದೇಹವು ಗುರುತ್ವಾಕರ್ಷಣೆಯನ್ನು ಮೇಲಕ್ಕೆ ಚಲಿಸುವಂತೆ ಮಾಡುತ್ತದೆ. ಹೀಗಾಗಿ ನಮ್ಮ ದೇಹದ ಹೆಚ್ಚಿನ ಸ್ನಾಯುಗಳು ಆ್ಯಕ್ಟಿವ್ ಆಗುತ್ತದೆ. ಮೆಟ್ಟಿಲು ಹತ್ತುವಾಗ ನಮ್ಮ ದೇಹ ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

ನಿಯಮಿತವಾಗಿ ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವು ಸೂಚಿಸುತ್ತದೆ. ಒಂದು ದಿನದಲ್ಲಿ 50 ಮೆಟ್ಟಿಲುಗಳನ್ನು ಹತ್ತಿದ ಜನರಲ್ಲಿ ಪ್ರತಿದಿನ ಯಾವುದೇ ಮೆಟ್ಟಿಲುಗಳನ್ನು ಏರದ ಜನರಿಗೆ ಹೋಲಿಸಿದರೆ ಹೃದಯರಕ್ತನಾಳದ ಕಾಯಿಲೆಯ ಅಪಾಯ ಶೇ. 20ರಷ್ಟು ಕಡಿಮೆ ಎಂದು ಅಧ್ಯಯನ ಕಂಡುಹಿಡಿದಿದೆ.

ಇದನ್ನೂ ಓದಿ: ಹೃದಯದ ಆರೋಗ್ಯಕ್ಕೆ ಸಹಕಾರಿ ಈ ಯೋಗಭಂಗಿಗಳು

ಅಧ್ಯಯನದ ಲೇಖಕರು UKBiobankನಲ್ಲಿ 4,58,860 ವಯಸ್ಕರನ್ನು ಈ ಅಧ್ಯಯನಕ್ಕೆ ಬಳಸಿಕೊಂಡು ಡೇಟಾವನ್ನು ವಿಶ್ಲೇಷಿಸಿದ್ದಾರೆ. ಅವರು ವ್ಯಕ್ತಿಗಳ ಮೆಟ್ಟಿಲು ಹತ್ತುವಿಕೆ, ಜೀವನಶೈಲಿ ಮತ್ತು ಸಾಮಾಜಿಕ ಜನಸಂಖ್ಯಾಶಾಸ್ತ್ರದ ಅಂಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬೇಸ್‌ಲೈನ್ ಡೇಟಾದಂತೆ ಸಂಗ್ರಹಿಸಿದರು. ಬಳಿಕ ಈ ಅಧ್ಯಯನ ಮಾಡಿದ್ದಾರೆ.

ಮೆಟ್ಟಿಲುಗಳನ್ನು ಹತ್ತುವುದರಿಂದ ಆರೋಗ್ಯಕ್ಕೆ ಏನು ಪ್ರಯೋಜನ?

– ನೀವು ಮೆಟ್ಟಿಲುಗಳನ್ನು ಹತ್ತಲು ಪ್ರಾರಂಭಿಸಿದಾಗ ನಿಮ್ಮ ಸ್ನಾಯುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೆಚ್ಚಿನ ಆಮ್ಲಜನಕದ ಅಗತ್ಯವಿರುತ್ತದೆ. ಈ ಬೇಡಿಕೆಯನ್ನು ಪೂರೈಸಲು ನಿಮ್ಮ ಹೃದಯದ ಬಡಿತ ಹೆಚ್ಚಾಗುತ್ತದೆ. ಹೃದಯವು ರಕ್ತವನ್ನು ಹೆಚ್ಚು ವೇಗವಾಗಿ ಪಂಪ್ ಮಾಡುತ್ತದೆ. ಇದು ಕೆಲಸ ಮಾಡುವ ಸ್ನಾಯುಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.

– ಹೃದಯದ ಸ್ನಾಯುವಿನ ವಾಲ್​ಗಳು ಪ್ರತಿ ಬಡಿತದೊಂದಿಗೆ ಹೆಚ್ಚಿನ ಪ್ರಮಾಣದ ರಕ್ತವನ್ನು ತಳ್ಳಲು ಹೆಚ್ಚು ಬಲವಾಗಿ ಸಂಕುಚಿತಗೊಳ್ಳುತ್ತವೆ. ಈ ಹೆಚ್ಚಿದ ಬಲವು ದೇಹದ ಅಂಗಾಂಶಗಳಿಗೆ ಸಾಕಷ್ಟು ರಕ್ತದ ಹರಿವನ್ನು ನೀಡಲು ಸಹಾಯ ಮಾಡುತ್ತದೆ. ನೀವು ಮೆಟ್ಟಿಲುಗಳನ್ನು ಹತ್ತಲು ಬಳಸುವ ಕಾಲಿನ ಸ್ನಾಯುಗಳಿಗೂ ರಕ್ತ ಸಂಚಾರ ಹೆಚ್ಚಾಗುತ್ತದೆ.

ಇದನ್ನೂ ಓದಿ: Heart Attack: ನವರಾತ್ರಿ ಗರ್ಭಾ ಆಚರಣೆ, 24 ಗಂಟೆಗಳಲ್ಲಿ ಹೃದಯಾಘಾತಕ್ಕೆ 10 ಸಾವು

– ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ರಕ್ತದ ಹರಿವಿನ ಹೆಚ್ಚಿದ ಬೇಡಿಕೆಗೆ ದೇಹವು ಪ್ರತಿಕ್ರಿಯಿಸುತ್ತದೆ. ವಾಸೋಡಿಲೇಷನ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ರಕ್ತದ ಹರಿವಿಗೆ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ರಕ್ತ ಸಂಚಲನೆ ಸ್ನಾಯುಗಳನ್ನು ತಲುಪಲು ಸುಲಭವಾಗುತ್ತದೆ.

– ಮೆಟ್ಟಿಲು ಹತ್ತುವುದರಿಂದ ನಿಮ್ಮ ಶ್ವಾಸಕೋಶಗಳು ಗಾಳಿಯಿಂದ ಆಮ್ಲಜನಕವನ್ನು ಹೊರತೆಗೆಯಲು ಮತ್ತು ನಿಮ್ಮ ರಕ್ತಕ್ಕೆ ವರ್ಗಾಯಿಸಲು ಹೆಚ್ಚು ಶ್ರಮಿಸುತ್ತವೆ. ಈ ಆಮ್ಲಜನಕಭರಿತವಾಗಿರುವ ರಕ್ತವನ್ನು ಹೃದಯದಿಂದ ಸ್ನಾಯುಗಳಿಗೆ ಪಂಪ್ ಮಾಡಲಾಗುತ್ತದೆ. ಅಲ್ಲಿ ದೈಹಿಕ ಚಟುವಟಿಕೆಗಾಗಿ ಶಕ್ತಿಯನ್ನು ಉತ್ಪಾದಿಸಲು ಬಳಸಲಾಗುತ್ತದೆ.

ಕೀಲು ನೋವು, ಬೆನ್ನು ನೋವು ಇರುವವರಿಗೆ ಅಥವಾ ವಯಸ್ಸಾದವರಿಗೆ ಮೆಟ್ಟಿಲುಗಳನ್ನು ಹತ್ತುವುದು ಕಷ್ಟವಾಗಬಹುದು. ಅಂಥವರು ಮನೆಯೊಳಗಾದರೂ ವಾಕ್ ಮಾಡಬೇಕು. ಒಂದೇ ಕಡೆ ಕುಳಿತಿರುವುದರಿಂದ ನಮ್ಮ ದೇಹದ ಅಂಗಗಳಿಗೆ ವ್ಯಾಯಾಮ ಸಿಗುವುದಿಲ್ಲ. ಹೀಗಾಗಿ, ವಾಕಿಂಗ್​ನಿಂದಲೂ ಕೊಂಚ ಮಟ್ಟಿಗೆ ದೇಹವನ್ನು ಆ್ಯಕ್ಟಿವ್ ಆಗಿಡಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ