Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಟ್ಟಾದರೆ ಮುಜುಗರ ಬೇಡ; ಋತುಚಕ್ರದ ಬಗ್ಗೆ ಇರುವ 3 ತಪ್ಪು ಕಲ್ಪನೆಗಳಿವು

Menstruation Myths: ಪಿರಿಯಡ್ ಕೆಲವರಿಗೆ 28 ದಿನಗಳಿಗೆ ಉಂಟಾದರೆ ಇನ್ನು ಕೆಲವರಿಗೆ 30 ದಿನ, 40 ದಿನದ ಬಳಿಕವೂ ಆಗುತ್ತದೆ. ಈ ಜೈವಿಕ ಪ್ರಕ್ರಿಯೆಯು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆಯಾದರೂ, ಅದರ ಬಗ್ಗೆ ಅನೇಕ ತಪ್ಪುಗ್ರಹಿಕೆಗಳು ಇಂದಿಗೂ ಮುಂದುವರಿದಿವೆ.

ಮುಟ್ಟಾದರೆ ಮುಜುಗರ ಬೇಡ; ಋತುಚಕ್ರದ ಬಗ್ಗೆ ಇರುವ 3 ತಪ್ಪು ಕಲ್ಪನೆಗಳಿವು
ಋತುಚಕ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on:Oct 23, 2023 | 1:22 PM

2017ರಲ್ಲಿ ವಿಶ್ವದ ಜನಸಂಖ್ಯೆಯು 7.53 ಶತಕೋಟಿ ಇತ್ತು. ಇದರಲ್ಲಿ 3.73 ಶತಕೋಟಿ ಜನರು ಮಹಿಳೆಯರಿದ್ದಾರೆ. ಈ ಮಹಿಳೆಯರಲ್ಲಿ ಋತುಚಕ್ರ ಉಂಟಾಗುತ್ತದೆ. ಮುಟ್ಟಿನ ಬಗ್ಗೆ ಮಹಿಳೆಯರು ಮಾತನಾಡಲು ಹಿಂಜರಿಯುತ್ತಾರೆ. ಆದರೆ, ನಮ್ಮ ಜಗತ್ತಿನ 7.58 ಶತಕೋಟಿ ಮಹಿಳೆಯರು ಪ್ರತಿ ತಿಂಗಳು ಈ ಋತುಚಕ್ರವನ್ನು ಅನುಭವಿಸುತ್ತಾರೆ. ತಿಂಗಳಲ್ಲಿ 4ರಿಂದ 5 ದಿನ ಈ ಮಹಿಳೆಯರಿಗೆ ಋತುಚಕ್ರ ಉಂಟಾಗುತ್ತದೆ. ಮಹಿಳೆ ಗರ್ಭ ಧರಿಸಲು, ಆಕೆಯ ಸಂತಾನೋತ್ಪತ್ತಿ ಕ್ರಿಯೆಗೆ ಈ ಋತುಚಕ್ರ ಅತ್ಯಗತ್ಯ.

ಪ್ರತಿ ತಿಂಗಳೂ ಪಿರಿಯಡ್ ಆಗುವುದು ಹೆಣ್ಣಿನ ಜೀವನದ ಒಂದು ಅವಿಭಾಜ್ಯ ಕ್ರಿಯೆ. ಈ ಸಮಯದಲ್ಲಿ ಗರ್ಭಾಶಯವು ಯೋನಿಯ ಮೂಲಕ ರಕ್ತದ ಜೊತೆಗೆ ಲೋಳೆಪೊರೆಯ ಅಂಗಾಂಶವನ್ನು ಹೊರಹಾಕುತ್ತದೆ. ಪ್ರತಿತಿಂಗಳೂ ಹೆಣ್ಣಿನಲ್ಲಿ ಈ ಕ್ರಿಯೆ ನಡೆಯುತ್ತಲೇ ಇರುತ್ತದೆ. ಪಿರಿಯಡ್ ಕೆಲವರಿಗೆ 28 ದಿನಗಳಿಗೆ ಉಂಟಾದರೆ ಇನ್ನು ಕೆಲವರಿಗೆ 30 ದಿನ, 40 ದಿನದ ಬಳಿಕವೂ ಆಗುತ್ತದೆ. ಈ ಜೈವಿಕ ಪ್ರಕ್ರಿಯೆಯು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆಯಾದರೂ, ಅದರ ಬಗ್ಗೆ ಅನೇಕ ತಪ್ಪುಗ್ರಹಿಕೆಗಳು ಇಂದಿಗೂ ಮುಂದುವರಿದಿವೆ.

ಪ್ರಪಂಚದಾದ್ಯಂತದ ಹಲವು ಸಂಸ್ಕೃತಿಗಳು ಇದ್ದರೂ ಆ ಎಲ್ಲ ಸಂಸ್ಕೃತಿಗಳಲ್ಲೂ ಋತುಚಕ್ರವನ್ನು ಅಶುದ್ಧ ಎಂದು ಪರಿಗಣಿಸುವುದು ಅಚ್ಚರಿಯ ಸಂಗತಿ. ಸಂಪ್ರದಾಯಸ್ಥರಲ್ಲಂತೂ ಋತುಚಕ್ರವಾದಾಗ ಹೆಣ್ಣು ಬೇರೆಯವರನ್ನು ಮುಟ್ಟಬಾರದು, ಬೇರೆ ವಸ್ತುಗಳನ್ನು ಮುಟ್ಟಬಾರದು, ದೇವಸ್ಥಾನಕ್ಕೆ ಹೋಗಬಾರದು, ಮನೆಯಲ್ಲೂ ದೇವರ ಕೋಣೆಗೆ ಹೋಗಬಾರದು, ತಲೆಗೆ ಸ್ನಾನ ಮಾಡಬಾರದು ಹೀಗೆ ನಾನಾ ರೀತಿಯ ಕಟ್ಟುಪಾಡುಗಳಿವೆ. ನೇಪಾಳದಲ್ಲಿ ಈ ರೀತಿಯ ಆಚರಣೆಗಳು ಈಗ ಹೆಚ್ಚಾಗಿ ಕಾನೂನುಬಾಹಿರವಾಗಿದ್ದರೂ, ಕೆಲವು ಸಮುದಾಯಗಳಲ್ಲಿ ವಿಚಿತ್ರವಾದ ಆಚರಣೆ ಮುಂದುವರೆದಿದೆ. ಇಲ್ಲಿ ಇನ್ನೂ ಋತುಚಕ್ರದ ಗುಡಿಸಲುಗಳು ಬಳಕೆಯಲ್ಲಿವೆ. ಪಿರಿಯಡ್ ಆದಾಗ ಮಹಿಳೆಯರು ಈ ಗುಡಿಸಲುಗಳಲ್ಲಿ ಪ್ರತ್ಯೇಕವಾಗಿ ವಾಸ ಮಾಡಬೇಕು. ಇದೇ ರೀತಿ ಜಗತ್ತಿನಾದ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಮುಟ್ಟಿನ ಕುರಿತಾದ ತಪ್ಪುಗ್ರಹಿಕೆಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಪಿರಿಯಡ್ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಬಾರದು:

ಮುಟ್ಟಿನ ಕುರಿತಾದ ಮುಖ್ಯವಾದ ನಂಬಿಕೆಯೆಂದರೆ ಪಿರಿಯಡ್ ಆದಾಗ ಲೈಂಗಿಕ ಕ್ರಿಯೆ ನಡೆಸಬಾರದು. ಹಾಗೇ, ಪಿರಿಯಡ್ ಆದಾಗ ಹೆಣ್ಣು ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂಬುದು. ಆದರೆ, ಈ ವಿಷಯ ಸಂಪೂರ್ಣವಾಗಿ ಸುಳ್ಳು. ಅನೇಕ ಮಹಿಳೆಯರಲ್ಲಿ ಮುಟ್ಟಿನ ಅವಧಿಯಲ್ಲಿ ಅವರ ಫರ್ಟಿಲಿಟಿ ಸಾಮರ್ಥ್ಯ ಬಹಳ ಕಡಿಮೆ ಇರುತ್ತದೆ ಎಂಬುದು ನಿಜವಾದರೂ ಇದು ಅವರು ಎಷ್ಟು ದಿನಗಳಿಗೊಮ್ಮೆ ಮುಟ್ಟಾಗುತ್ತಾರೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ.

ಇದನ್ನೂ ಓದಿ: ಋತುಚಕ್ರದ ಗ್ಯಾಸ್ಟ್ರಿಕ್​ಗೆ ಈ ಮನೆಮದ್ದುಗಳನ್ನು ಬಳಸಿ ನೋಡಿ

ಅಂಡೋತ್ಪತ್ತಿ ಹಂತದಲ್ಲಿ ಗರಿಷ್ಠ ಫಲವತ್ತತೆ ಉಂಟಾಗುತ್ತದೆ. ಹೀಗಾಗಿ, ಇದು ಗರ್ಭ ಧರಿಸಲು ಹೆಚ್ಚು ಪ್ರಸಕ್ತವಾದ ಸಮಯ. ಇದು ಸಾಮಾನ್ಯವಾಗಿ ಮುಂದಿನ ಪಿರಿಯಡ್​ ಪ್ರಾರಂಭದ ಸುಮಾರು 12ರಿಂದ 16 ದಿನಗಳಿಗೂ ಮುಂಚೆ ಸಂಭವಿಸುತ್ತದೆ. ಹೀಗಾಗಿ, ನೀವು ಮುಟ್ಟಾದ ಬಳಿಕ 1 ವಾರದ ನಂತರ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭ ಧರಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ವೈದ್ಯರು ಸೂಚಿಸುತ್ತಾರೆ. ಈ ಸಮಯದಲ್ಲಿ ಹೊಸ ಅಂಡಾಣುಗಳನ್ನು ನಿಮ್ಮ ಅಂಡಾಶಯ ರಿಲೀಸ್ ಮಾಡುತ್ತದೆ.

ಹೆಚ್ಚಿನ ಮಹಿಳೆಯರು 28 ದಿನಗಳಿಗೆ ಮತ್ತೆ ಮುಟ್ಟಾಗುತ್ತಾರೆ. ಇನ್ನು ಕೆಲವರು 21 ದಿನಗಳಿಗೆ ಮುಟ್ಟಾಗುವ ಸಾಧ್ಯತೆಗಳೂ ಇವೆ. ಹಾಗೇ, ಇದು 45 ದಿನಗಳಿಗೂ ಮುಂದೂಡಬಹುದು. ಈ ನಿಮ್ಮ ಸೈಕಲ್ ಅಥವಾ ಋತುಚಕ್ರ ಅಂಡೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ವೀರ್ಯಾಣು ಮಹಿಳೆಯ ಜನನಾಂಗದೊಳಗೆ 5 ದಿನಗಳವರೆಗೆ ಅಥವಾ ಕೆಲವು ಮೂಲಗಳ ಪ್ರಕಾರ 7 ದಿನಗಳವರೆಗೆ ಬದುಕಬಲ್ಲದು. ಈ ಅವಧಿಯಲ್ಲಿ ಅಂಡಾಣು ವೀರ್ಯಾಣುವಿನೊಂದಿಗೆ ಸೇರಿದಾಗ ಗರ್ಭ ಧರಿಸುವ ಸಾಧ್ಯತೆ ಹೆಚ್ಚು.

ಹೀಗಾಗಿ, ನಿಮ್ಮ ಪಿರಿಯಡ್​​ನಲ್ಲಿ ಅಸುರಕ್ಷಿತವಾದ ಲೈಂಗಿಕ ಕ್ರಿಯೆ ನಡೆಸಿದರೆ ವೀರ್ಯವು ಅಂಡೋತ್ಪತ್ತಿಯೊಂದಿಗೆ ಹೊಂದಿಕೆಯಾಗಲು ಮತ್ತು ಅಂಡಾಣುವನ್ನು ಫಲವತ್ತಾಗಿಸಲು ಸಾಕಷ್ಟು ಸಮಯದವರೆಗೆ ಕಾಲಹರಣ ಮಾಡುತ್ತದೆ, ಇದರ ಪರಿಣಾಮವಾಗಿ ಗರ್ಭಧಾರಣೆಯಾಗುವ ಸಾಧ್ಯತೆ ಇರುತ್ತದೆ.

ಆದರೆ, ನೀವು ಕಾಂಡೋಮ್ ಬಳಸದೆ ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಈ ಸಮಯದಲ್ಲಿ ಸಂಭವಿಸುವ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಲೈಂಗಿಕವಾಗಿ ಹರಡುವ ಸೋಂಕು (ಎಸ್‌ಟಿಐ), ಎಚ್‌ಐವಿ, ಅಥವಾ ಯೀಸ್ಟ್ ಸೋಂಕು ಹರುಡವ ಅಪಾಯ ಹೆಚ್ಚಾಗಿರುತ್ತದೆ. ಇದರಿಂದ ಪುರುಷರಿಗೂ ಸೋಂಕು ತಗುಲುತ್ತದೆ. ಆ ಕಾರಣದಿಂದ ಪಿರಿಯಡ್ ಸಮಯದಲ್ಲಿ ಲೈಂಗಿಕ ಕ್ರಿಯೆ ಮಾಡುವುದು ಒಳ್ಳೆಯದಲ್ಲ.

2. ಪಿರಿಯಡ್ಸ್​ ಉಂಟಾಗದಂತೆ ಮಾತ್ರ ತೆಗೆದುಕೊಳ್ಳುವುದು ಅಸುರಕ್ಷಿತ:

ನಿಮ್ಮ ಪಿರಿಯಡ್ಸ್​ ಅನ್ನು ದೀರ್ಘಕಾಲದವರೆಗೆ ಮುಂದೂಡಲು ಗರ್ಭನಿರೋಧಕ ಮಾತ್ರೆಗಳನ್ನು ಬಳಸುವುದು ಅಸುರಕ್ಷಿತವಾಗಿದೆ ಎಂಬುದು ಮತ್ತೊಂದು ವ್ಯಾಪಕವಾದ ತಪ್ಪು ಕಲ್ಪನೆ. ಆದರೆ, ರಾಷ್ಟ್ರೀಯ ಮಹಿಳಾ ಆರೋಗ್ಯ ನೆಟ್‌ವರ್ಕ್‌ನ ಇತ್ತೀಚಿನ ಮಾರ್ಗಸೂಚಿಗಳು ಜನನ ನಿಯಂತ್ರಣ ಮಾತ್ರೆಗಳ ಮೂಲಕ ಮುಟ್ಟನ್ನು ನಿಗ್ರಹಿಸಬಹುದಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ ಎಂದು ಹೇಳಿದೆ. ಹೆಚ್ಚಿನ ಸ್ತ್ರೀರೋಗತಜ್ಞರು ಈ ವಿಧಾನವು ಸುರಕ್ಷಿತವಾಗಿದೆ ಎಂದೇ ಹೇಳುತ್ತಾರೆ.

ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಪಪ್ಪಾಯಿ ತಿನ್ನುವುದು ಸುರಕ್ಷಿತವೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು?

ಸಂತಾನೋತ್ಪತ್ತಿಗೆ ಮಾತ್ರ ಮುಟ್ಟಿನ ಅಗತ್ಯವಿರುತ್ತದೆ. ನೀವು ಒಂದು ವಯಸ್ಸು ಮೀರಿದ ನಂತರ ಋತುಚಕ್ರದ ಅಗತ್ಯವಿರುವುದಿಲ್ಲ. ಅನೇಕ ಮಹಿಳೆಯರಿಗೆ ಮುಟ್ಟಿನ ರೋಗಲಕ್ಷಣಗಳು ತೀವ್ರವಾಗಿರುತ್ತವೆ. ವಾಂತಿ, ಜ್ವರ, ತಲೆ ಸುತ್ತುವುದು, ವಿಪರೀತ ಹೊಟ್ಟೆ ನೋವು, ಊಟ ಸೇರದಿರುವುದು, ತೀವ್ರ ರಕ್ತಸ್ರಾವ, ನಿದ್ರಾಹೀನತೆ, ಅತಿಸಾರ ಹೀಗೆ ಋತುಚಕ್ರದ ವೇಳೆ ನಾನಾ ರೀತಿಯ ದೈಹಿಕ ಸಮಸ್ಯೆಗಳನ್ನು ಅನುಭವಿಸುವವರಿದ್ದಾರೆ. ಅವರಿಗೆ ಮುಟ್ಟಾಗದಿದ್ದರೆ ಆರಾಮವೆನಿಸುತ್ತದೆ. ಅಂಥವರು ಸ್ತ್ರೀರೋಗ ತಜ್ಞರ ಬಳಿ ಚರ್ಚಿಸಿ ಮುಟ್ಟನ್ನು ಕೆಲವು ಸಮಯದವರೆಗೆ ಮುಂದೂಡಲು ಅಥವಾ ಶಾಶ್ವತವಾಗಿ ನಿಲ್ಲುವಂತೆ ಮಾಡಲು ಔಷಧಿ ಪಡೆಯಬಹುದು.

3. ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಬಾರದು:

ಮುಟ್ಟಿನ ಸಮಯದಲ್ಲಿ ಸ್ನಾನ ಮಾಡುವುದು ಕೂಡ ಅಸುರಕ್ಷಿತ ಎಂದು ಕೆಲವರು ಭಾವಿಸುತ್ತಾರೆ. ಬಿಸಿನೀರು ರಕ್ತಸ್ರಾವವನ್ನು ಪ್ರಚೋದಿಸುತ್ತದೆ, ಇದು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ನಂಬಿಕೆಯಿದೆ. ಆದರೆ, ಸತ್ಯ ಸಂಗತಿಯೆಂದರೆ, ಬಿಸಿನೀರು ರಕ್ತದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ವಾಸ್ತವವಾಗಿ ಮುಟ್ಟಿನ ಸೆಳೆತವನ್ನು ನಿವಾರಿಸಲು ಮತ್ತು ಸ್ನಾಯುವಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಮುಟ್ಟಾದಾಗ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಆರಾಮ ಸಿಗುತ್ತದೆ. ಆದರೆ, ಸ್ನಾನ ಮಾಡುವಾಗ ಸೌಮ್ಯವಾದ ಮತ್ತು ಸುಗಂಧರಹಿತ ಸೋಪ್ ಬಳಸಿ. ಮೈ ಒರೆಸುವ ಬಟ್ಟೆಗಳು ಸ್ವಚ್ಛವಾಗಿರಲಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Mon, 23 October 23

ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್