ಪ್ರೋಟೀನ್ಭರಿತ ಹೆಸರುಕಾಳನ್ನು ನಿರ್ಲಕ್ಷ್ಯ ಮಾಡಬೇಡಿ!
ಹೆಸರುಕಾಳಿನಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿರುತ್ತದೆ. ಇದು ರಕ್ತದೊತ್ತಡದ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಅತ್ಯಂತ ಸಹಾಯಕವಾಗಿದೆ. ಹೆಸರುಕಾಳನ್ನು ಮೊಳಕೆ ಬರಿಸಿ ತಿಂದರೆ ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದು.
ನಮ್ಮ ದೇಹಕ್ಕೆ ಪ್ರೋಟೀನ್ ಅತ್ಯಗತ್ಯ. ಅದರಲ್ಲೂ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವರಾದರೆ ನಿಮ್ಮ ಆಹಾರಕ್ರಮದಲ್ಲಿ ಪ್ರೋಟೀನ್ ಅನ್ನು ಹೆಚ್ಚಾಗಿ ಸೇರಿಸಿಕೊಳ್ಳಬೇಕು. ದ್ವಿದಳ ಧಾನ್ಯಗಳಲ್ಲಿ ಅತಿ ಹೆಚ್ಚು ಪ್ರೋಟೀನ್ ಮತ್ತು ಫೈಬರ್ ಅಂಶ ಇರುತ್ತದೆ. ಆ ಧಾನ್ಯಗಳಲ್ಲಿ ಹೆಸರುಕಾಳು ಕೂಡ ಒಂದು. ಹೆಸರುಕಾಳು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಇತರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ವಿವಿಧ ಆಹಾರವನ್ನು ತಯಾರಿಸಲು ಸಹ ಇದನ್ನು ಬಳಸಬಹುದು. ಹೆಸರುಕಾಳಿನ ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿವೆ.
ಪ್ರೋಟೀನ್ ಹೇರಳವಾಗಿದೆ:
ಸಸ್ಯಾಹಾರಿಗಳಿಗೆ ಹೆಸರುಕಾಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದರಿಂದ ಇಡ್ಲಿಗಳು, ಪಲ್ಯ, ಕೋಸಂಬರಿ, ಉಸ್ಲಿ ಹೀಗೆ ನಾನಾ ರೀತಿಯ ಆಹಾರ ತಯಾರಿಸಬಹುದು. ಹೆಸರುಕಾಳನ್ನು ಮೊಳಕೆ ಬರಿಸಿ ತಿಂದರೆ ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದು.
ಇದನ್ನೂ ಓದಿ: Heart Health: ನಿಮ್ಮ ಹೃದಯದ ಆರೋಗ್ಯಕ್ಕೆ ದಿನಕ್ಕೆ 50 ಮೆಟ್ಟಿಲು ಹತ್ತಿ
ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ:
ನಿಮ್ಮ ಆಹಾರದಲ್ಲಿ ಹೆಸರುಕಾಳನ್ನು ಸೇರಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟಕ್ಕೆ ಒಳ್ಳೆಯದು. ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರಬಹುದು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಹೆಸರುಕಾಳಲ್ಲಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟಕ್ಕೆ ಕೊಡುಗೆ ನೀಡುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಹೆಸರುಕಾಳಿನಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿರುತ್ತದೆ. ಇದು ರಕ್ತದೊತ್ತಡದ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಅತ್ಯಂತ ಸಹಾಯಕವಾಗಿದೆ. ಹೆಚ್ಚಿನ ಫೈಬರ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಸಹಾಯ ಮಾಡುತ್ತದೆ:
ಹೆಸರುಕಾಳನ್ನು ಇತರ ಬೀನ್ಸ್ ಮತ್ತು ದ್ವಿದಳ ಧಾನ್ಯಗಳೊಂದಿಗೆ ಬೆರೆಸಿ ಅಡುಗೆ ತಯಾರಿಸಬಹುದು. ಇದರಿಂದ ಬಹಳ ಸಮಯ ನಿಮ್ಮ ಹೊಟ್ಟೆ ತುಂಬಿದಂತಿರುತ್ತದೆ. ಇದು ನಿಮ್ಮ ಒಟ್ಟಾರೆ ಆಹಾರದಲ್ಲಿ ವಿವಿಧ ಪೋಷಕಾಂಶಗಳನ್ನು ನೀಡುತ್ತದೆ.
ಇದನ್ನೂ ಓದಿ: ಇತ್ತೀಚೆಗೆ ಯುವಕರಿಗೆ ಹೆಚ್ಚು ಹೃದಯಾಘಾತ; ಇದಕ್ಕೆ ಕಾರಣ ಏನು? ವೈದ್ಯರು ಹೇಳಿದ್ದಿಷ್ಟು
ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ:
ಹೆಸರುಕಾಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹೆಚ್ಚಿನ ಫೈಬರ್ ಅಂಶ, ಪೊಟ್ಯಾಸಿಯಮ್ ಹೆಸರುಕಾಳಿನ ಎಲ್ಲಾ ಗುಣಲಕ್ಷಣಗಳು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ