ತರಕಾರಿ ಹಸಿರಾಗಿ, ಫ್ರೆಶ್ ಆಗಿದೆ ಎಂದು ಮೋಸ ಹೋಗಬೇಡಿ; ಈ ವಿಡಿಯೋ ನೋಡಿ
ನಾವು ತಾಜಾ ಎಂದು ಕಾಣುವ ತರಕಾರಿಗಳು ಮತ್ತು ಹಣ್ಣುಗಳನ್ನು ಆಯ್ಕೆ ಮಾಡುತ್ತೇವೆ. ನಮ್ಮ ಒಟ್ಟಾರೆ ಆರೋಗ್ಯಕ್ಕೆ ಉಪಯುಕ್ತವಾದ ಅತ್ಯುತ್ತಮ ಆಹಾರವನ್ನೇ ನಾವು ಸೇವಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿರುತ್ತೇವೆ. ತರಕಾರಿಗಳು ನೋಡಲು ಫ್ರೆಶ್ ಆಗಿದ್ದರೆ ಅದನ್ನು ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ.
ತರಕಾರಿ ಎಷ್ಟು ಫ್ರೆಶ್ ಆಗಿದ್ದಾಗ ತಿನ್ನಲು ಹೆಚ್ಚು ರುಚಿಕರವಾಗಿರುತ್ತದೆ. ನಮ್ಮ ದೇಹಕ್ಕೆ ಅಗತ್ಯವಿರುವ ಉತ್ತಮ ಆರೋಗ್ಯ ಮತ್ತು ಅಗತ್ಯ ಪೋಷಣೆಗಾಗಿ ತಾಜಾ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವಂತೆ ವೈದ್ಯರು ಮತ್ತು ಪೌಷ್ಟಿಕತಜ್ಞರು ನಮಗೆ ಸಲಹೆ ನೀಡುತ್ತಾರೆ. ನಾವು ತಾಜಾ ಎಂದು ಕಾಣುವ ತರಕಾರಿಗಳು ಮತ್ತು ಹಣ್ಣುಗಳನ್ನು ಆಯ್ಕೆ ಮಾಡುತ್ತೇವೆ. ನಮ್ಮ ಒಟ್ಟಾರೆ ಆರೋಗ್ಯಕ್ಕೆ ಉಪಯುಕ್ತವಾದ ಅತ್ಯುತ್ತಮ ಆಹಾರವನ್ನೇ ನಾವು ಸೇವಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿರುತ್ತೇವೆ. ತರಕಾರಿಗಳು ನೋಡಲು ಫ್ರೆಶ್ ಆಗಿದ್ದರೆ ಅದನ್ನು ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ. ಆದರೆ, ಹೀಗೆ ತಾಜಾ ತರಕಾರಿಗಳಂತೆ ಮುಖವಾಡ ಹಾಕಿಕೊಂಡಿರುವ ತರಕಾರಿಗಳಲ್ಲಿ ಕೆಲವೊಮ್ಮೆ ವಿಪರೀತ ರಾಸಾಯನಿಕವೂ ಇರುತ್ತದೆ ಎಂಬುದು ನಿಮಗೂ ತಿಳಿದಿರಲಿ.
ಬೇಳೆಕಾಳುಗಳು, ಹಣ್ಣುಗಳು, ಧಾನ್ಯಗಳು, ಹಾಲು ಮತ್ತು ಚೀಸ್‌ನಂತಹ ಆಹಾರ ಪದಾರ್ಥಗಳ ಮಾಲಿನ್ಯ ಮತ್ತು ಕಲಬೆರಕೆ ಬಗ್ಗೆ ನಾವು ಆಗಾಗ ಸುದ್ದಿಗಳನ್ನು ಓದುತ್ತೇವೆ. ಆದರೆ, ತರಕಾರಿಗಳಲ್ಲೂ ಕಲಬೆರಕೆ ಆಗುತ್ತದೆ ಎಂಬ ವಿಷಯ ನಿಮಗೆ ಗೊತ್ತಾ? ಅದನ್ನು ನಿರೂಪಿಸುವ ವಿಡಿಯೋವೊಂದು ಇಲ್ಲಿದೆ.
A two minute real life horror story. 😱 pic.twitter.com/gngzaTT56q
— Amit Thadhani (@amitsurg) March 17, 2023
ಈ ವಿಡಿಯೋದಲ್ಲಿ ರಾಸಾಯನಿಕಗಳನ್ನು ಬಳಸಿಕೊಂಡು ತಾಜಾವಾಗಿ ಕಾಣುವ ತರಕಾರಿಗಳನ್ನು ಹೇಗೆ ಸೃಷ್ಟಿ ಮಾಡಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಒಬ್ಬ ವ್ಯಕ್ತಿಯು ಒಣ ಮತ್ತು ದಟ್ಟವಾದ ತರಕಾರಿಗಳನ್ನು ಬಕೆಟ್‌ನಲ್ಲಿರುವ ಗಾಢ ಬಣ್ಣದ ರಾಸಾಯನಿಕ ತುಂಬಿದ ನೀರಿಗೆ ಹಾಕುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಆ ತರಕಾರಿಗಳನ್ನು ಕೆಲವು ಸೆಕೆಂಡುಗಳ ಕಾಲ ಅದರಲ್ಲಿ ಅದ್ದಿದ ನಂತರ ಅವನು ಅದನ್ನು ತೆಗೆದುಕೊಂಡು ಬುಟ್ಟಿಯಲ್ಲಿಟ್ಟು ನೀರು ಒಣಗಲು ಬಿಡುತ್ತಾನೆ. ಕೆಲವು ಕ್ಷಣಗಳ ನಂತರ ಒಣ ತರಕಾರಿಗಳ ಬಣ್ಣವೇ ಬದಲಾಗಿ ತಾಜಾ ಹಸಿರು ತರಕಾರಿಯ ರೂಪ ತಳೆಯುತ್ತವೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. ತರಕಾರಿ ಬೆಳೆಯಲು ತ್ಯಾಜ್ಯ ನೀರು ಬಳಸಲಾಗುತ್ತಿದೆ: ಸಂಶೋಧನೆ
ಈ ದ್ರಾವಣಕ್ಕೆ ತಾಮ್ರದ ಸಲ್ಫೇಟ್, ರೋಡಮೈನ್ ಆಕ್ಸೈಡ್, ಮಲಾಕೈಟ್ ಗ್ರೀನ್ ಮತ್ತು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ತಾವು ಸೇವಿಸುವ ಆಹಾರದಲ್ಲಿರುವ ಹೆಚ್ಚಾಗುತ್ತಿರುವ ವಿಷದ ಬಗ್ಗೆ ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ